ಮಡಿಕೇರಿ, ಮಾ. 15: ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ನೂತನ ಕಚೇರಿ ನಗರದ ರಾಜಾಸೀಟು ರಸ್ತೆಯಲ್ಲಿರುವ ಕಾಫಿ ಬೆಳೆಗಾರರ ಸಹಕಾರ ಸಂಘದ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.

ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ. ಚಂಗಪ್ಪ ಕಚೇರಿಯನ್ನು ಉದ್ಘಾಟಿಸಿದರು. ನಂತರ ನಡೆದ ಕಾರ್ಯಕಾರಿ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಅಭಿವೃದ್ಧಿಗಾಗಿ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಪ್ರವಾಸ ಕೈಗೊಂಡು ಒಕ್ಕಲಿಗ ಸಮುದಾಯವನ್ನು ಒಗ್ಗೂಡಿಸಲಾಗುವುದು. ತಾಲೂಕು ಘಟಕಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಕ್ಕಲಿಗ ದಾನಿಗಳ ಸಹಕಾರದೊಂದಿಗೆ ಚಟುವಟಿಕೆಯನ್ನು ಚುರುಕುಗೊಳಿಸಲಾಗುವುದು ಎಂದರು.

ಉಪಾಧ್ಯಕ್ಷ ಶಿವಯ್ಯ, ನಿರ್ದೇಶಕರುಗಳಾದ ಪುರುಷೋತ್ತಮ, ಕೆ.ವಿ. ನಾಗರಾಜು, ವಿ.ಎಲ್. ಸುರೇಶ್, ಕೆ.ಎಸ್. ಗೋಪಾಲಕೃಷ್ಣ, ಬಿ.ಬಿ. ಸತೀಶ್, ಲೋಹಿತ್, ಮೋಹನ್‍ಕುಮಾರ್, ಎಸ್.ಪಿ. ಪೊನ್ನಪ್ಪ, ಬಿ.ಡಿ. ಪುಟ್ಟರಾಜು, ಅಪ್ಪಸ್ವಾಮಿ ಹಾಗೂ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಮುಖರಾದ ವಿ.ಪಿ. ಸುರೇಶ್ ಸ್ವಾಗತಿಸಿ, ವಂದಿಸಿದರು.