1. ಮಡಿಕೇರಿ, ಮಾ. 14: ಮಡಿಕೇರಿ ನಗರದಲ್ಲಿ ಯು.ಜಿ.ಡಿ. ಕಾಮಗಾರಿ ನಡೆದು ಪೂರ್ಣವಾಗದೇ ಹಾಗೆ ಇದೆ. ಈಗ ಮಡಿಕೇರಿ ನಗರದ ಭಗವತಿ ನಗರಕ್ಕೆ ತೆರಳುವ ರಸ್ತೆಯಲ್ಲಿ ಯು.ಜಿ.ಡಿ. ಚೇಂಬರ್‍ಗೆ ಹಾಕಿರುವ ಮೇಲಿನ ಚೇಂಬರ್ ಕವರ್ ಒಡೆದು ಹೋಗಿದ್ದು, ಇದನ್ನು ಸರಿಪಡಿಸುವ ಕಾರ್ಯವು ಯು.ಜಿ.ಡಿ. ಅಧಿಕಾರಿಗಳು ಮಾಡದೆ ಹಾಗೆಯೇ ಇದೆ ರಸ್ತೆಯಲ್ಲಿ ವಾಹನಗಳು ಓಡಾಡಲು ತೊಂದರೆಯಾಗುತ್ತಿದ್ದು, ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನಗಳು ತಿಳಿಯದೇ ಈ ರಸ್ತೆಯಲ್ಲಿ ಬಂದರೆ ಈ ಗುಂಡಿಗೆ ಬೀಳುವುದಂತೂ ನಿಶ್ಚಿತ ಆದಷ್ಟು ಬೇಗ ನಗರಸಭೆಯವರು ಅಥವಾ ಯು.ಜಿ.ಡಿ. ಅಧಿಕಾರಿಗಳು ಇದನ್ನು ಸರಿಪಡಿಸಿ ಮುಂದೆ ಸಂಭವಿಸುವ ಅನಾಹುತವನ್ನು ತಪ್ಪಿಸಬೇಕು. ಯಾವುದೇ ವಾಹನ ಸವಾರರಿಗೆ ಈ ಗುಂಡಿಯಿಂದ ಅನಾಹುತಗಳು ಸಂಭವಿಸಿದರೆ ಅದಕ್ಕೆ ಯು.ಜಿ.ಡಿ. ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ಎಂದು ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಆಕ್ಷೇಪಿಸಿದೆ.