ಮಡಿಕೇರಿ, ಮಾ. 17: ಸಂತ ಅಂಥೋಣಿ ಹಿರಿಯ ಪ್ರಾಥಮಿಕ ಶಾಲೆ ಪೊನ್ನಂಪೇಟೆಯಲ್ಲಿ ಜಪಾನ್ ಶೋಟಕಾನ್ ಜಿಲ್ಲಾ ಮಟ್ಟದ ಕರಾಟೆ ಶಿಬಿರ ಹಾಗೂ ಬ್ಲ್ಯಾಕ್ ಬೆಲ್ಟ್ ಮತ್ತು ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇದರಲ್ಲಿ ಸಂತ ಅಂಥೋಣಿ ಶಾಲೆ ವಿದ್ಯಾರ್ಥಿಗಳಾದ ಎನ್.ಸಿ. ಮನೀಶ್, ನಿಹಾಲ್ ನಾಣಯ್ಯ, ಅರ್ಜುನ್ ಮಹೇಂದ್ರ, ಬಿರುನಾಣಿ ಲಯನ್ಸ್ ವಿದ್ಯಾಸಂಸ್ಥೆಯ ಗ್ರಂಥ ಗಂಗಮ್ಮ, ಅಭಿನವ್, ಅನೂಪ್ ಅಯ್ಯಪ್ಪ, ತಪಸ್ಯಾ ಶಾಲೆಯ ವಿದ್ಯಾರ್ಥಿ ಮುತ್ತಣ್ಣ ಇವರುಗಳು ಬ್ಲ್ಯಾಕ್ ಬೆಲ್ಟ್ ಮತ್ತು ಪ್ರಶಸ್ತಿ ಪತ್ರ ಪಡೆದುಕೊಂಡಿದ್ದಾರೆ.

ಬಿ.ಎಸ್. ಸಂತೋಷ್‍ಕುಮಾರ್ ಇದರ ಆಯೋಜಕರಾಗಿದ್ದಾರೆ. ಕೇರಳದ ಮುಖ್ಯ ಶಿಕ್ಷಕ ಗೋಪಾಲಕೃಷ್ಣನ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಸಂತ ಅಂಥೋಣಿ ಶಾಲೆಯ ಮುಖ್ಯ ಶಿಕ್ಷಕಿ ಟ್ರೆಸ್ಸಿಪಿಂಟೋ ಆಗಮಿಸಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದರು. ಶಿಕ್ಷಕಿ ರ್ಯಾಕ್ಮಿ ಕಾರ್ಯಕ್ರಮ ನಿರೂಪಿಸಿದರು.