ಸೋಮವಾರಪೇಟೆ, ಮಾ.16: ಮಾರಕ ಕೊರೊನಾ ಸೋಂಕು ಭೀತಿಯ ಹಿನ್ನೆಲೆ ನಿರ್ಬಂಧ ವಿಧಿಸಿದ್ದರೂ ಸಹ ಸೋಮವಾರ ದಂದು ಸೋಮವಾರಪೇಟೆಯಲ್ಲಿ ಸಂತೆ ನಡೆಯಿತು. ವಾರದ ಸಂತೆಯನ್ನು ರದ್ದುಪಡಿಸಿ ತಾಲೂಕು ತಹಶೀಲ್ದಾರ್ ಆದೇಶ ಹೊರಡಿಸಿ ದ್ದರೂ ಸಹ ವ್ಯಾಪಾರಿಗಳು ಸಂತೆಯಲ್ಲಿ ದಿನಸಿ ಹಾಗೂ ತರಕಾರಿಗಳನ್ನು ಮಾರಾಟ ಮಾಡಿದರು.

ಕೊರೊನಾ ರೋಗ ಭೀತಿಯ ಹಿನ್ನೆಲೆ ಸೋಮವಾರಪೇಟೆಯ ಸಂತೆಯನ್ನು ರದ್ದುಗೊಳಿಸಿ ಭಾನುವಾರ ಬೆಳಗ್ಗೆ ತಹಶೀಲ್ದಾರ್ ಗೋವಿಂದರಾಜು ಅವರು ಆದೇಶ ಹೊರಡಿಸಿದ್ದರು. ಆದರೆ ಈ ಆದೇಶ ಎಲ್ಲೆಡೆ ವ್ಯಾಪಕವಾಗಿ ಪ್ರಚಾರವಾಗುವ ಮೊದಲೇ ಹಲವಷ್ಟು ವ್ಯಾಪಾರಿಗಳು ತರಕಾರಿ, ದಿನಸಿ ಸೇರಿದಂತೆ ಇನ್ನಿತರ ಮಾರಾಟ ಮಾಡಿದರು.

ಕೊರೊನಾ ರೋಗ ಭೀತಿಯ ಹಿನ್ನೆಲೆ ಸೋಮವಾರಪೇಟೆಯ ಸಂತೆಯನ್ನು ರದ್ದುಗೊಳಿಸಿ ಭಾನುವಾರ ಬೆಳಗ್ಗೆ ತಹಶೀಲ್ದಾರ್ ಗೋವಿಂದರಾಜು ಅವರು ಆದೇಶ ಹೊರಡಿಸಿದ್ದರು. ಆದರೆ ಈ ಆದೇಶ ಎಲ್ಲೆಡೆ ವ್ಯಾಪಕವಾಗಿ ಪ್ರಚಾರವಾಗುವ ಮೊದಲೇ ಹಲವಷ್ಟು ವ್ಯಾಪಾರಿಗಳು ತರಕಾರಿ, ದಿನಸಿ ಸೇರಿದಂತೆ ಇನ್ನಿತರ ಗಾಜಿನ ಬಾಕ್ಸ್‍ನೊಳಗಿಟ್ಟು ವ್ಯಾಪಾರ ಮಾಡುತ್ತಿದ್ದರು. ಇದಕ್ಕೆ ಪ.ಪಂ.ನಿಂದ ಕಡಿವಾಣ ಹಾಕಲಾಗಿದ್ದು, ಗ್ರಾಹಕರು ಇಡೀ ಹಣ್ಣನ್ನು ಖರೀದಿಸಬೇಕಾ ಯಿತು. ಮೀನು, ಮಾಂಸ ಮಾರಾಟವನ್ನು ಸ್ಥಗಿತಗೊಳಿಸುವಂತೆ ಪ.ಪಂ.ನಿಂದ ಮೌಖಿಕ ಸೂಚನೆ ನೀಡಲಾಗಿತ್ತು. ಆದರೆ ವರ್ತಕರು ಬೆಳಗ್ಗೆಯೇ ಮಾಂಸವನ್ನು ಮಾರಾಟಕ್ಕೆ ಸಿದ್ದಪಡಿಸಿದ್ದರಿಂದ ಅನಿವಾರ್ಯವಾಗಿ ಮಾರಾಟ ಮಾಡಬೇಕಾಯಿತು. ಕೋಳಿ, ಕುರಿ ಮಾಂಸಕ್ಕಿಂತ ಮೀನಿಗೆ ಹೆಚ್ಚಿನ ಬೇಡಿಕೆ ಇದ್ದುದು ಕಂಡುಬಂತು.

