ಗೋಣಿಕೊಪ್ಪ ವರದಿ, ಮಾ. 13: ಮಾಯಮುಡಿ ಗ್ರಾಮದ ಕಮಟೆ ಮಹದೇಶ್ವರ ದೇವರ ವಾರ್ಷಿಕ ಹಬ್ಬ ನಡೆಯಿತು. ದೇವರ ದರ್ಶನ, ಅಭ್ಯಂಜನ ಸ್ನಾನ, ದೇವರ ಉತ್ಸವ ಮೂರ್ತಿಯೊಂದಿಗೆ ನೃತ್ಯ, ವಸಂತಪೂಜೆ, ವಿಷ್ಣುಮೂರ್ತಿ, ಗುಳಿಗನಿಗೆ ಪೂಜೆ, ಈಶ್ವರನಿಗೆ ರುದ್ರಾಭಿಷೇಕ, ನಾಗನಿಗೆ ಪೂಜೆ ನೆರವೇರಿತು. ಗಣಪತಿಗೆ ಪಂಚಕಜ್ಜಾಯ, ಈಶ್ವರನಿಗೆ ಬಿಲ್ವ ಪತ್ರಾರ್ಚನೆ, ಕ್ಷೀರಾಭಿಷೇಕ, ಸುಬ್ರಹ್ಮಣ್ಯನಿಗೆ ಕ್ಷೀರಾಭಿಷೇಕ ನಡೆಯಿತು.