ಮಡಿಕೇರಿ, ಮಾ. 13: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಕಾರ್ಯಾ ಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ನೇಮಕದೊಂದಿಗೆ ರಾಜ್ಯದೊಂದಿಗೆ; ಕೊಡಗು ಜಿಲ್ಲೆ ಯಲ್ಲಿಯೂ ಪಕ್ಷ ಪುನರ್ ಸಂಘಟನೆ ಯಾಗುವ ವಿಶ್ವಾಸ ಹೊಂದಿರುವದಾಗಿ ಹಿರಿಯ ಕಾಂಗ್ರೆಸ್ ಮುಖಂಡ ಕೆಪಿಸಿಸಿಯ ಮಾಜಿ ಉಪಾಧ್ಯಕ್ಷ ಬಿ.ಜಿ. ಮಿಟ್ಟು ಚಂಗಪ್ಪ ಹೇಳಿದ್ದಾರೆ.‘ಶಕ್ತಿ’ಯೊಂದಿಗೆ ನೂತನ ಅಧ್ಯಕ್ಷರ ನೇಮಕದ ಕುರಿತಾಗಿ ಪ್ರತಿಕ್ರಿಯಿಸಿದ ಅವರು ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಉತ್ತಮ ನಾಯಕರು ಇವರಿಬ್ಬರು ಜತೆಯಾಗಿರುವದರಿಂದ ಪಕ್ಷ ಸದೃಢವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯ ಲ್ಲಿಯೂ ಹಿರಿಯ ಕಾಂಗ್ರೆಸ್ಸಿಗರ ಕಡೆಗಣನೆ, ಯುವ ನಾಯಕತ್ವದ ಕೊರತೆ, ಮತ್ತಿತರ ಕೆಲವಾರು ಕಾರಣ ದಿಂದಾಗಿ ಕಾಂಗ್ರೆಸ್ ಹಿನ್ನಡೆ ಕಂಡಿತ್ತು. ಆದರೆ ಡಿ.ಕೆ.ಶಿ. ಯಂತಹ ವ್ಯಕ್ತಿಗೆ ಇದೀಗ ಜವಾಬ್ದಾರಿ ವಹಿಸಿರುವದು ಸ್ವಾಗತಾರ್ಹ. ಅವರು ಎಲ್ಲರನ್ನೂ ಸಾಮೂಹಿಕವಾಗಿ ಕರೆದೊಯ್ದು ಪಕ್ಷವನ್ನು ಹಿಂದಿನ ವೈಭವದತ್ತ ಮರುಕಳಿಸಲಿದ್ದಾರೆಂದರು. ಪಕ್ಷಕ್ಕಾಗಿ ಕೆಲಸ ಮಾಡಬೇಕೇ ಹೊರತು ಪಕ್ಷಕ್ಕೆ ಬಂದೊಡನೆ ಸ್ಥಾನಮಾನಕ್ಕೆ ಯತ್ನಿ ಸುವದು ಇತ್ತೀಚೆಗೆ ಕಂಡುಬರುತ್ತಿತ್ತು. ಇದರಿಂದಾಗಿ ಪಕ್ಷ ಹಿನ್ನಡೆ ಕಂಡಿತ್ತು ಎಂದೂ ಅಭಿಪ್ರಾಯ ಪಟ್ಟ ಅವರು ಸ್ವಹಿತಾಸಕ್ತಿ ಬದಿಗೊತ್ತಿ ಕೆಲಸ ನಿರ್ವಹಿಸುವಂತೆ ಜಿಲ್ಲೆಯ ಕಾಂಗ್ರೆಸ್ಸಿಗರಿಗೆ ಸಲಹೆಯಿತ್ತರು.