ಸಿದ್ದಾಪುರ, ಮಾ:16 ಹಾಡುಹಗಲೇ ಮೀಸಲು ಅರಣ್ಯದಿಂದ ಕಡವೆಯನ್ನು ಬೇಟೆಯಾಡಿ ಮಾಂಸ ಮಾಡಿ ತರುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮೀನುಕೊಲ್ಲಿ ವಿಭಾಗದ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ನಂಜರಾಯಪಟ್ಪಣದ ಸಮೀಪದ ದುಬಾರೆ ಮೀಸಲು ಅರಣ್ಯ ಪ್ರದೇಶದ ಒಳಗಿನಿಂದ ಕಡವೆಯನ್ನು ಬೇಟೆಯಾಡಿ ಮಾಂಸ ಮಾಡಿಕೊಂಡು ಹೊಸಪಟ್ಟಣ ಮೂಲಕ ಬರುತ್ತಿದ್ದ ಸಂದರ್ಭ ಗಸ್ತಿನಲ್ಲಿದ್ದ ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಸುಭ್ರಾಯ ಹಾಗೂ ಸಿಬ್ಬಂದಿ ದಾಳಿ ನಡೆಸಿ ಹತ್ತು ಕೆ.ಜಿ ಕಡವೆಯ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿ ನಂಜರಾಯಪಟ್ಟಣ ಸಮೀಪದ ಹೊಸಪಟ್ಟಣ ನಿವಾಸಿಗಳಾದ ಮಹೇಶ (42), ವಿಶ್ವನಾಥ (60) , ಚಂದ್ರಶೇಖರ್ (38) ಎಂಬ ಮೂವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಕಾರ್ಯಾಚರಣೆ ಯಲ್ಲಿ ಮಡಿಕೇರಿ ಭಾಗದ ಡಿಎಫ್‍ಓ ಪ್ರಭಾಕರನ್ ಮಾರ್ಗದರ್ಶನದಲ್ಲಿ ಎಸಿಎಫ್ ನೆಹರು, ಆರ್‍ಎಫ್‍ಓ ಅನನ್ಯ ಕುಮಾರ್ ನೇತೃತ್ವದಲ್ಲಿ ಕುಶಾಲನಗರ ಉಪವಲಯ ಅರಣ್ಯ ಅಧಿಕಾರಿ ಸುಬ್ರಾಯ, ಸಿಬ್ಬಂಗಳಾದ ಚರಣ್ ಕುಮಾರ್, ಕಿರಣ್, ಆಲ್ಬರ್ಟ್ ಡಿಸೋಜಾ , ರವಿ ಉತ್ನಾಲ್, ಅಪ್ಪಸ್ವಾಮಿ, ಚಾಲಕ ವಾಸು ಪಾಲ್ಗೊಂಡಿದ್ದರು.