ಮಡಿಕೇರಿ, ಮಾ. 17: ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಜಾಗೃತಿ ವಹಿಸುತ್ತಿದ್ದು; ವಿದೇಶಗಳಿಗೆ ಹೋಗಿ ಹಿಂತಿರುಗಿ ಬಂದಿರು ವವರನ್ನು ಪತ್ತೆ ಹಚ್ಚಿ ತಪಾಸಣೆ ನಡೆಸಲಾಗುತ್ತಿದೆ. ಇದುವರೆಗೆ 165 ಮಂದಿ ಮೇಲೆ ನಿಗಾವಹಿಸಿರುವದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.ವವರನ್ನು ಪತ್ತೆ ಹಚ್ಚಿ ತಪಾಸಣೆ ನಡೆಸಲಾಗುತ್ತಿದೆ. ಇದುವರೆಗೆ 165 ಮಂದಿ ಮೇಲೆ ನಿಗಾವಹಿಸಿರುವದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.13 ರಂದು ಮರು ಆದೇಶವನ್ನು ಹೊರಡಿಸಿ, ಅನುಷ್ಠಾನ ಗೊಳಿಸಲಾಗಿದೆ. ಅಲ್ಲದೆ ಜಿಲ್ಲಾಡಳಿತದಿಂದ ಮಾರ್ಚ್ 14 ರಂದು ಆದೇಶವನ್ನು ಹೊರಡಿಸಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ವಿವಿಧ ಇಲಾಖೆಗಳ ಅಧೀನದಲ್ಲಿ ಬರುವ ಎಲ್ಲಾ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರ, ಸಾರ್ವಜನಿಕರ ಭೇಟಿಯನ್ನು ತಾ. 21 ರ ವರೆಗೆ ನಿಷೇಧಿಸಿ ಆದೇಶಿಸ ಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಜಿಲ್ಲೆಯಿಂದ ವಿದೇಶಗಳಿಗೆ ಹೋಗಿ ಹಿಂತಿರುಗಿ ಬಂದಿರು ವವರನ್ನು ಪತ್ತೆ ಹಚ್ಟಿ ತಪಾಸಣೆ ಮಾಡುವ ಕಾರ್ಯವನ್ನು ಕೈಗೊಳ್ಳಲಾಗಿದೆ. (ಮೊದಲ ಪುಟದಿಂದ) ಅದರಂತೆ ಮಾರ್ಚ್ 17 ರ ಮಂಗಳವಾರ ಸಂಜೆ ವರೆಗೆ ಮಡಿಕೇರಿ ತಾಲೂಕಿನಲ್ಲಿ 72, ವೀರಾಜಪೇಟೆ ತಾಲೂಕಿನಲ್ಲಿ 41 ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 52 ಜನರನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 159 ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಅವರವರ ಮನೆಗಳಲ್ಲಿಯೇ ಸಂಪರ್ಕ ತಡೆ (ಊome ಕಿuಚಿಡಿಚಿಟಿಣiಟಿe) ಮಾಡಲಾಗಿದೆ. ಅಲ್ಲದೆ 3 ಜನ ಪ್ರವಾಸಿಗರನ್ನು ರೆಸಾರ್ಟ್, ಹೋಂ ಸ್ಟೇಗಳಲ್ಲಿ ಸಂಪರ್ಕ ತಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈವರೆಗೆ ವಿದೇಶದಿಂದ ಬಂದ 03 ವ್ಯಕ್ತಿಗಳಿಗೆ ಸೋಂಕು ತಗುಲಿರುವ ಶಂಕೆ ಇದ್ದು, ಅವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿಟ್ಟು ಉಪಚರಿಸಲಾಗುತ್ತಿದೆ.

ತಾ. 17 ರ ಮಂಗಳವಾರದಿಂದ ಕೇರಳ ರಾಜ್ಯದ ಗಡಿ ಭಾಗವಾದ ಕರಿಕೆ, ಕುಟ್ಟ ಮತ್ತು ಮಾಕುಟ್ಟ ಗಡಿಭಾಗಗಳಲ್ಲಿ ಕೇರಳ ರಾಜ್ಯದಿಂದ ಜಿಲ್ಲೆಗೆ ಬರುವವರನ್ನು 24x7 ತಪಾಸಣೆ ನಡೆಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ.

