ಕುಶಾಲನಗರ, ಮಾ 16: ಕುಶಾಲನಗರದ ಬಿ.ಕೆ.ಮಂಜುಭಾರ್ಗವಿ ಅವರಿಗೆ ಬೆಂಗಳೂರಿನ ಚೈತನ್ಯ ಆಟ್ರ್ಸ್ ಮತ್ತು ಕಲ್ಚರಲ್ ಅಕಾಡೆಮಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿದೆ.

ಬೆಂಗಳೂರಿನ ಉದಯಭಾನು ಕಲಾಸಂಘ ವೇದಿಕೆಯಲ್ಲಿ ಚೈತನ್ಯ ಆಟ್ರ್ಸ್ ಮತ್ತು ಕಲ್ಚರಲ್ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಮಟ್ಟದ ಕಲಾಪ್ರತಿಭೋತ್ಸವ ಭರತನಾಟ್ಯ ಕಾರ್ಯಕ್ರಮದಲ್ಲಿ ಉತ್ತಮ ಪ್ರದರ್ಶನ ನೀಡಿದ ನೃತ್ಯಗುರು ವಿದೂಷಿ ಬಿ.ಕೆ.ಮಂಜುಭಾರ್ಗವಿ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಕ್ಕಳಿಗೆ ನಾಟ್ಯ ಹಾಗೂ ಸಂಗೀತ ಅಭ್ಯಾಸವನ್ನು ಹೇಳಿಕೊಡುತ್ತಿರುವ ಭಾರ್ಗವಿಗೆ ಗುರುರತ್ನ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು. ಮಂಜುಭಾರ್ಗವಿ ಕುಶಾಲನಗರದ ನಾದಾಂತ ನಾಟ್ಯಮಯೂರಿ ನೃತ್ಯಾಲಯದ ಕೇಂದ್ರದ ಸಂಸ್ಥಾಪಕಿಯಾಗಿದ್ದಾರೆ.