ಗೋಣಿಕೊಪ್ಪ, ಮಾ. 16: ಹರಿಯಾಣ ರಾಜ್ಯದ ರೋತಕ್‍ನ ಮಹರ್ಷಿ ದಯಾನಂದ್ ವಿಶ್ವವಿದ್ಯಾಲಯದಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಫ್ಲೋರ್ ಬಾಲ್ ಪಂದ್ಯಾವಳಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಫ್ಲೋರ್ ಬಾಲ್ ತಂಡ ಮೂರನೇ ಸ್ಥಾನದೊಂದಿಗೆ ಕಂಚಿನ ಪದಕ ಪಡೆದುಕೊಂಡಿದೆ.
ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಫ್ಲೋರ್ ಬಾಲ್ ಆಟಗಾರರಾದ ಎಂ.ಪಿ. ಉತ್ತಯ್ಯ, ಎಂ.ಡಿ. ದರ್ಶನ್, ಎ.ಎಂ. ಹೇಮಂತ್, ಪಿ.ಕೆ. ಕಾರ್ಲ್‍ಕಾರ್ಯಪ್ಪ, ಪಿ.ಎ. ಬೆಳ್ಳಿಯಪ್ಪ, ಕೆ.ಕೆ. ಬೋಪಣ್ಣ, ಟಿ.ಆರ್. ಜೋಶಿತ್, ಪಿ.ಟಿ. ಬೋಪಣ್ಣ, ಎಂ.ಕೆ. ಹೇಮಂತ್, ಎಚ್.ಎಸ್. ಹರ್ಷಿತ್, ಎಂ.ಎಂ. ಹನೀಶ್ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಮಲ್ಲಮಾಡ ಟಿ. ಸಂತೋಷ್ ಪಾಲ್ಗೊಂಡಿದ್ದರು.