ಜೊತೆಗೆ ಪಶು ವೈದ್ಯಕೀಯ ಸೇವಾ ಇಲಾಖೆಯಿಂದಲೂ ಹಕ್ಕಿ ಜ್ವರದ ಸಂಬಂಧ ಕೇರಳದಿಂದ ಜಿಲ್ಲೆಗೆ ಬರುವ ಕೋಳಿ ಮತ್ತು ಕೋಳಿ ಉತ್ಪನ್ನಗಳನ್ನು ತಡೆಯಲು ಈ ಮೂರು ಗಡಿ ಭಾಗಗಳಲ್ಲಿ ಚೆಕ್‍ಪೆÇೀಸ್ಟ್‍ಗಳನ್ನು ತೆರೆಯಲಾಗಿದೆ ಮತ್ತು ಈ ಎರಡೂ ಇಲಾಖೆಯ ಚೆಕ್‍ಪೆÇೀಸ್ಟ್ ಕಾರ್ಯನಿರ್ವಹಿಸು ತ್ತಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೊವಿಡ್ 19: ಜಾಗೃತಿ ಅಭಿಯಾನ

ಕೊರೊನಾ ವೈರಸ್ ಬಗ್ಗೆ ಜಾಗೃತಿ ಚಟುವಟಿಕೆಗಳನ್ನು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಅರೆ ವೈದ್ಯಕೀಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಗಡಿ ಪ್ರದೇಶಗಳಲ್ಲಿ, ಗಿರಿಜನ ಹಾಡಿಗಳಲ್ಲಿ, ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಆಟೋ ನಿಲ್ದಾಣ, ಪ್ರವಾಸಿ ತಾಣಗಳಲ್ಲಿ ಮತ್ತು ಮನೆ ಮನೆ ಭೇಟಿಯಲ್ಲಿ ಭಿತ್ತಿಪತ್ರ, ಕರಪತ್ರ ಹಂಚುವುದರ ಮೂಲಕ ಜಾಗೃತಿ ಮೂಡಿಸಿದರು.

ಗಡಿ ಪ್ರದೇಶಗಳಾದ ವೀರಾಜಪೇಟೆ ತಾಲೂಕಿನ ಗಡಿ ಪ್ರದೇಶಗಳಾದ ಕುಟ್ಟ, ಮಾಕುಟ್ಟ, ತಿತಿಮತಿ, ಮಾಲ್ದಾರೆ, ವೀರಾಜಪೇಟೆ, ಗೋಣಿಕೊಪ್ಪ, ಮಡಿಕೇರಿ ತಾಲೂಕಿನ ಗಡಿ ಪ್ರದೇಶಗಳಾದ ಸಂಪಾಜೆ, ಭಾಗಮಂಡಲ ಮತ್ತು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ, ಕುಶಾಲನಗರ, ಸೋಮವಾರಪೇಟೆ, ಶನಿವಾರಸಂತೆ ಮತ್ತಿತರ ಎಲ್ಲಾ ಕಡೆಗಳಲ್ಲಿ ಅರಿವು ಕಾರ್ಯಕ್ರಮ ಜರುಗಿತು.

ಮಡಿಕೇರಿ ಸಂತೆ ರದ್ದು

ಕೊರೊನಾ ವೈರಸ್ ಹರಡುವುದನ್ನು ತಡೆಯುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಜನರು ಸೇರದಂತೆ ಸೂಚಿಸಿರುವ ಮೇರೆಗೆ ತಾ. 20 ಹಾಗೂ 27 ರಂದು ಮಡಿಕೇರಿ ನಗರ ವ್ಯಾಪ್ತಿಯಲ್ಲಿ ನಡೆಯುವ ಶುಕ್ರವಾರದ ಸಂತೆಯನ್ನು ರದ್ದುಪಡಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

ನಿಷೇಧಾಜ್ಞೆ

ಕೊಡಗು ಜಿಲ್ಲೆಯು ಪ್ರವಾಸಿ ತಾಣವೆಂದು ಗುರುತಿಸಿದ್ದು, ಪ್ರವಾಸಿಗರು ವೀಕ್ಷಣೆಗೆಂದು ಆಗಮಿಸುವುದರಿಂದ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕ ಹಿತಾಸಕ್ತಿಯಿಂದ ಸಿ.ಆರ್.ಪಿ.ಸಿ. ಕಾಯ್ದೆ 1973 ರ ಕಲಂ 144(3)ರಡಿ ದತ್ತವಾದ ಅಧಿಕಾರದಂತೆ ಮಾರ್ಚ್, 21 ರವರೆಗೆ ಜಿಲ್ಲೆಯ ಎಲ್ಲಾ ಇಲಾಖೆಗಳ ಅಧೀನಕ್ಕೆ ಒಳಪಡುವ ಎಲ್ಲಾ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಮತ್ತು ಸಾರ್ವಜನಿಕ ಭೇಟಿ, ವೀಕ್ಷಣೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.

