ನಾಪೆÇೀಕ್ಲು, ಮಾ. 15: ಇತಿಹಾಸ ಪ್ರಸಿದ್ಧ ನಾಪೆÇೀಕ್ಲು ಗ್ರಾಮದ ಶ್ರೀ ಭದ್ರಕಾಳಿ, ಶ್ರೀ ಭಗವತಿ ದೇವರ ವಾರ್ಷಿಕ ವಾರ್ಷಿಕೋತ್ಸವ ತಾ. 17 ರಿಂದ 21 ರವರೆಗೆ ನಡೆಯಲಿದೆ. ತಾ. 17 ರಂದು ತಕ್ಕರ ಮನೆಯಿಂದ ಭಂಡಾರ ತರುವುದು, ರಾತ್ರಿ 9 ಗಂಟೆಗೆ ಅಂದಿಬೊಳಕು, 11 ಗಂಟೆಗೆ ಉಗ್ರಮೂರ್ತಿ ಶ್ರೀ ಭದ್ರಕಾಳಿ ದೇವರ ಕೋಲ ಮತ್ತು ಬಲಿ ಕಾರ್ಯಕ್ರಮ ನಡೆಯಲಿದೆ. ತಾ. 18 ರಂದು ದೇವರ ಮೂರ್ತಿ ಹೊತ್ತು ಊರ ಪ್ರದಕ್ಷಿಣೆ, ತಾ. 19 ರಂದು ಪವಿತ್ರ ಪಟ್ಟಣಿ ಹಬ್ಬ ಪೂರ್ವಾಹ್ನ 11 ಗಂಟೆಗೆ ಎತ್ತು ಪೋರಾಟ, ಅನ್ನದಾನ ನಂತರ ದೇವರ ಮೂರ್ತಿ ಹೊರ ಬಂದು ನೃತ್ಯ ಬಲಿ ನಡೆಯಲಿದೆ. ತಾ. 20 ರಂದು ಕಾವೇರಿ ನದಿಯಲ್ಲಿ ದೇವರ ಮೂರ್ತಿಯ ಜಳಕ ನಂತರ ನಗರಾದ್ಯಂತ ದೇವರ ಮೂರ್ತಿ ಹೊತ್ತು ಮೆರವಣೆಗೆ ನಡೆಯಲಿದೆ. ರಾತ್ರಿ ವಿವಿಧ ದೇವರ ಕೋಲ, ನುಚ್ಚುಟೆ, ನರಿಪೂಧ, ಅಂಜಿ ಕೂಟ್ ಮೂರ್ತಿಯಡ ತೆರೆ ಕೋಲ ನಡೆಯಲಿದೆ. ತಾ, 21 ರ ಬೆಳಿಗ್ಗೆ 10 ಗಂಟೆಗೆ ಕಲಿಯಾಟ ಅಜ್ಜಪ್ಪ ಕೋಲ, ಮಧ್ಯಾಹ್ನ 12 ಗಂಟೆಗೆ ವಿಷ್ಣುಮೂರ್ತಿ ಕೋಲ ನಡೆದು ಅನ್ನದಾನದೊಂದಿಗೆ ಹಬ್ಬಕ್ಕೆ ತೆರೆಕಾಣಲಿದೆ.
ಇತಿಹಾಸ : ಚೋಳರ ಕಾಲದಲ್ಲಿ ಈ ದೇವಾಲಯ ನಿರ್ಮಾಣವಾಗಿರಬಹುದು ಎಂದು ತಿಳಿದು ಬರುತ್ತದೆ. ಅದರಂತೆ ಈ ದೇವಳದ ಜೀರ್ಣೋದ್ಧಾರ ಸಮಯದಲ್ಲಿ ಗರ್ಭ ಗುಡಿಯನ್ನು ಕೆಡವಲಾದ ಸಂದರ್ಭ ಈ ಗರ್ಭ ಗುಡಿಯ ಕಟ್ಟಳೆಯ ಕಲ್ಲು ಕಂಬದಲ್ಲಿ ಸುಮಾರು ಸಾವಿರ ವರ್ಷದ ಇಸವಿಯ ಅಕ್ಷರದಲ್ಲಿ ಕೆತ್ತಲಾಗಿರುವುದನ್ನು ನೋಡಬಹುದು.
