ಬೆಂಗಳೂರು, ಮಾ. 13: ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಹರಡದಂತೆ ತಡೆಯಲು ಕರ್ನಾಟಕದಲ್ಲಿ ಒಂದು ವಾರ ಕಾಲ ಅನೇಕ ಆಚರಣೆ, ವಹಿವಾಟುಗಳಿಗೆ ನಿರ್ಬಂಧ ಹೇರಲಾಗಿದ್ದು; ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಈ ವಿಷಯ ಪ್ರಕಟಿಸಿದರು.
ಸಿನಿಮಾ ಥಿಯೇಟರ್ಗಳು, ಮಾಲ್ಗಳು ಕಾರ್ಯನಿರ್ವಹಿಸುವಂತಿಲ್ಲ; ವಿವಾಹಗಳು, ನಾಮಕರಣಗಳು, ಸಭೆ ಸಮಾರಂಭಗಳನ್ನು ಸ್ಥಗಿತಗೊಳಿಸಲಾಗಿದೆ. ರಾತ್ರಿ ವಹಿವಾಟು ನಡೆಸುವ ಕ್ಲಬ್ಗಳು, ಪಬ್ಗಳು ಎಲ್ಲವನ್ನೂ ಬಂದ್ಗೊಳಿಸಲಾಗುವುದು. ಶಾಲಾ - ಕಾಲೇಜುಗಳು, ವಿಶ್ವವಿದ್ಯಾಲಯಗಳು, ತರಬೇತಿ ನೀಡುವ ಶಾಲೆಗಳು ಮುಚ್ಚಲ್ಪಡುತ್ತವೆ. ಪೂರ್ವ ನಿಗದಿತ ಶಾಲಾ ಪರೀಕ್ಷೆಗಳು ಮಾತ್ರ ನಡೆಯುತ್ತವೆ. ಸ್ವಿಮ್ಮಿಂಗ್ಪೂಲ್ಗಳನ್ನು ಬಳಸುವಂತಿಲ್ಲ, ಕ್ರಿಕೆಟ್, ಫುಟ್ಬಾಲ್ ಮೊದಲಾದ ಯಾವುದೇ ಕ್ರೀಡೆಗಳನ್ನು ನಡೆಸುವಂತಿಲ್ಲ; ಒಂದು ವಾರದವರೆಗೆ ಈ ವಹಿವಾಟುಗಳು ಸ್ಥಗಿತಗೊಳ್ಳಲಿದ್ದು; ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಿರುವದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ವಿವರಿಸಿದರು. ಸರಕಾರ ನಡೆಸುತ್ತಿರುವ ವಿದ್ಯಾರ್ಥಿ ನಿಲಯಗಳು, ಸರ್ಕಾರಿ ವಸತಿ ಶಾಲೆಗಳಲ್ಲಿ ಹೆಚ್ಚಿನ ಕಾಳಜಿವಹಿಸುವಂತೆ ಸೂಚಿಸಲಾಗಿದೆ. ಆರೋಗ್ಯ ಸಿಬ್ಬಂದಿಗೆ ರಜೆಯಿಲ್ಲ ಆರೋಗ್ಯ ಇಲಾಖೆ ಸೇರಿದಂತೆ ತುರ್ತು ಅಗತ್ಯದ ಇಲಾಖೆಗಳ ಸಿಬ್ಬಂದಿ ಭಾನುವಾರವೂ ಸೇರಿದಂತೆ ರಜಾ ದಿನಗಳಲ್ಲಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ನಿರ್ದೇಶಿಸಿದರು. ಸಮ್ಮೇಳನಗಳು, ಬೇಸಿಗೆ ಶಿಬಿರಗಳು, ಜಾತ್ರೆಗಳು, ಭಾರೀ ಸಂಖ್ಯೆಯಲ್ಲಿ ಜನ ಸೇರ್ಪಡೆ, ವಸ್ತು ಪ್ರದರ್ಶನ ಇತ್ಯಾದಿಗಳನ್ನು ಕೂಡ ಒಂದು ವಾರ ಕಾಲ ನಿಷೇಧಿಸಲಾಗಿದೆ. ಐಟಿ - ಬಿಟಿ ಕಂಪೆನಿಯ ಉದ್ಯೋಗಿಗಳು ಮನೆಯಲ್ಲಿಯೇ ಕಾರ್ಯನಿರ್ವಹಿಸುವಂತೆ ಸಲಹೆ ನೀಡಲಾಗಿದೆ. ಸರಕಾರಿ ಆಸ್ಪತ್ರೆಗಳಲ್ಲದೆ; ಖಾಸಗಿ ಆಸ್ಪತ್ರೆಗಳು ಕೂಡ ಶಂಕಿತ ಕೊರೊನಾ ಪ್ರಕರಣಗಳ ಪತ್ತೆಗೆ ಸಹಕರಿಸುವಂತೆ ಸೂಚಿಸಲಾಗಿದೆ. ಜನರು ಸಾಧ್ಯವಾದಷ್ಟು ಮಟ್ಟಿಗೆ ಪ್ರವಾಸ ನಡೆಸದಂತೆ ಹಾಗೂ ವಿದೇಶ ಪ್ರವಾಸವನ್ನು ಮಾಡದಂತೆ ಮುಖ್ಯಮಂತ್ರಿ ಕೋರಿದ್ದಾರೆ.