ಔಷಧಿ ಅಂಗಡಿಗಳಿಗೆ ದಿಢೀರ್ ದಾಳಿ

ಕೊವಿಡ್ 19 ಸಂಬಂಧಿಸಿದಂತೆ 2 ಪ್ಲೇ, 3 ಪ್ಲೇ ಸರ್ಜಿಕಲ್ ಮಾಸ್ಕ್, ಎನ್ 95 ಮಾಸ್ಕ್, ಸ್ಯಾನಿಟೈಸರ್ ಇವುಗಳನ್ನು ಅಗತ್ಯ ವಸ್ತುಗಳ ಕಾಯ್ದೆ 1955 ಅಡಿ ತರಲಾಗಿದೆ. ಈ ಸಂಬಂಧ ಕೋವಿಡ್-19 ಸೋಂಕು ಮಾಸ್ಕ್ ಮತ್ತು ಸ್ಯಾನಿಟೈಸರ್‍ಗಳ ತಪಾಸಣೆಯನ್ನು ಕೈಗೊಳ್ಳಲಾಗುತ್ತಿದೆ. ಕಾನೂನು ಮಾಪನಶಾಸ್ತ್ರ ಇಲಾಖೆ ಹಾಗೂ ಆಹಾರ ಇಲಾಖೆ ಜಂಟಿಯಾಗಿ ತಂಡ ರಚಿಸಲಾಗಿದೆ.

ಆ ನಿಟ್ಟಿನಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ವಿ.ಗಜೇಂದ್ರ 9845154263 ಮತ್ತು ಆಹಾರ ಇಲಾಖೆಯ ಉಪ ನಿರ್ದೇಶಕರಾದ ಗೌರವ ಕುಮಾರ್ ಶೆಟ್ಟಿ-9886680624 ಇವರನ್ನು ನಿಯೋಜಿಸಲಾಗಿದೆ.

ಈಗಾಗಲೇ ಜಂಟಿಯಾಗಿ ಔಷಧಿ ಅಂಗಡಿಗಳಿಗೆ ದಿಡೀರ್ ದಾಳಿ ಮಾಡಿ ಮಾಸ್ಕ್‍ಗಳ ಮೇಲೆ ಕಾನೂನು ಲೀಗಲ್ ಮೆಟ್ರಲಾಜಿ ಪೊಟ್ಟಣ ಸಾಮಗ್ರಿ ನಿಯಮ 2011 ರ ಅಡಿಯಲ್ಲಿ 2 ಮೊಕದ್ದಮೆ ದಾಖಲಿಸಲಾಗಿದೆ. ಹಾಗೂ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಗ್ಲೌಸ್‍ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂತವರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ವಿ.ಗಜೇಂದ್ರ ಎಚ್ಚರಿಕೆ ನೀಡಿದ್ದಾರೆ.

ಜಾದೂ ಮೂಲಕ ಜಾಗೃತಿ

ಮಡಿಕೇರಿ: ಜಿಲ್ಲೆಯ ಮ್ಯಾಜಿಕ್ ಸ್ಟಾರ್ ವಿಕ್ರಂ ಜಾದೂಗರ್ ಅವರಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಜಾದೂ ಮೂಲಕ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಯಿತು. ನಗರದ ಜಿಲ್ಲಾಸ್ಪತ್ರೆ, ಸರಕಾರಿ ಬಸ್ ನಿಲ್ದಾಣದಲ್ಲಿ ಕೊರೊನಾ ವೈರಸ್ ಬಗ್ಗೆ ಜನಜಾಗೃತಿ ಜಾದೂ ಮಾಡಿ ನೆರೆದಿದ್ದವರ ಮನರಂಜಿಸಿದರಲ್ಲದೆ ಅರಿವು ಕೂಡ ಮೂಡಿಸಿದರು. ಅವರ ಜಾದೂವಿನಲ್ಲಿ 3 ವಿವಿಧ ಬಣ್ಣಗಳ ಹಗ್ಗಗಳನ್ನು ಬಳಸಿ ವ್ಯಕ್ತಿಯಿಂದ ವ್ಯಕ್ತಿಗೆ, ದೇಶದಿಂದ ದೇಶಕ್ಕೆ ಕೊರೊನಾ ವೈರಸ್ ಹೇಗೆ ಹರಡುತ್ತದೆ ಎಂಬುದನ್ನು ತಿಳಿಸಿಕೊಟ್ಟರು. ‘ಕೊರೊನಾ ಗೊ’ ಎಂಬ ಘೋಷಣೆಯ ಮೂಲಕ ವೈರಸ್ ಅನ್ನು ಪ್ರತಿನಿಧಿಸಿದ್ದ ಹಾಳೆಯನ್ನು ಮಾಯಗೊಳಿಸುವ ಮೂಲಕ ನೆರೆದಿದ್ದವರ ಮನಸೆಳೆದರು. ವೈರಸ್ ತಡೆಗಟ್ಟಲು ಮುಂಜಾಗೃತಾ ಕ್ರಮವಾಗಿ ಸ್ಯಾನಿಟೈಸರ್, ಮಾಸ್ಕ್ ಗಳನ್ನು ಬಳಸಲು ಈ ಸಂದರ್ಭ ತಿಳಿಸಿದರು. ನಗರದ ಬ್ಲಡ್ ಡೋನರ್ಸ್ ಸಂಘದ ಸದಸ್ಯರು ಕೂಡ ಈ ಸಂದರ್ಭ ಹಾಜರಿದ್ದು ಸಹಕಾರ ನೀಡಿದರು.

