ಸೋಮವಾರಪೇಟೆ, ಮಾ. 13: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಅಂಬಾರಿಯನ್ನು ಹೊರಲು ಆನೆಗಳನ್ನು ಕೊಟ್ಟ ಊರಿಗೆ ಇಂದಿಗೂ ಸಮರ್ಪಕವಾದ ರಸ್ತೆಗಳಿಲ್ಲ. ‘ಸರ್ಕಾರಗಳು ಬರುತ್ತೆ.. ಹೋಗುತ್ತೆ.., ಆದ್ರೆ ನಮ್ ಊರಿಗೆ ಮಾತ್ರ ರಸ್ತೆ ಭಾಗ್ಯ ಬರೋದೇ ಇಲ್ಲ. ಈಗಲೂ ಊರಿಗೆ ಆನೆಗಳು ಬರುತ್ತವೆ; ಅವುಗಳಿಂದ ತಪ್ಪಿಸಿ ಕೊಂಡು ಗುಂಡಿಬಿದ್ದ ರಸ್ತೆಗಳಲ್ಲೇ ಓಡಾಡಬೇಕಿದೆ’ ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಸೂರು ಗ್ರಾಮ ಪಂಚಾಯಿತಿಗೆ ಒಳಪಡುವ ಕಟ್ಟೆಪುರ, ಚಿಪ್ಪಗಳಲೆ, ಆಗಳಿ, ಉಂಬಳಿ ಬೆಟ್ಟ ಭಾಗದಲ್ಲಿ ಇಂದಿಗೂ ಸುಸಜ್ಜಿತ ರಸ್ತೆಗಳು ನಿರ್ಮಾಣವಾಗಿಲ್ಲ.

ಆದರೆ ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳು ಹಾವಳಿ ಎಬ್ಬಿಸುತ್ತಿದ್ದು, ಅವುಗಳಿಗೆ ಹೆದರಿ ದಿನದೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 3 ತಿಂಗಳಿ ನಿಂದ ಈ ಭಾಗದಲ್ಲಿ ಒಂಟಿ ಆನೆ ಯೊಂದು ಓಡಾಡುತ್ತಿದ್ದು, ಮುಖ್ಯ ರಸ್ತೆಯೇ ಇದರ ಮಾರ್ಗವಾಗಿದೆ.

ಸುಮಾರು 25 ವರ್ಷದ ಒಂಟಿ ಆನೆ ಕಟ್ಟೆಪುರ, ಚಿಪ್ಪಗಳಲೆ ಭಾಗದಲ್ಲಿ ಬೀಡುಬಿಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಸೃಷಿಸಿದೆ. ಹೆಚ್ಚಿನ ಮಂದಿ ತಮ್ಮ ತೋಟ, ಗದ್ದೆಗಳಿಗೆ ಸೋಲಾರ್ ಬೇಲಿ ಅಳವಡಿಸಿರುವದರಿಂದ ಆನೆಗೂ ಸಹ ಸಂಚರಿಸಲು ಅನ್ಯ ಮಾರ್ಗವಿಲ್ಲದೇ ಅನಿವಾರ್ಯವಾಗಿ ಮುಖ್ಯರಸ್ತೆಯನ್ನೇ ಬಳಸುತ್ತಿದೆ.

ಇದರಿಂದಾಗಿ ಕೆಲಸ ಕಾರ್ಯ ಗಳಿಗೆ ತೆರಳುವ ಸಾರ್ವಜನಿಕರು, ಶಾಲಾ-ಕಾಲೇಜಿಗೆ ತೆರಳುವ ಆದರೆ ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳು ಹಾವಳಿ ಎಬ್ಬಿಸುತ್ತಿದ್ದು, ಅವುಗಳಿಗೆ ಹೆದರಿ ದಿನದೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 3 ತಿಂಗಳಿ ನಿಂದ ಈ ಭಾಗದಲ್ಲಿ ಒಂಟಿ ಆನೆ ಯೊಂದು ಓಡಾಡುತ್ತಿದ್ದು, ಮುಖ್ಯ ರಸ್ತೆಯೇ ಇದರ ಮಾರ್ಗವಾಗಿದೆ.

