ಸುಂಟಿಕೊಪ್ಪ, ಮಾ. 17: ಮನೆಯಲ್ಲಿ ಬಡತನ ಕೂಲಿ ಕೆಲಸ ಮಾಡಿದರೆ ಮಾತ್ರ 2 ಹೊತ್ತಿನ ಊಟಕ್ಕೆ ದಾರಿ, 7 ತಿಂಗಳಿಂದ ಶರೀರದ ಸ್ವಾಧೀನ ಕಳೆದುಕೊಂಡು ಪ್ರಜ್ಞಾಶೂನ್ಯ ಸ್ಥಿತಿಯಲ್ಲಿ ಹಾಸಿಗೆ ಹಿಡಿದಿರುವ ಯುವಕನೋರ್ವನ ವ್ಯಥೆಯ ಕಥೆ ಇದು. ಕೆದಕಲ್ ಗ್ರಾಮದ ನಿವಾಸಿ ಎನ್.ಸಿ. ಶಶಿ ಅವರ ಪುತ್ರ ಸತೀಶ (26) ಅವಿವಾಹಿತನಾಗಿದ್ದು, ಪೇಯಿಂಟ್ ಕೆಲಸ ಮಾಡಿಕೊಂಡು ಕುಟುಂಬದ ಬದುಕಿನ ಬಂಡಿ ಸಾಗಿಸುತ್ತಿದ್ದ.

ಏತನ್ಮದ್ಯೆ 7 ತಿಂಗಳ ಹಿಂದೆ ತನ್ನ ಮೋಟಾರ್ ಸೈಕಲ್‍ನಲ್ಲಿ ತೆರಳುತ್ತಿದ್ದಾಗ ಕೆದಕಲ್ ಅಂಚೆ ಕಚೇರಿ ಸಮೀಪ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಎದುರು ಬದಿಯಿಂದ ಮಾರುತಿ ವ್ಯಾನ್ ಅಪ್ಪಳಿಸಿದ್ದರಿಂದ ತೀವ್ರ ಗಾಯಗೊಂಡ ಸತೀಶನನ್ನು ಚಿಕಿತ್ಸೆ ನೀಡಲಾಗಿತ್ತು.

ಹೆಚ್ಚಿನ ಚಿಕಿತ್ಸೆ ನೀಡಬೇಕಾದರೆ ಬಡವರಾದ ಇವರಲ್ಲಿ ಹಣವಿಲ್ಲ. ಅಪಘಾತದಲ್ಲಿ ಸತೀಶನ ಎಡಭಾಗದ ಕೈ, ಕಾಲು, ಸೊಂಟ ಸ್ವಾದೀನ ಕಳಕೊಂಡಿದ್ದು ನೆÀನಪಿನ ಶಕ್ತಿ ಇಲ್ಲದೆ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿ ಮನೆಯ ಹಾಸಿಗೆಯಲ್ಲಿ ಯಾತನಾಮಯ ಬದುಕನ್ನು ದೂಡುತ್ತಿರುವುದು ಮನ ಕರಗಿಸುವಂತಿದೆ.

ಹೆಚ್ಚಿನ ಚಿಕಿತ್ಸೆ ನೀಡಿದರೆ ಗುಣಮುಖರಾಗಲು ಸಾಧ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸತೀಶ ಹಿಂದಿನಂತೆ ಆರೋಗ್ಯವಂತನಾಗಿ ಜೀವನ ಸಾಗಿಸಬೇಕೆಂದು ಅವನ ಕುಟುಂಬ ಸದಸ್ಯರುಗಳ ಆಶಯವಾಗಿದೆ. ಆದರೆ ಆತನಿಗೆ ಹೆಚ್ಚಿನ ಚಿಕಿತ್ಸೆ ನೀಡಿ ಗುಣಮುಖರಾಗಿಸÀಲು ಆರ್ಥಿಕ ಬಿಕ್ಕಟ್ಟನ್ನು ಕುಟುಂಬದವರು ಎದುರಿಸುತ್ತಿದ್ದಾರೆ. ಸಹೃದಯಿ ದಾನಿಗಳು ಮಾನವೀಯತೆ ನೆಲೆಯಲ್ಲಿ ಧನ ಸಹಾಯ ನೀಡಿದರೆ ಬಡ ಕುಟುಂಬದ ಈ ಯುವಕನ ಬಾಳಿಗೆ ಬೆಳಕು ಬರಬಹುದು.

ನೆರವು ನೀಡುವವರು ಸುಂಟಿಕೊಪ್ಪ ವಿಜಯ ಬ್ಯಾಂಕ್ ಖಾತೆ ಸಂಖ್ಯೆ-106401191000732 IಈSಅ ಅಔಆಇ: ಃಂಖಃ0ಗಿಎಉಂಊಂ ನೀಡಿ ಸಹಕರಿಸಬಹುದು.