ಶುಚಿತ್ವ ಕಾಪಾಡಲು ಮನವಿ

ಸಿದ್ದಾಪುರ: ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ಶುಚಿತ್ವ ಕಾಪಾಡುವ ಉದ್ದೇಶದಿಂದ ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಗೊಳಪಡುವ ಹಾಗೂ ವಾಲ್ನೂರು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಕೋಳಿ-ಕುರಿ ಹಸಿ ಮೀನು ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಪಂಚಾಯಿತಿ ವತಿಯಿಂದ ಪಿಡಿಓ ಅನಿಲ್ ಕುಮಾರ್ ಅವರು ಹಾಗೂ ಸಿಬ್ಬಂದಿಗಳು ನೋಟೀಸ್ ಜಾರಿ ಮಾಡಿ ಎಚ್ಚರವಹಿಸುವಂತೆ ಸೂಚನೆ ನೀಡಿದ್ದಾರೆ ಮಾಂಸ ಹಾಗೂ ಮೀನುಗಳನ್ನು ತೆರೆದ ಪೆಟ್ಟಿಗೆಯಲ್ಲಿ ಇಟ್ಟು ಮಾರಾಟ ಮಾಡದಂತೆ ತಿಳಿಸಿದ್ದಾರೆ ಪಟ್ಟಣ ವ್ಯಾಪ್ತಿಯ ಎಲ್ಲ ವರ್ತಕರು ಶುಚಿತ್ವ ಕಾಪಾಡಲು ಪಂಚಾಯಿತಿಗೆ ಸಹಕಾರ ನೀಡಬೇಕೆಂದು ಪಿಡಿಒ ಮನವಿ ಮಾಡಿಕೊಂಡಿದ್ದಾರೆ.

ಸುರಕ್ಷಾ ಕ್ರಮಕ್ಕೆ ಸೂಚನೆ

ಮೂರ್ನಾಡು: ಸಾಂಕ್ರಾಮಿಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಹರಡದಂತೆ ಶುಚಿತ್ವ ಕಾಪಾಡಲು ಮುಂಜಾಗ್ರತಾ ಕ್ರಮಕೈಗೊಳ್ಳುವ ಸಲುವಾಗಿ ಕಾಂತೂರು - ಮೂರ್ನಾಡು ಪಂಚಾಯಿತಿ ಕ್ರಮ ಕೈಗೊಂಡಿದೆ.

ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಸಂತೆ ನಡೆಸಬೇಕು, ಹೆಚ್ಚು ಜನಸಂದಣಿಯಾಗದಂತೆ ಹಾಗೂ ಸಂತೆಯಲ್ಲಿ ಗುಂಪಿನಲ್ಲಿ ತೆರಳುವದನ್ನು ಸಂಪೂರ್ಣ ನಿಷೇಧಿಸಿದೆ, ತೆರೆದಿಟ್ಟ ತಿಂಡಿ, ತಿನಿಸು, ಕತ್ತರಿಸಿದ ಹಣ್ಣು ಇತ್ಯಾದಿ ಮಾರುವುದನ್ನು ಸಂಪೂರ್ಣ ನಿಷೇಧಿಸಿದೆ, ಪಾನಿಪೂರಿ ಅಥವಾ ಇತರ ಪಾಸ್ಟ್ ಫುಡ್ ತಿನಿಸು ಮಾರು ವುದನ್ನು ಸಂಪೂರ್ಣ ನಿಷೇಧಿಸಿದೆ.

