ಮಡಿಕೇರಿ, ಮಾ. 16: ಕೊಡಗು ಹಾಗೂ ಹಾಸನ ಜಿಲ್ಲೆಯೊಂದಿಗೆ ಬೆಂಗಳೂರಿನಲ್ಲಿಯೂ ದುಷ್ಕøತ್ಯಗಳನ್ನು ಎಸಗಿರುವ ಸಂಬಂಧ; ಶನಿವಾರಸಂತೆ ಪೊಲೀಸರು ಓರ್ವ ಬ್ಯಾಂಕ್ ಜವಾನನ ಸಹಿತ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮುಖಾಂತರ 8 ಪ್ರಕರಣಗಳನ್ನು ಬೇಧಿಸಿದ್ದು; ರೂ. 1.80 ಲಕ್ಷದ ಚಿನ್ನಾಭರಣ; ರೂ. 27 ಸಾವಿರ ನಗದು, ರೂ. 3 ಸಾವಿರದ ಬೆಳ್ಳಿ ಆಭರಣ ಸಹಿತ ದುಷ್ಕøತ್ಯಗಳಿಗೆ ಬಳಸುತ್ತಿದ್ದ ಒಂದು ಮೊಬೈಲ್, ಸ್ಕ್ರೂಡ್ರೈವರ್ ಇತ್ಯಾದಿ ವಶಪಡಿಸಿ ಕೊಂಡಿದ್ದಾರೆ.ಬಂಧಿತರಲ್ಲಿ ಒಬ್ಬಾತ ಸೋಮವಾರಪೇಟೆ ಶಾಖೆಯ ಕಾರ್ಪೋರೇಷನ್ ಬ್ಯಾಂಕ್ ಜವಾನ ನಾಗಿದ್ದು; ಆರೋಪಿ ಗಣೇಶ್ ಪ್ರಸಾದ್ (28) ಅಲ್ಲಿನ ರೇಂಜರ್ ಬ್ಲಾಕ್ ನಿವಾಸಿ ಮುರುಗೇಶ್ ಪುತ್ರ ಎಂದು ತನಿಖೆಯಿಂದ ಗೊತ್ತಾಗಿದೆ. ಈ ವಿಷಯವನ್ನು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ತಮ್ಮ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಇದುವರೆಗೆ 34 ಕಳ್ಳತನದಲ್ಲಿ ಮೊಕದ್ದಮೆ ಎದುರಿಸುತ್ತಿರುವ ಪ್ರಮುಖ ಆರೋಪಿ ಕೊಡ್ಲಿಪೇಟೆ ಹೋಬಳಿ ಹಂಡ್ಲಿ ಸಮೀಪದ ಕಣಗಲ್ ನಾಕಲಗೂಡು ನಿವಾಸಿ ಕೆ.ಎನ್. ಸಣ್ಣಪ್ಪ ಅಲಿಯಾಸ್ ಡೀಲಾಕ್ಷ (45) ಎಂದು ಪೊಲೀಸರು ಬಹಿರಂಗಗೊಳಿಸಿದ್ದಾರೆ. ಈತ ಅಲ್ಲಿನ ನಿವಾಸಿ ನಾಗಯ್ಯ ಎಂಬವರ ಪುತ್ರನಾಗಿದ್ದು; ಗ್ರಾಮಸ್ಥರಿಗೆ ಮಧು ಎಂದು ಪರಿಚಿತನಿದ್ದಾನೆ.ಈತ ಇದುವರೆಗೆ ಬೆಂಗಳೂರು, ಯಸಳೂರು, ಸಕಲೇಶಪುರ, ಶನಿವಾರಸಂತೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 34 ಕಳ್ಳತನದ ಆರೋಪ ಎದುರಿಸುತ್ತಿದ್ದಾನೆ. ಈ ಹಿಂದೆ ಶನಿವಾರಸಂತೆ ಠಾಣಾ ವ್ಯಾಪ್ತಿಯ 9 ಕಳವು ಪ್ರಕರಣಗಳಲ್ಲಿ ಸೋಮವಾರ ಪೇಟೆÀ ನ್ಯಾಯಾಲಯ ಸಣ್ಣಪ್ಪನಿಗೆ ಶಿಕ್ಷೆ ವಿಧಿಸಿರುವದು ದೃಢಪಟ್ಟಿದೆ. ಸಣ್ಣಪ್ಪ ಶನಿವಾರಸಂತೆ ಠಾಣೆಯಲ್ಲಿ 13 ಪ್ರಕರಣ ಎದುರಿಸುತ್ತಿದ್ದು; ಇದೀಗ 8 ಪ್ರಕರಣ ಬೇಧಿಸಲ್ಪಟ್ಟಿದೆ.
ಮೂರನೆಯ ಆರೋಪಿ ಗಣೇಶ್ಕುಮಾರ್ ಆರೋಪಿ ಸಣ್ಣಪ್ಪ ಕಳ್ಳತನ ಮಾಡಿ ತರುತ್ತಿದ್ದ ವಸ್ತುಗಳನ್ನು ಪಡೆದುಕೊಂಡು; ಅವುಗಳನ್ನು ಖರೀದಿಸಿ ಹಣ ನೀಡುತ್ತಿದ್ದುದಾಗಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇನ್ನೋರ್ವ
(ಮೊದಲ ಪುಟದಿಂದ) ಆರೋಪಿಯು ಅವರೆದಾಳು ಗ್ರಾಮದ ಕಾರ್ಮಿಕ ಮುದ್ದ ಎಂಬವರ ಪುತ್ರ ಕುಶಾಲ್ (47) ಎಂದು ಗೊತ್ತಾಗಿದೆ. ಈತ ಪ್ರಮುಖ ಆರೋಪಿಯ ದುಷ್ಕøತ್ಯದಲ್ಲಿ ಸಹಾಯ ಮಾಡಿರುವದು ತನಿಖೆಯಿಂದ ಖಾತರಿಯಾಗಿದೆ.,
ಇನ್ನಷ್ಟು ತನಿಖೆ : ಪ್ರಮುಖ ಆರೋಪಿಯು ನಿರಂತರ ದುಷ್ಕøತ್ಯಗಳನ್ನು ಎಸಗುವದರೊಂದಿಗೆ ಪೊಲೀಸ್ ಇಲಾಖೆಯ ಒಂದಿಬ್ಬರೊಂದಿಗೆ ನಂಟು ಬೆಸೆದುಕೊಂಡಿರುವ ಆರೋಪವಿದ್ದು; ಈ ಸಂಬಂಧವೂ ತನಿಖೆ ನಡೆಸಲಾಗುವದು ಎಂದು ಗೋಷ್ಠಿಯಲ್ಲಿ ಎಸ್ಪಿ; ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಅಲ್ಲದೆ ಅನೇಕ ದುಷ್ಕøತ್ಯಗಳ ಹಿನ್ನೆಲೆಯೊಂದಿಗೆ; ಮನೆಗಳಲ್ಲಿ ಬೀಗ ಹಾಕಿ ತೆರಳಿರುವ ಮಾಲೀಕರುಗಳ ಚಲನವಲನ ಗಮನಿಸಿ ಇಂತಹ ಕೃತ್ಯವನ್ನು ಸಣ್ಣಪ್ಪ ಎಸಗಿರುವದು ತನಿಖೆಯಿಂದ ದೃಢಪಟ್ಟಿದ್ದು; ಮೊಕದ್ದಮೆ ಸಂಖ್ಯೆ 35/2020ರ ಪ್ರಕರಣದಿಂದ ಆರೋಪಿಗಳನ್ನು ವೈಜ್ಞಾನಿಕ ರೀತಿಯ ತನಿಖೆಯಿಂದ ಬಂಧಿಸಲು ಸಾಧ್ಯವಾಯಿತು ಎಂಬದಾಗಿ ಸುಳಿವು ನೀಡಿದರು.
