ಮಡಿಕೇರಿ, ಮಾ. 15: ಮಂಗಳೂರು ವಿಶ್ವವಿದ್ಯಾನಿಲಯ, ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ, ಚಿಕ್ಕ ಅಳುವಾರದಲ್ಲಿ ‘ಯುವ ಪೀಳಿಗೆಗೆ ಉತ್ತೇಜನ ಮತ್ತು ಆದರ್ಶ’ಗಳ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಸಿಗ್ಮ ನೆಟ್ವರ್ಕ್ ಪ್ರೈವೆಟ್ ಲಿಮಿಟೆಡ್‍ನ ಅವರೆಮಾದಂಡ ಶರಣ್ ಪೂಣಚ್ಚ ಮಾತನಾಡಿ, ಆತ್ಮ ಸ್ಥೈರ್ಯ, ಕೌಶಲ್ಯ ಅಭಿವೃದ್ಧಿ ಹಾಗೂ ನವ ಉದ್ಯೋಗಾಕಾಂಕ್ಷಿಗಳಿಗೆ ನವೋದ್ಯಮ ಪ್ರಾರಂಭಿಸಲು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರದ ನಿರ್ದೇಶಕಿ ಪ್ರೊ. ಮಂಜುಳಾ ಶಾಂತರಾಮ್ ವಹಿಸಿದ್ದರು.

ಚಿಕ್ಕ ಅಳುವಾರ, ಸ್ನಾತಕೋತ್ತರ ಕೇಂದ್ರ, ಜ್ಞಾನಕಾವೇರಿ, ಯೋಗವಿಜ್ಞಾನ ವಿಭಾಗದ ಸಂಯೋಜಕರಾದ ಡಾ. ಶ್ಯಾಮಸುಂದರ್, ಕಾಟಿಮಾಡ ಮೈನಾ ರಾಕೇಶ್, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಕೇಂದ್ರದ ಅಧ್ಯಾಪಕ ಹಾಗೂ ಅಧ್ಯಾಪಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ದ್ವಿತೀಯ ವಾಣಿಜ್ಯ ಕೋರ್ಸ್‍ನ ನವ್ಯ ಎಂ.ಎಸ್. ನಿರೂಪಿಸಿ, ದ್ವಿತೀಯ ವರ್ಷದ ವಿದ್ಯಾರ್ಥಿನಿ ಪ್ರ್ರಿಯಾ ದೇವಾಂಗ ಎಸ್.ಡಿ. ಸ್ವಾಗತಿಸಿ, ದ್ವಿತೀಯ ವರ್ಷದ ವಿದ್ಯಾರ್ಥಿ ಸ್ವಾತಿ ಕೆ.ಡಿ. ವಂದಿಸಿದರು.