ತಟ್ಟೆ, ಲೋಟ, ಸ್ಪೂನ್ ಇತ್ಯಾದಿ ಬಳಸಿ ತಿನ್ನುವ ವಸ್ತುಗಳನ್ನು ಮಾರುವುದನ್ನು ಸಂಪೂರ್ಣ ನಿಷೇಧಿಸಿದೆ, ಈಗಾಗಲೇ ವಿದೇಶಿ ಪ್ರಯಾಣ ಇತಿಹಾಸ ಹೊಂದಿರುವ ವ್ಯಕ್ತಿಗಳು ಮನೆಯಲ್ಲಿ ಇರುವುದು ಹಾಗೂ ಸಂತೆಯಲ್ಲಿ ಭಾಗವಹಿಸುವುದನ್ನು ನಿಷೇಧಿಸಿದೆ, ಮಾಂಸ ಮತ್ತು ಮೀನು ಮಳಿಗೆಗಳಲ್ಲಿ ತೆರೆದಿಟ್ಟು ಮಾರುವುದನ್ನು ಸಂಪೂರ್ಣ ನಿಷೇಧಿಸಿದೆ. ಗಾಜಿನ ಪೆಟ್ಟಿಗೆ ಅಥವಾ ಸುರಕ್ಷ ಕ್ರಮ ಅನುಸರಿಸುವುದು, ಸಂತೆಗೆ ಚಿಕ್ಕ ಮಕ್ಕಳನ್ನು ಕರೆತರುವುದನ್ನು ನಿಷೇಧಿಸಿದೆ, ಸಂತೆಯಲ್ಲಿ ಸ್ವಚ್ಛತೆ ಹಾಗೂ ಸಾಂಕ್ರಾಮಿಕ ಕಾಯಿಲೆ ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಸೂಚಿಸಿದೆ.

ಗ್ರಾಮಸಭೆ ರದ್ದು: *ಸಿದ್ದಾಪುರ : ಮುಂಜಾಗೃತಾ ಕ್ರಮವಾಗಿ ಎಲ್ಲಾ ಕಾರ್ಯಕ್ರಮ, ಸಭೆ ಸಮಾರಂಭಗಳನ್ನು ರದ್ದು ಮಾಡಲಾಗುತ್ತಿದ್ದು, ಎರಡು ಬಾರಿ ಗ್ರಾಮಸ್ಥರ ಗೈರು ಹಾಜರಿಯಿಂದ ಮುಂದೂಡಲ್ಪಟ್ಟು ತಾ. 18ರಂದು (ಇಂದಿಗೆ) ನಿಗದಿಯಾಗಿದ್ದ ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ಗ್ರಾಮಸಭೆಯನ್ನು ರದ್ದುಪಡಿಸಲಾಗಿದೆ.

ರಸ್ತೆ ಬದಿಯಲ್ಲಿ ಮಾಂಸ ತ್ಯಾಜ್ಯ: ಗ್ರಾ.ಪಂ. ವಿರುದ್ಧ ಆಕ್ರೋಶ

ಸಿದ್ದಾಪುರ :ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳು ಕೊರೊನಾ ವೈರಸ್‍ನ ಬಗ್ಗೆ ಜಾಗೃತಿ ಹಾಗೂ ಶುಚಿತ್ವದ ಬಗ್ಗೆ ಎಚ್ಚರವಹಿಸುತ್ತಿದ್ದರೆ, ಸಿದ್ದಾಪುರ ಗ್ರಾ.ಪಂ.ಯು ಮಾಂಸ ತ್ಯಾಜ್ಯಗಳನ್ನು ಸಾರ್ವಜನಿಕ ರಸ್ತೆ ಬದಿಯಲ್ಲಿ ಸುರಿದಿದ್ದು ಅಶುಚಿತ್ವ ತಾಂಡವವಾಡುತ್ತಿದೆ.