ಸಂತೆಯ ಬಗ್ಗೆ ಕೊನೆಯ ಸಮಯದಲ್ಲಿ ಆದೇಶ ಹೊರ ಬಂದುದರಿಂದ ಹೆಚ್ಚಿನ ಮಂದಿಗೆ ಮಾಹಿತಿ ರವಾನೆಯಾಗದೇ ಸಮಸ್ಯೆಯಾಯಿತು. ಹೊರಭಾಗದಿಂದ ನಿನ್ನೆ ಮಧ್ಯಾಹ್ನದ ವೇಳೆಗಾಗಲೇ ಸಾಕಷ್ಟು ವ್ಯಾಪಾರಸ್ಥರು ಸಂತೆ ಆವರಣಕ್ಕೆ ಬಂದಿದ್ದರು. ಇದರೊಂದಿಗೆ ಗ್ರಾಮೀಣ ಭಾಗದಿಂದಲೂ ತರಕಾರಿಗಳನ್ನು ತಂದು ಸಂತೆಯಲ್ಲಿ ಜೋಡಿಸಿಡಲಾಗಿತ್ತು.

ಇದರಿಂದಾಗಿ ಸರ್ಕಾರದ ಆದೇಶಕ್ಕೆ ತಲೆಕೆಡಿಸಿಕೊಳ್ಳದೇ ಬೆಳಗ್ಗೆಯೇ ವರ್ತಕರು ವ್ಯಾಪಾರದಲ್ಲಿ ತೊಡಗಿದ್ದರು. ಪಂಚಾಯಿತಿ ಸಿಬ್ಬಂದಿಯೋರ್ವರು ಬೆಳಗ್ಗೆಯೇ ಸಂತೆಗೆ ಆಗಮಿಸಿ ವರ್ತಕರಿಗೆ ಸಂತೆ ರದ್ದು ಮಾಡುವಂತೆ ಸೂಚಿಸುತ್ತಿದ್ದರು. ಈ ಮಧ್ಯೆ ಅಧಿಕಾರಿಗಳು ಸಂತೆ ನಡೆಸಲು ಅನುವು ಮಾಡಿಕೊಟ್ಟರು ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ವರ್ತಕರಿಗೆ ಸಮಸ್ಯೆಯಾಗ ಬಾರದೆಂದು ಮಾನವೀಯತೆ ದೃಷ್ಟಿಯಿಂದ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ ಎಂದು ಪ.ಪಂ. ಮುಖ್ಯಾಧಿಕಾರಿ ರಮೇಶ್ ಅಭಿಪ್ರಾಯಿಸಿದ್ದಾರೆ.

ಒಟ್ಟಾರೆ ಸಂತೆಯನ್ನು ರದ್ದುಗೊಳಿಸಿ ತಾಲೂಕು ತಹಶೀಲ್ದಾರ್ ಆದೇಶ ನೀಡಿದ್ದರೂ ಸಹ ಸೋಮ ವಾರಪೇಟೆಯಲ್ಲಿ ಸಂತೆ ನಡೆದು, ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಖರೀದಿಸಿದರು.

ನಾಪೋಕ್ಲು

ಕೊರೊನಾ ವೈರಸ್ ಮುಂಜಾಗ್ರತೆ ಹಿನ್ನೆಲೆಯಲ್ಲಿ ನಾಪೋಕ್ಲು ಸಂತೆಯನ್ನು ಇಂದು ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ನಡೆಸಲು ಅವಕಾಶ ನೀಡಲಾಗಿತ್ತು.

ಮಧ್ಯಾಹ್ನದ 1 ಗಂಟೆಯ ಗಡುವು ಮುಗಿಯುತ್ತಿದ್ದರೂ, ಖರೀದಿ, ಮಾರಾಟ ಮುಗಿಯದ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಯವರೆಗೂ ಮಾರುಕಟ್ಟೆ ತೆರೆದೇ ಇತ್ತು. ಬಳಿಕ ಬ್ಯಾರಿಕೇಡ್‍ಗಳನ್ನು ಬಳಸಿ ಸಂತೆಯನ್ನು ಸ್ಥಗಿತಗೊಳಿಸಲಾಯಿತು.