ಸುಮಾರು 25 ವರ್ಷದ ಒಂಟಿ ಆನೆ ಕಟ್ಟೆಪುರ, ಚಿಪ್ಪಗಳಲೆ ಭಾಗದಲ್ಲಿ ಬೀಡುಬಿಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಸೃಷಿಸಿದೆ. ಹೆಚ್ಚಿನ ಮಂದಿ ತಮ್ಮ ತೋಟ, ಗದ್ದೆಗಳಿಗೆ ಸೋಲಾರ್ ಬೇಲಿ ಅಳವಡಿಸಿರುವದರಿಂದ ಆನೆಗೂ ಸಹ ಸಂಚರಿಸಲು ಅನ್ಯ ಮಾರ್ಗವಿಲ್ಲದೇ ಅನಿವಾರ್ಯವಾಗಿ ಮುಖ್ಯರಸ್ತೆಯನ್ನೇ ಬಳಸುತ್ತಿದೆ.

ಇದರಿಂದಾಗಿ ಕೆಲಸ ಕಾರ್ಯ ಗಳಿಗೆ ತೆರಳುವ ಸಾರ್ವಜನಿಕರು, ಶಾಲಾ-ಕಾಲೇಜಿಗೆ ತೆರಳುವ ವಿನೋದ್ ಅಭಿಪ್ರಾಯಿಸುತ್ತಾರೆ.

ಹಾಸನ ಜಿಲ್ಲೆಯ ಗಡಿಯನ್ನು ಹೊಂದಿಕೊಂಡಿರುವ ಈ ಭಾಗದಲ್ಲಿ ಯಥೇಚ್ಛವಾಗಿ ಮರಳುಗಣಿಗಾರಿಕೆ ನಡೆಯುತ್ತದೆ.

ಹೇಮಾವತಿ ಹಿನ್ನೀರು ಪ್ರದೇಶವಾಗಿರುವದರಿಂದ ವನ್ಯ ಪ್ರಾಣಿಗಳು ಇಲ್ಲೇ ಬೀಡುಬಿಟ್ಟಿರುತ್ತವೆ. ಕಾಡಾನೆಗಳಂತೂ ವರ್ಷದಲ್ಲಿ 8 ರಿಂದ 10 ತಿಂಗಳು ಇಲ್ಲಿ ಠಿಕಾಣಿ ಹೂಡಿರುತ್ತವೆ. ಅವುಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಕೃಷಿಫಸಲಿನ ನಷ್ಟ ಅನುಭವಿಸಿ ಕೊಂಡು, ಜೀವಭಯ ದೊಂದಿಗೆ ಮನುಷ್ಯರು ವಾಸ ಮಾಡಬೇಕಿದೆ ಎಂದು ಸಂತೋಷ್ ಅವರು ವಾಸ್ತವತೆಯನ್ನು ಬಿಚ್ಚಿಡುತ್ತಾರೆ.

