ಗೋಣಿಕೊಪ್ಪ ವರದಿ, ಮಾ. 16: ಕುಟ್ಟಂದಿ ಗ್ರಾಮದ ಕುಂದಚ್ಚಪ್ಪ ಈಶ್ವರ ದೇವರ ಹಬ್ಬ ಭಕ್ತಿಭಾವದಿಂದ ಮೂರು ದಿನ ನಡೆಯಿತು.

ಶುಕ್ರವಾರ ರಾತ್ರಿ ಪೊಲವ ತೆರೆ, ಕುಕ್ಕೆಮುಡಿ, ಕುದುರೆ ಹಬ್ಬ, ಕೊಂಡ ಹಾರುವ ಆಚರಣೆ ನಡೆಯಿತು.

ಶನಿವಾರ ದುಡಿಕೊಟ್ಟ್ ಪಾಟ್, ಎತ್ತ್ ಪೊರೋಟ, ತೆಂಗಿನಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ, ಭಾನುವಾರ ಭಂಡಾರ ತೆಗೆಯುವ ಮೂಲಕ ಹಬ್ಬ ಸಂಪನ್ನಗೊಂಡಿತು. ಸುತ್ತಲಿನ ಗ್ರಾಮದ ನೂರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು. ಹಬ್ಬ ಪ್ರಯುಕ್ತ ದೇವಸ್ಥಾನವನ್ನು ಹೂವಿನಿಂದ ಶೃಂಗರಿಸಲಾಗಿತ್ತು. ಬಾಳೆ, ಹಸಿರು ತೋರಣದಿಂದ ಕಂಗೊಳಿಸುತಿತ್ತು.