ಈ ಬಗ್ಗೆ ಗ್ರಾಮಸ್ಥರು ಪಂಚಾಯಿತಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತದ ವತಿಯಿಂದ ಎಲ್ಲಾ ಪಂಚಾಯಿತಿಗಳಿಗೆ ಆದೇಶ ನೀಡಲಾಗಿದೆ. ಆದರೆ ಶುಚಿತ್ವದ ಬಗ್ಗೆ ಆಸಕ್ತಿ ವಹಿಸಿ ಎಚ್ಚರವಹಿಸಬೇಕಾದ ಗ್ರಾ.ಪಂ.ಯು ಪಟ್ಟಣದ ಮಾಂಸ ತ್ಯಾಜ್ಯಗಳನ್ನು ವಾಹನದಲ್ಲಿ ತೆಗೆದುಕೊಂಡು ಹೋಗಿ ಸಿದ್ದಾಪುರದ ಪಾಲಿಬೆಟ್ಟ ರಸ್ತೆ ಬದಿಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿದೆ ಎಂದು ಪಾಲಿಬೆಟ್ಟ ರಸ್ತೆ ನಿವಾಸಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಸಿದ್ದಾಪುರ ಘಟಕದ ಅಧ್ಯಕ್ಷ ದೇವಣೀರ ವಜ್ರ ಬೋಪಣ್ಣ ಪಂಚಾಯಿತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು ಜಿಲ್ಲಾಡಳಿತವು ಈಗಾಗಲೇ ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಗ್ರಾ.ಪಂ.ಗಳಿಗೆ ಆದೇಶ ನೀಡಲಾಗಿದೆ. ಆದರೆ ಸಿದ್ದಾಪುರ ಗ್ರಾ.ಪಂ. ಪಿ.ಡಿ.ಓ ಹಾಗೂ ಆಡಳಿತ ಮಂಡಳಿಯವರು ಸೇರಿ ಪಾಲಿಬೆಟ್ಟಕ್ಕೆ ತೆರಳುವ ಮುಖ್ಯ ರಸ್ತೆಯ ಬದಿಯಲ್ಲಿ ತ್ಯಾಜ್ಯಗಳನ್ನು ಸುರಿಯುತ್ತಿದ್ದಾರೆ. ಇದರಿಂದಾಗಿ ರಸ್ತೆಯ ಸುತ್ತಮುತ್ತಲಿನಲ್ಲಿ ದುರ್ನಾತ ಬೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ ಸಮಯದಲ್ಲಿ ಕೋಳಿ ಮಾಂಸದ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ತಂದು ಹಾಕುತ್ತಿದ್ದು, ಇದನ್ನು ಕಾಗೆಗಳು ಹಾಗೂ ಬೀದಿ ನಾಯಿಗಳು ತಿನ್ನಲು ಬರುತ್ತಿದ್ದು, ತ್ಯಾಜ್ಯವನ್ನು ಕಚ್ಚಿಕೊಂಡು ಹೋಗಿ ರಸ್ತೆಯ ಮಧ್ಯಭಾಗದಲ್ಲಿ ಹಾಕುತ್ತಿರುವ ಕಾರಣ ಸಾರ್ವಜನಿಕರುಗಳಿಗೆ ಓಡಾಡಲು ತೊಂದರೆಯಾಗಿದೆ ಎಂದರು. ಅಲ್ಲದೇ ರೋಗ ರುಜಿನಗಳು ಹರಡುವ ಭೀತಿ ಎದುರಾಗಿದೆ. ಈ ಬಗ್ಗೆ ಸಿದ್ದಾಪುರ ಗ್ರಾ.ಪಂ. ಪಿ.ಡಿ.ಓ. ಹಾಗೂ ಅಧ್ಯಕ್ಷರಿಗೆ ಹಲವಾರು ಬಾರಿ ದೂರು ನೀಡಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಗೆ ಪಂಚಾಯಿತಿ ವಿರುದ್ಧ ಪುಕಾರು ನೀಡಲಾಗುವುದೆಂದು ಬೋಪಣ್ಣ ತಿಳಿಸಿದ್ದಾರೆ.

ವೀರಾಜಪೇಟೆ ಸಂತೆ ರದ್ದು

ಮಡಿಕೇರಿ, ಮಾ. 17: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ವೀರಾಜಪೇಟೆ ಯಲ್ಲಿ ತಾ. 18 ರಂದು (ಇಂದು) ನಡೆಯುವ ಸಂತೆಯನ್ನು ರದ್ದುಪಡಿಸಲಾಗಿದೆ ಎಂದು ವೀರಾಜಪೇಟೆ ತಹಶೀಲ್ದಾರ್ ಎಸ್. ನಂದೀಶ್ ತಿಳಿಸಿದ್ದಾರೆ.ಹೋಮ್ ಸ್ಟೇ-ರೆಸಾರ್ಟ್ ಮುಚ್ಚಲು ನೋಟೀಸ್

ಶ್ರೀಮಂಗಲ, ಮಾ. 17: ಕೊರೊನಾ ವೈರಸ್ ಹರಡುವಿಕೆ ತಡೆಗೆ ಟಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಹೋಮ್ ಸ್ಟೇ ಮತ್ತು ರೆಸಾರ್ಟ್‍ಗಳನ್ನು ತಕ್ಷಣದಿಂದ ಮುಚ್ಚಲು ನೋಟೀಸ್ ಜಾರಿ ಮಾಡಲಾಗಿದೆ.