ಇದೀಗ ಒಂಟಿ ಆನೆಯೊಂದು ಜನವಸತಿ ಪ್ರದೇಶದಲ್ಲೇ ಓಡಾಡುತ್ತಿದ್ದು, ಕೃಷಿಕರ ಕೃಷಿ ಫಸಲನ್ನು ನಷ್ಟಗೊಳಿಸುತ್ತಿದೆ. ತೋಟಗಳಿಗೆ ಲಗ್ಗೆಯಿಟ್ಟು, ಬಾಳೆ, ತೆಂಗು ಫಸಲನ್ನು ತಿಂದು ನಾಶಗೊಳಿಸುತ್ತಿದೆ. ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ ಈವರೆಗೆ ಇಲಾಖೆಯಿಂದ ಸ್ಪಂದನ ಸಿಕ್ಕಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಪ್ರತಿದಿನ ಬೆಳಿಗ್ಗೆ 5 ರಿಂದ 7 ಮತ್ತು ಸಂಜೆ 4 ರಿಂದ ರಾತ್ರಿ 9 ಗಂಟೆಯವರೆಗೂ ಈ ಭಾಗದ ರಸ್ತೆಗಳಲ್ಲಿ ಒಂಟಿ ಆನೆ ಸಂಚರಿಸುತ್ತಿದೆ. ತೋಟದ ಬೇಲಿ ಮುರಿದು ದಾಂಧಲೆ ನಡೆಸುತ್ತಿದೆ. ಹಲವಷ್ಟು ಬಾರಿ ಮನವಿ ಮಾಡಿದ್ದರೂ ಸಹ ಅರಣ್ಯ ಇಲಾಖೆ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟದೇ ಕಣ್ಮುಚ್ಚಿ ಕುಳಿತಿದೆ ಎಂಬ ಅಸಮಾಧಾನ ಈ ಭಾಗದ ನಾಗರಿಕರಲ್ಲಿದೆ.

ವಿಶ್ವವಿಖ್ಯಾತ ಮೈಸೂರು ದಸರಾದ ಅಂಬಾರಿಯನ್ನು ಹೊತ್ತಿರುವ ಬಲರಾಮ, ಗಜೇಂದ್ರ ಆನೆಗಳನ್ನು ಇದೇ ಪರಿಸರದಿಂದ ಸೆರೆಹಿಡಿಯಲಾಗಿದೆ. ಇದರೊಂದಿಗೆ ಕಾರ್ತಿಕ, ಹರ್ಷ ಹೆಸರಿನ ಆನೆಗಳೂ ಇಲ್ಲಿಂದಲೇ ಸೆರೆಯಾಗಿವೆ ಎಂದು ಮಾಹಿತಿ ನೀಡುವ ಸ್ಥಳೀಯರು, ಅಂಬಾರಿ ಹೊರಲು ಆನೆಯನ್ನು ಕೊಟ್ಟ ಈ ಊರಿಗೆ ಇಂದಿಗೂ ರಸ್ತೆ, ಬೀದಿ ದೀಪಗಳ ವ್ಯವಸ್ಥೆಯಿಲ್ಲ. ಕಾಡಾನೆಗಳ ಕಾಟದಿಂದ ಮುಕ್ತವಾಗಿಲ್ಲ ಎಂದು ಅಳಲುತೋಡಿಕೊಂಡಿದ್ದಾರೆ.

ಇನ್ನಾದರೂ ಸಂಬಂಧಿಸಿದ ಅರಣ್ಯ ಇಲಾಖೆ ಇತ್ತ ಗಮನಹರಿಸಿ ಜನವಸತಿ ಪ್ರದೇಶದಲ್ಲಿ ಓಡಾಡುತ್ತಿರುವ ಕಾಡಾನೆಯನ್ನು ಸೆರೆಹಿಡಿದು ಅರಣ್ಯಕ್ಕೆ ಅಟ್ಟಲಿ. ಅಂತೆಯೇ ಕಾಡಾನೆ ಹಾವಳಿ ಪೀಡಿತ ಪ್ರದೇಶದಲ್ಲಿ ಸುಸಜ್ಜಿತ ರಸ್ತೆ, ಬೀದಿ ದೀಪಗಳ ವ್ಯವಸ್ಥೆಯನ್ನು ಸ್ಥಳೀಯ ಜನಪ್ರತಿನಿಧಿಗಳು ಕಲ್ಪಿಸಲು ಮನಸ್ಸು ಮಾಡಲಿ ಎಂಬ ಒತ್ತಾಯ ಸ್ಥಳೀಯರದ್ದು.

- ವಿಜಯ್ ಹಾನಗಲ್