ಶನಿವಾರಸಂತೆ, ಮಾ. 15: ಶನಿವಾರಸಂತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಅರಣ್ಯ ಇಲಾಖೆ ವತಿಯಿಂದ ಕಾಡ್ಗಿಚ್ಚು ಕುರಿತು ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಕೆ. ಕೊಟ್ರೇಶ್ ಅವರು ಕಾಡ್ಗಿಚ್ಚು ಕುರಿತು ಮಾಹಿತಿ ನೀಡಿ ಅರಣ್ಯ ಸಂಪತ್ತು ರಾಷ್ಟ್ರದ ಸಂಪತ್ತಾಗಿರುವುದರಿಂದ ಪ್ರತಿಯೊಬ್ಬ ಪ್ರಜೆಯು ಅರಣ್ಯ ಮತ್ತು ಪರಿಸರಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.
ಕೆ.ಆರ್. ನಗರ ತಾಲೂಕಿನ ಪ್ರಗತಿ ಕಲಾತಂಡದ ಅಶೋಕ ನೇತೃತ್ವದಲ್ಲಿ ಬೀದಿ ನಾಟಕದ ಮೂಲಕ ಜನರಲ್ಲಿ ಕಾಡ್ಗಿಚ್ಚು ಜಾಗೃತಿ ಮೂಡಿಸಲಾಯಿತು. ಈ ಸಂದರ್ಭ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಕೃಷ್ಣಾನಾಯಕ್, ಉಪ ಅರಣ್ಯಾಧಿಕಾರಿ ಶ್ರೀನಿವಾಸ್, ಸತೀಶ್, ಅರಣ್ಯ ರಕ್ಷಕರಾದ ಲೋಹಿತ್, ಜಯಕುಮಾರ್, ರಾಮಕೃಷ್ಣ, ಹರೀಶ್ ಕುಮಾರ್ ಇತರರು ಹಾಜರಿದ್ದರು.