ಹೋಮ್ ಸ್ಟೇ ಮತ್ತು ರೆಸಾರ್ಟ್‍ಗಳಿಗೆ ಪ್ರವಾಸಿಗರು ಬಂದು ಉಳಿಯುವುದರಿಂದ ಮಾರಕ ಕೊರೊನಾ ವೈರಸ್ ಸ್ಥಳೀಯವಾಗಿ ಹರಡುವ ಭೀತಿ ಇದೆ. ಮುಂದಿನ ಆದೇಶದವರೆಗೆ ಮುಚ್ಚುವಂತೆ ನೋಟೀಸ್ ಜಾರಿ ಮಾಡಲಾಗಿದೆ. ಈ ವ್ಯಾಪ್ತಿಯ 6 ಹೋಮ್ ಸ್ಟೇ ಮಾಲೀಕರಿಗೆ ಖುದ್ದಾಗಿ ಪಿ.ಡಿ.ಓ. ಕವಿತ ಮತ್ತು ಸಿಬ್ಬಂದಿ ವರ್ಗ ನೋಟೀಸ್ ನೀಡಿದೆ ಎಂದು ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್ ತಿಳಿಸಿದ್ದಾರೆ.ವ್ಯಾಪಾರ ಆರಂಭಿಸಿದ ದೃಶ್ಯ ಕಂಡುಬಂತು. ಹೆದ್ದಾರಿ ಬದಿ ಅಂಗಡಿ ತೆರೆದು ಮಾರಾಟ ಪ್ರಾರಂಭಗೊಂಡ ಬೆನ್ನಲ್ಲೇ ಕೆಲವು ಸ್ಥಳೀಯರು ಅಧಿಕಾರಿಗಳಿಗೆ ದೂರು ನೀಡಿ ತೆರವುಗೊಳಿಸಲು ಒತ್ತಾಯಿಸಿದರು. ಕೊಪ್ಪ ಗ್ರಾಮಪಂಚಾಯ್ತಿ ಅಧಿಕಾರಿ ರವಿಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮಾರಾಟ ಸ್ಥಗಿತಗೊಳಿಸಲು ಸೂಚಿಸಿದರೂ ಕೂಡ ಸೊಪ್ಪು ಹಾಕದ ಮಧ್ಯವರ್ತಿಗಳು ವ್ಯಾಪಾರ ಮುಂದುವರೆಸುವಂತೆ ಒತ್ತಾಯಿಸಿದ್ದು ಕಂಡುಬಂತು.

ಈ ಸಂದರ್ಭ ಪೊಲೀಸರ ಸಹಾಯದೊಂದಿಗೆ ಅಕ್ರಮವಾಗಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಲು ಹೊರಟ ವ್ಯಾಪಾರಿಗಳನ್ನು ತೆರವುಗೊಳಿಸಿ ದಿಢೀರ್ ಸಂತೆಗೆ ಅಂತ್ಯ ಹಾಡುವಲ್ಲಿ ಯಶಸ್ವಿಯಾದರು.

ತೆರೆ ಮಹೋತ್ಸವ ಮುಂದೂಡಿಕೆ

ಗೋಣಿಕೊಪ್ಪ ವರದಿ : ತಾ. 21 ರಿಂದ 23 ರವರೆಗೆ ನಡೆಸಲು ನಿರ್ಧರಿಸಿದ್ದ ಅರ್ವತೋಕ್ಲು ಶ್ರೀ ಮುತ್ತಪ್ಪ ದೇವರ ತೆರೆ ಮಹೋತ್ಸವವನ್ನು ಕೊರೊನಾ ಮುಂಜಾಗೃತೆಯಾಗಿ ಮುಂದೂಡಲಾಗಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಶರತ್ ಕಾಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾ. 20 ರಂದು ಮಸೀದಿಗಳಲ್ಲಿ ಪ್ರಾರ್ಥನೆ

