ಗೋಣಿಕೊಪ್ಪ ವರದಿ, ಮಾ. 16: ಜೆನ್ ಶೀಟಾರಿಯೋ ರ್ಯು ಕರಾಟೆ ಸ್ಕೂಲ್ ವತಿಯಿಂದ ಇತ್ತೀಚೆಗೆ ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಇಂಟರ್ ದೋಜೋ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಶ್ರೀಮಂಗಲ ಜೆಸಿ ಶಾಲೆಗೆ 21 ಪದಕ ಲಬಿಸಿದೆ. 5 ಚಿನ್ನ, ತಲಾ 8 ಸಿಲ್ವರ್ ಹಾಗೂ ಕಂಚಿನ ಪದಕ ದೊರೆಯಿತು. ಪ್ರಜ್ವಲ್ ಪೂವಣ್ಣ, ಸಿಂಚನ್, ಹಿತನ್ ನಾಚಪ್ಪ, ಚಿರಾಯು ಚಂಗಪ್ಪ, ಪ್ರತೀಕ್ ಪೊನ್ನಪ್ಪ, ದುಶ್ಯಂತ್, ರಕ್ಷಿತ್, ನಾಣಯ್ಯ, ದೇವಯ್ಯ, ಪ್ರತ್ವಿ ಪೊನ್ನಣ್ಣ, ಸ್ಮರಣ್ ಬೆಳ್ಯಪ್ಪ, ತಶ್ವಿನ್, ಚಂಗಪ್ಪ, ಮಹಂತ್ ವಿದ್ಯಾರ್ಥಿಗಳು ಸ್ಪರ್ಧಿಸಿ, ಪದಕ ಪಡೆದರು.