ಶನಿವಾರಸಂತೆ, ಮಾ. 17: ಶನಿವಾರಸಂತೆ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಕೊರೊನಾ ಮುನ್ನೆಚ್ಚರಿಕೆಯಾಗಿ ಶನಿವಾರಸಂತೆಯ ಆಶೀರ್ವಾದ್ ಮೆಡಿಕಲ್ ಶಾಪ್ ವತಿಯಿಂದ ಮಾಸ್ಕ್‍ಗಳನ್ನು ಉಚಿತವಾಗಿ ಕೊಡುಗೆ ನೀಡಿದರು. ಈ ಸಂದರ್ಭ ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ್, ಹೆಡ್‍ಕಾನ್ಸ್‍ಟೇಬಲ್ ರವಿಚಂದ್ರ, ಮಹಿಳಾ ಪೊಲೀಸರಾದ ಶಶಿ, ರಾಧ, ಉಷಾ, ಪೂರ್ಣಿಮಾ ಹಾಗೂ ರಾಧ ಇದ್ದರು.