ಸಾರ್ವಜನಿಕ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದ್ದು; ಸರ್ವರೂ ಸಹಕರಿಸುವಂತೆ ಮುಖ್ಯಮಂತ್ರಿ ವಿನಂತಿಸಿದರು.
ಈ ನಿರ್ಧಾರಕ್ಕೆ ಮುಖ್ಯ ಕಾರಣವೆಂದರೆ; ಕೊರೊನಾ ವೈರಸ್ ಸೋಂಕಿನಿಂದ ಕಲ್ಬುರ್ಗಿಯ ವ್ಯಕ್ತಿಯೊಬ್ಬರು ದುರದೃಷ್ಟಾವಶಾತ್ ಮೃತಪಟ್ಟಿದ್ದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ವೈದ್ಯಕೀಯ ಸಂಘಟನೆಗಳೊಂದಿಗೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಹಾಗೂ ಸಂಬಂಧಿತ ಪ್ರಮುಖರೊಂದಿಗೆ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಯಿತು ಎಂದು ಅವರು ಮಾಹಿತಿಯಿತ್ತರು.
ವಿದೇಶ ಪ್ರಯಾಣದಿಂದ ಬರುವ ಪ್ರಯಾಣಿಕರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು; ಕಡ್ಡಾಯವಾಗಿ 14 ದಿನಗಳ ಕಾಲ ಪರೀಕ್ಷೆಗೊಳಪಡಬೇಕು, ಈ ಬಗ್ಗೆ ಆಸ್ಪತ್ರೆಗಳು, ಚಿಕಿತ್ಸಾಲಯಗಳು, ಖಾಸಗಿ ಕ್ಲಿನಿಕ್ನವರು, ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಮುಖ್ಯಮಂತ್ರಿ ನುಡಿದರು.
ವ್ಯಕ್ತಿಯಿಂದ ವ್ಯಕ್ತಿಗಳಿಗೆ ಕನಿಷ್ಟ 6 ಅಡಿ ಅಂತರ ಕಾಯ್ದುಕೊಳ್ಳಿ, ಯಾರಿಗೂ ಶೇಕ್ಹ್ಯಾಂಡ್ ಕೊಡಬೇಡಿ ಎಂಂದು ಸಲಹೆಯಿತ್ತರು. ಕಲ್ಬುರ್ಗಿಯಲ್ಲಿ ಕೊರೊನಾ ಸಾವು ಪ್ರಕರಣದ ಬಳಿಕ ಆ ವ್ಯಕ್ತಿಯ ಸಂಪರ್ಕದಲ್ಲಿದ್ದ 46ಕ್ಕೂ ಅಧಿಕ ಮಂದಿಯ ಆರೋಗ್ಯದ ಮೇಲೆ ವಿಶೇಷ ನಿಗಾವಹಿಸಲಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿಯಿತ್ತರು.