ಉಗ್ರಮೂರ್ತಿ ಶ್ರೀ ಭದ್ರಕಾಳಿ : ಈ ದೇವಳದ ಹಬ್ಬವು ಭಾರಿ ವಿಶೇಷತೆಯನ್ನು ಹೊಂದಿರುವುದಾಗಿದೆ, ಕೊಡಗಿನ ಎಲ್ಲಾ ದೇವಳದಲ್ಲಿ ನಡೆಯುವ ಹಬ್ಬಕ್ಕೂ ಇಲ್ಲಿ ನಡೆಯುವ ಹಬ್ಬಕ್ಕೂ ಬಹಳ ವ್ಯತ್ಯಾಸವನ್ನು ಕಾಣಬಹುದು, ಕೊಡಗಿನ ಇತರೆ ದೇವಳದಲ್ಲಿ ಹಬ್ಬದ ಕೊನೆ ದಿನದಲ್ಲಿ ದೇವರುಗಳಿಗೆ ಬಲಿ ಕಾರ್ಯಕ್ರಮ ನಡೆಯುತ್ತದೆ. ಆದರೆ ಇಲ್ಲಿ ವಿಭಿನ್ನವಾಗಿ ಇಲ್ಲಿನ ಶ್ರೀ ಭದ್ರಕಾಳಿ ದೇವರು ಉಗ್ರ ಮೂರ್ತಿಯಾಗಿರುವುದರಿಂದ ಮೊದಲ ದಿನವೇ ಉಗ್ರಮೂರ್ತಿಗೆ ಬಲಿ ಕಾರ್ಯಕ್ರಮ ನಡೆಯುತ್ತದೆ. ನಂತರ ಶ್ರೀ ಭಗವತಿ ದೇವರ ಹಬ್ಬ ಪ್ರಾರಂಭವಾಗಲಿದೆ. ಅದರಂತೆ ಹಬ್ಬದ ಕೊನೆಯ ದಿನವು ಸಹ ಬಲಿಕಾರ್ಯಕ್ರಮ ಇರುತ್ತದೆ. ಇಲ್ಲಿ ಉಗ್ರಮೂರ್ತಿಯಾದ ಶ್ರೀ ಭದ್ರಕಾಳಿ ದೇವಿಯು ಅಕ್ಕ ತಂಗಿಯರಾಗಿ ಕೇರಳ ರಾಜ್ಯದಿಂದ ಪ್ರಸಿದ್ಧ ನೆಲೆ ಹರಸಿ ಈಗಿರುವ ಬೊಮ್ಮಂಜಿಕೇರಿಗೆ ಬರುವಾಗ ಅಕ್ಕಳಾದ ಭದ್ರಕಾಳಿ ನಾನು ಇಲ್ಲಿ ನೆಲೆ ನಿಲ್ಲುತ್ತೇನೆ ನೀನು ನನ್ನ ಹತ್ತಿರವೇ ಇರು ಎಂದು ನಾಪೆÇೀಕ್ಲು ಭಗವತಿ ದೇವಳದಲ್ಲಿ ನೆಲೆ ನಿಲ್ಲುತ್ತಾಳೆ. ಅದರಂತೆ ಇಂದೂ ಸಹ ಬೊಮ್ಮಂಜಿಕೇರಿಯಲ್ಲಿ ಅಕ್ಕ ದೇವಿಯ ಕೋಲ ಮಧ್ಯಾಹ್ನ ಮುಗಿದರೆ ಅದರಂತೆ ನಾಪೆÇೀಕ್ಲು ಭಗವತಿ ದೇವಳದಲ್ಲಿ ರಾತ್ರಿ ಭದ್ರಕಾಳಿ ದೇವರ ಕೋಲವು ಇಂದಿನವರೆಗೆ ನಡೆಯುತ್ತಾ ಬಂದಿರುತ್ತದೆ. ದೇವಳ ಸಮಿತಿಯ ಅಧ್ಯಕ್ಷರಾಗಿ ಕುಲ್ಲೇಟಿರ ಮುತ್ತಪ್ಪ, ಕಾರ್ಯದರ್ಶಿಯಾಗಿ ಅರೆಯಡ ಸೋಮಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ.