ನಾಪೆÇೀಕ್ಲು, ಮಾ. 15: ಜಿಲ್ಲಾ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ವತಿಯಿಂದ ವಿಶೇಷ ಚೇತನರಿಗಾಗಿ ಸಮಗ್ರ ಆರೈಕೆ, ಬೆಂಬಲ ಯೋಜನೆ ಅಡಿಯಲ್ಲಿ ನಾಪೆÇೀಕ್ಲುವಿನ ಬೇತು ಸಹಕಾರದಲ್ಲಿ ವಿಶೇಷ ಚೇತನ ಮಕ್ಕಳಿಗೆ ಹಾಗೂ ಪೆÇೀಷಕರಿಗೆ ನಡೆಯಲಿರುವ ವಸತಿಯುತ ಚೈತನ್ಯ ಶಿಬಿರದ ಉದ್ಘಾಟನೆಯನ್ನು ವಿಶೇಷ ಚೇತನ ಮತ್ತು ಹಿರಿಯ ನಾಗರಿಕ ಸಬಲೀಕರಣದ ಜಿಲ್ಲಾ ಕಲ್ಯಾಣಾಧಿಕಾರಿ ಸಂಪತ್ ಕುಮಾರ್ ನೆರವೇರಿಸಿದರು.
ನಂತರ ಮಾತನಾಡಿದ ಇವರು ವಿಶೇಷ ಚೇತನ ಮಕ್ಕಳ ಸಮಗ್ರ ಸಬಲೀಕರಣದ ದೃಷ್ಟಿಯಿಂದ ಇಂತಹ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದು ಪೆÇೀಷಕರಿಗೆ ಬಹಳ ಉಪಯುಕ್ತವಾದದು. ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಾಪೆÇೀಕ್ಲು ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ. ಪೂವಯ್ಯ, ಧವಸ ಭಂಡಾರದ ಅಧ್ಯಕ್ಷ ಕೊಂಡಿರ ನಾಣಯ್ಯ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯಕ್ರಮದ ಉಪ ವ್ಯವಸ್ಥಾಪಕರಾದ ಬೋರಯ್ಯ ವಹಿಸಿ, ಮಾತನಾಡಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ, ಆರ್ಯುವೇದ ತಜ್ಞ ನಿಶಾಹೂನ್, ಅಂಗವಿಕಲ ಇಲಾಖೆಯ ರಾಜ್‍ಕುಮಾರ್, ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್‍ನ ಮಡಿಕೇರಿ ತಾಲೂಕು ಮೇಲ್ವಿಚಾರಕಿ ಭವಾನಿ, ಸಿಬ್ಬಂದಿಗಳಾದ ಅಂಜಲಿ, ಲೀಲಾವತಿ, ಸುರೇಂದ್ರ, ಶಶಾಂಕ್, ದೀಕ್ಷಿತಾ ಹಾಜರಿದ್ದರು.