ಪೆರಾಜೆ, ಮಾ. 17: ಇಲ್ಲಿಯ ಯುವಕೋಟೆ ಯುವಕಮಂಡಲದ 2020-21ನೇ ಸಾಲಿನ ಅಧ್ಯಕ್ಷರಾಗಿ ಲಿಖಿನ್ ಅಡ್ಕದ ಹಾಗೂ ಕಾರ್ಯದರ್ಶಿಯಾಗಿ ಕೌಶಿಕ್ ತೊಕ್ಕುಳಿ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಸುಭಾಶ್ ಬಂಗಾರಕೋಡಿ, ಉಪಾಧ್ಯಕ್ಷರಾಗಿ ಮೋನಿಶ್ ವ್ಯಾಪಾರೆ, ಗೌರವ ಸಲಹೆಗಾರರಾಗಿ ಚಿನ್ನಪ್ಪ ಅಡ್ಕ, ಉಪ ಕಾರ್ಯದರ್ಶಿಯಾಗಿ ಚರಣ್ ರಾಜ್ ಬಂಗಾರಕೋಡಿ, ಖಜಾಂಚಿಯಾಗಿ ಶ್ರೀಕಾಂತ್ ವ್ಯಾಪರೆ, ಕ್ರೀಡಾ ಅಧ್ಯಕ್ಷರಾಗಿ ಕಿರಣ್ ಬಂಗಾರಕೋಡಿ, ಕಾರ್ಯದರ್ಶಿಯಾಗಿ ನಿಶಾನ್ ಅಡ್ಕದ, ಸಾಂಸ್ಕೃತಿಕ ಅಧ್ಯಕ್ಷರಾಗಿ ರಕ್ಷಿತ್ ಬಂಗಾರಕೋಡಿ, ಕಾರ್ಯದರ್ಶಿಯಾಗಿ ವಿನಯ್ ನಿಡ್ಯಮಲೆ ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರುಗಳಾಗಿ ಪವನ್ ವ್ಯಾಪಾರೆ, ಕೌಶಿಕ್ ಪೀಚೆಮನೆ, ವಿಖ್ಯಾತ್ ವ್ಯಾಪಾರೆ, ಭವಿತ್ ಅಡ್ಕದ, ಭಗತ್ ಅಡ್ಕದ ರೋಶನ್ ಅಡ್ಕದ, ಮೋಹನ್ ಬಂಗಾರಕೋಡಿ, ಕಿಶೋರ್ ವ್ಯಾಪಾರೆ, ರಕ್ಷಿತ್ ಅಡ್ಕ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಪೆರಾಜೆ ಕೋಟೆಶಾಲ ಸಭಾ ಭವನದಲ್ಲಿ ನಡೆದ ಮಹಾ ಸಭೆಯಲ್ಲಿ ನೂತನ ಪದಾಧಿಕಾರಿ ಗಳನ್ನು ಆಯ್ಕೆಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಲಿಖಿನ್ ಅಡ್ಕದ ವಹಿಸಿ, ಸಂಘದ ಒಂದು ವರ್ಷದ ಸಾಧನೆ ಹಾಗೂ ಮುಂದಿನ ಗುರಿ ಉದ್ದೇಶಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾಡಿದರು.

ಸಂಘದ ವಾರ್ಷಿಕ ವರದಿಯನ್ನು ಸಂಘದ ಕಾರ್ಯದರ್ಶಿ ಕೌಶಿಕ್ ತೊಕ್ಕುಳಿ ಮಂಡಿಸಿದರೆ, ವಾರ್ಷಿಕ ಲೆಕ್ಕಪತ್ರವನ್ನು ಖಜಾಂಚಿ ಶ್ರೀಕಾಂತ್ ವ್ಯಾಪಾರೆ ಮಂಡಿಸಿದರು.