ಮಡಿಕೇರಿ: ಸೌದಿ ಅರೇಬಿಯಾ ಸೇರಿದಂತೆ ವಿದೇಶಗಳಿಂದ ಬಂದಿರುವ ಮತ್ತು ಬರುವ ಮುಸಲ್ಮಾನ ಬಾಂಧವರಲ್ಲಿ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಎಲ್ಲಾ ಜಮಾಅತ್‍ಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಎ. ಯಾಕುಬ್ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಂಜಾಗ್ರತಾ ಕ್ರಮವಾಗಿ 14 ದಿನಗಳ ಕಾಲ ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ ಹೆಚ್ಚು ಜನರ ಸಂಪರ್ಕಕ್ಕೆ ಬಾರದಂತೆ ಹಾಗೂ ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸದಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ. ಆರೋಗ್ಯದಲ್ಲಿ ಯಾವುದೇ ಏರುಪೇರುಗಳುಂಟಾದರೂ ಸ್ಥಳೀಯ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಬೇಕು ಅಥವಾ 104 ಸಂಖ್ಯೆಗೆ ಕರೆ ಮಾಡಬೇಕೆಂದು ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ವಕ್ಫ್ ಸಮಿತಿಯ ಎಲ್ಲಾ ಸದಸ್ಯರುಗಳಿಗೆ ಹಾಗೂ ಜಿಲ್ಲೆಯ ಎಲ್ಲಾ ಜಮಾಅತ್‍ಗಳಿಗೆ ಮಾಹಿತಿಯನ್ನು ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೊರೊನಾ ಸೋಂಕು ಹರಡದಂತೆ ಮತ್ತು ದೇಶದ ಜನರ ಆರೋಗ್ಯವನ್ನು ಕಾಪಾಡುವಂತೆ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ತಾ. 20 ರಂದು ವಿಶೇಷ ಪ್ರಾರ್ಥನೆ ಸಲ್ಲಿಸಲು ಜಮಾಅತ್‍ಗಳಿಗೆ ವಕ್ಫ್ ಸಮಿತಿ ಮೂಲಕ ಸೂಚನೆ ನೀಡಲಾಗಿದೆ ಎಂದು ಯಾಕುಬ್ ಮಾಹಿತಿ ನೀಡಿದ್ದಾರೆ.

ವಾರ್ಷಿಕೋತ್ಸವ ಮುಂದೂಡಿಕೆ

ಸಿದ್ದಾಪುರ: ಇತಿಹಾಸ ಪ್ರಸಿದ್ಧ ನೆಲ್ಲಿಹುದಿಕೇರಿಯ ಶ್ರೀ ಸತ್ಯನಾರಾಯಣ ದೇವಾಲಯದ ವಾರ್ಷಿಕೋತ್ಸವವನ್ನು ಮುಂದೂಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ನೆಲ್ಲಿಹುದಿಕೇರಿಯ ಶ್ರೀ ಸತ್ಯನಾರಾಯಣ ದೇವಾಲಯದ ವಾರ್ಷಿಕ ಉತ್ಸವವನ್ನು ತಾ. 19 ರಿಂದ 21 ರವರೆಗೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಕೊರೊನಾ ವೈರಸ್ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲಿ ಕಟ್ಟೆಚ್ಚರವಿರು ವುದರಿಂದ ಮುಂದಿನ ಆದೇಶ ಬರುವವರೆಗೂ ದೇವಾಲಯದ ವಾರ್ಷಿಕೋತ್ಸವ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ ಎಂದು ಶ್ರೀ ಸತ್ಯನಾರಾಯಣ ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.

ಉರೂಸ್ ಮುಂದೂಡಿಕೆ

ಚೆಟ್ಟಳ್ಳಿ: ಕೊಂಡಂಗೇರಿ ಇತಿಹಾಸ ಪ್ರಸಿದ್ಧ ಅಸ್ಸಯ್ಯಿದ್ ಅಬ್ದುಲ್ಲಾಹಿ ಸಖಾಪ್ ಅಲ್ ಹಳ್ರಮಿ ಅವರ ಹೆಸರಿನಲ್ಲಿ ತಾ. 20 ರಿಂದ 27 ರವರೆಗೆ ನಡೆಯಬೇಕಿದ್ದ ಮಖಾಂ ಉರೂಸ್ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಕೊರೊನಾ ವೈರಸ್ ಸೋಂಕಿನ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತದ ಮನವಿ ಮೇರೆಗೆ ಮುಂದೂಡಲಾಗಿದೆ ಎಂದು ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಕೆ. ಯೂಸುಫ್ ಹಾಜಿ ತಿಳಿಸಿದ್ದಾರೆ.