ಸದರಿ ಪ್ರಕರಣವನ್ನು ಎಸ್ಪಿ ಡಾ. ಸುಮನ್ ಡಿ.ಪಿ. ಹಾಗೂ ಡಿವೈಎಸ್ಪಿ ಹೆಚ್.ಎಂ. ಶೈಲೇಂದ್ರ, ಮಾರ್ಗದರ್ಶನದಲ್ಲಿ ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇಗೌಡ, ಕುಶಾಲನಗರ ವೃತ್ತ ನಿರೀಕ್ಷಕ ಎಂ. ಮಹೇಶ್ ನೇತೃತ್ವದಲ್ಲಿ ಶನಿವಾರಸಂತೆ ಪೊಲೀಸ್ ಉಪನಿರೀಕ್ಷಕ ಕೃಷ್ಣ ನಾಯಕ್, ಸಿಬ್ಬಂದಿಯವರಾದ ಎಂ.ಎಸ್. ಬೋಪಣ್ಣ, ಎಸ್.ಸಿ. ಲೋಕೇಶ್, ಬಿ.ಡಿ. ಮುರಳಿ, ವಿನಯ್ಕುಮಾರ್, ಕುಶಾಲನಗರ ಉಪ ವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಎಂ.ಎ. ಗೋಪಾಲ್, ಬಿ.ಎಸ್. ದಯಾನಂದ, ಟಿ.ಎಸ್. ಸಜಿ, ಸಿಪಿಐ ಕಚೇರಿಯ ಸಿಬ್ಬಂದಿ ಅನಂತಕುಮಾರ್, ಮಂಜುನಾಥ್ ಮತ್ತು ಕುಮಾರಸ್ವಾಮಿ, ಕೊಡಗು ಜಿಲ್ಲಾ ಬೆರಳು ಮುದ್ರಾ ಘಟಕದ ಸಂತೋಷ್, ಮಡಿಕೇರಿ ಸಿಡಿಆರ್ ಸೆಲ್ನ ಸಿಬ್ಬಂದಿಗಳಾದ ರಾಜೇಶ್ ಮತ್ತು ಗಿರೀಶ್ ಭೇದಿಸಿದ್ದಾರೆ ಎಂದು ಗೋಷ್ಠಿಯಲ್ಲಿ ತಿಳಿಸಲಾಯಿತು.
ಎಸ್ಪಿ ಸಲಹೆ : ಕೊಡಗು ಜಿಲ್ಲೆಯ ಸಾರ್ವಜನಿಕರು ಬೇರೆ ಊರುಗಳಿಗೆ ತೆರಳುವ ಸಂದರ್ಭದಲ್ಲಿ ಮನೆಗಳಲ್ಲಿ ಯಾವುದೇ ನಗದು ಹಾಗೂ ಬೆಲೆಬಾಳುವ ಚಿನ್ನಾಭರಣಗಳನ್ನು ಇಡದೇ ಬ್ಯಾಂಕ್ ಲಾಕರ್ನಲ್ಲಿ ಇಡುವಂತೆ ಮತ್ತು ಬೇರೆ ಊರುಗಳಿಗೆ ತೆರಳುವ ಅನಿವಾರ್ಯತೆಯ ಸಂದರ್ಭ ಬಂದಲ್ಲಿ ತಮ್ಮ ಮನೆಗಳಲ್ಲಿ ಪರಿಚಯಸ್ಥರನ್ನು ಉಳಿದುಕೊಳ್ಳುವ ಬಗ್ಗೆ ನೋಡಿಕೊಂಡು ಇಂತಹ ಅಪರಾಧಗಳನ್ನು ತಡೆಗಟ್ಟುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಪೊಲೀಸ್ ಅಧೀಕ್ಷಕರು ಸಾರ್ವಜನಿಕರಲ್ಲಿ ಸಲಹೆ ಮಾಡಿದ್ದಾರೆ.