ನಾಪೆÇೀಕ್ಲು, ಮಾ. 15: ಗ್ರಾಮೀಣ ಪ್ರದೇಶದ ರೈತರು ಪ್ರಾಣಿಗಳನ್ನು ಸಾಕುವುದರಿಂದ ತಮ್ಮ ಕುಟುಂಬದ ಆರ್ಥಿಕತೆಯನ್ನು ಉತ್ತಮ ಪಡಿಸಿಕೊಳ್ಳಬಹುದೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಹೇಳಿದರು.

ಜಿಲ್ಲಾ ಪಂಚಾಯಿತಿ, ಪಶುಪಾಲನೆ, ಪಶು ವೈದ್ಯಕೀಯ ಸೇವೆಗಳು ಮತ್ತು ಪಶು ವೈದ್ಯಕೀಯ ಆಸ್ಪತ್ರೆ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಸಮೀಪದ ಬೇತು ಗ್ರಾಮದ ಕುಟ್ಟೇಂಜಟ್ಟಿರ ಮಂದ್‍ನಲ್ಲಿ ಆಯೋಜಿಸಲಾದ ಕಾಮಧೇನು ಮಾದರಿ ಗ್ರಾಮ ಯೋಜನೆ ಕಾರ್ಯಕ್ರಮದ ಅಂಗವಾಗಿ ಉಚಿತ ನಾಪೆÇೀಕ್ಲು, ಮಾ. 15: ಗ್ರಾಮೀಣ ಪ್ರದೇಶದ ರೈತರು ಪ್ರಾಣಿಗಳನ್ನು ಸಾಕುವುದರಿಂದ ತಮ್ಮ ಕುಟುಂಬದ ಆರ್ಥಿಕತೆಯನ್ನು ಉತ್ತಮ ಪಡಿಸಿಕೊಳ್ಳಬಹುದೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಹೇಳಿದರು.

ಜಿಲ್ಲಾ ಪಂಚಾಯಿತಿ, ಪಶುಪಾಲನೆ, ಪಶು ವೈದ್ಯಕೀಯ ಸೇವೆಗಳು ಮತ್ತು ಪಶು ವೈದ್ಯಕೀಯ ಆಸ್ಪತ್ರೆ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಸಮೀಪದ ಬೇತು ಗ್ರಾಮದ ಕುಟ್ಟೇಂಜಟ್ಟಿರ ಮಂದ್‍ನಲ್ಲಿ ಆಯೋಜಿಸಲಾದ ಕಾಮಧೇನು ಮಾದರಿ ಗ್ರಾಮ ಯೋಜನೆ ಕಾರ್ಯಕ್ರಮದ ಅಂಗವಾಗಿ ಉಚಿತ ರಕ್ಷಣೆ, ಹಾಲು, ಮಾಂಸ ಮತ್ತು ಗೊಬ್ಬರ ದೊರೆಯಲ್ಲಿದೆ ಎಂದರು. ಇದರಿಂದ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ. ಅದಕ್ಕಾಗಿ ಉತ್ತಮ ತಳಿಗಳನ್ನು ಸಾಕಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ಗ್ರಾಮೀಣ ಭಾಗದ ಜನರು ಪಶು ಪಾಲನೆಯನ್ನು ಮುಂದುವರೆಸಿ ಆರ್ಥಿಕವಾಗಿ ಮುಂದೆ ಬರಬೇಕೆಂದರು.

ಪಶು ವೈದೈಕೀಯ ಉಪ ನಿರ್ದೇಶಕ ಎ.ಬಿ. ತಮ್ಮಯ್ಯ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ರೈತರಿಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೇಯಂಡ ಸಾಬ ತಿಮ್ಮಯ್ಯ, ಸದಸ್ಯ ಚೋಕಿರ ರೋಷನ್, ನಾಪೆÇೀಕ್ಲು ಪಶು ವೈದ್ಯಾಧಿಕಾರಿ ಡಾ. ಬೊಳ್ಕಾ, ಡಾ. ಚೇತನ್, ಶಿಲ್ಪಶ್ರೀ, ದಯಾನಂದ, ಪರಿವೀಕ್ಷಕ ಬಿ.ಟಿ. ಚೆಟ್ಟಿಚ್ಚ, ಪಳಂಗಪ್ಪ, ಸುನಿಲ್ ಮತ್ತಿತರರು ಇದ್ದರು.