ಕಾಲೇಜುಗಳಿಗೆ ರಜೆ
ಕೊರೊನಾ ವೈರಸ್ ರೋಗವು ಹರಡುತ್ತಿದ್ದು; ಈ ಬಗ್ಗೆ ಕರ್ನಾಟಕ ಸರ್ಕಾರವು ಸಾಂಕ್ರಾಮಿಕ ರೋಗವೆಂದು ಘೋಷಿಸಿರುವ
(ಮೊದಲ ಪುಟದಿಂದ) ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಲಾಖಾ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾ. 14 ರಿಂದ ಮಾ. 28 ರವರೆಗೆ 15 ದಿವಸಗಳ ಕಾಲ ರಜೆ ಘೋಷಿಸಲಾಗಿದೆ. ಆದರೆ ಎಂದಿನಂತೆ ಕಾಲೇಜಿನ ಕಚೇರಿಗಳಲ್ಲಿ ಕೆಲಸ ಕಾರ್ಯಗಳು ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ಕಾಲೇಜು ಶಿಕ್ಷಣ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
6ನೇ ತರಗತಿವರೆಗೆ ಪರೀಕ್ಷೆ ರದ್ದು
ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖಾ ಆಯುಕ್ತರು ಇಂದು ಈ ಕೆಳಗಿನ ನೂತನ ಆದೇಶ ಹೊರಡಿಸಿದ್ದಾರೆ. ಕೊರೊನಾ ರೋಗಾಣು ಶಾಲಾ ವಿದ್ಯಾರ್ಥಿಗಳಲ್ಲಿ ಪಸರಿಸುವುದನ್ನು ತಡೆಗಟ್ಟುವ ಸಲುವಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಈಗಾಗಲೇ ಸುತ್ತೋಲೆಗಳನ್ನು ನೀಡಲಾಗಿದೆ. ಇಂದು ಮತ್ತೆ ಹೊಸ ಸುತ್ತೋಲೆ ಹೊರಡಿಸಿದ್ದು; ವಿವರ ಈ ಕೆಳಗಿನಂತಿದೆ.
1 ರಿಂದ 6ನೇ ತರಗತಿಯ ಎಲ್ಲಾ ಶಾಲೆಗಳಿಗೆ ದಿನಾಂಕ: 14.3.2020 ರಿಂದ ಜಾರಿಗೆ ಬರುವಂತೆ ತರಗತಿಗಳನ್ನು ಸ್ಥಗಿತಗೊಳಿಸುವುದು ಹಾಗೂ ಒಂದು ವೇಳೆ ಪರೀಕ್ಷೆಗಳು ಚಾಲ್ತಿಯಲ್ಲಿದ್ದ ಪರೀಕ್ಷೆಗಳನ್ನು ಸಹ ಸ್ಥಗಿತಗೊಳಿಸಿ ಬೇಸಿಗೆ ರಜೆಯನ್ನು ಘೋಷಿಸುವುದು.
ವಿದ್ಯಾರ್ಥಿಗಳು 2019-20ನೇ ಶೈಕ್ಷಣಿಕ ಸಾಲಿನಲ್ಲಿ ತಾವು ಎಫ್ಎ1, ಎಫ್ಎ2, ಎಫ್ಎ 3, ಎಫ್ಎ4, ಎಸ್ಎ 1 ಮತ್ತು ಎಸ್ಎ2 (ದಿನಾಂಕ 13.3.2020ರವರೆಗೆ ನಡೆದ ಪರೀಕ್ಷೆಗಳ ಅಂಕಗಳ ಆಧಾರ)ರಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಶ್ರೇಣಿ ಕೃತ ಫಲಿತಾಂಶವನ್ನು ಪ್ರಕಟಿಸಿ ಮುಂದಿನ ತರಗತಿಗಳಿಗೆ ಬಡ್ತಿ (ಠಿಡಿomoಣe) ನೀಡುವುದು.
ಬೇಸಿಗೆ ರಜೆಯ ನಂತರ 2020-21ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯಂತೆ ಶಾಲೆಗಳನ್ನು ಪುನರಾರಂಭ ಮಾಡುವುದು.
7 ರಿಂದ 10 ಪರೀಕ್ಷೆ
ದಿನಾಂಕ: 14.3.2020 ರಿಂದ ಜಾರಿಗೆ ಬರುವಂತೆ ತರಗತಿಗಳನ್ನು ಪರೀಕ್ಷಾ ಪೂರ್ವಸಿದ್ಧತಾ ರಜೆಯ (Sಣuಜಥಿ ಐeಚಿve) ಮಾದರಿಯಲ್ಲಿ ಸ್ಥಗಿತಗೊಳಿಸಿ ಪರೀಕ್ಷಾ ದಿನಗಳಂದು ಮಾತ್ರ ಹಾಜರಾಗಲು ಸೂಚಿಸುವುದು. 7 ರಿಂದ 9ನೇ ತರಗತಿಯ ವಿದ್ಯಾರ್ಥಿ ಗಳಿಗೆ ದಿನಾಂಕ 23.3.2020ರೊಳಗೆ ಪರೀಕ್ಷೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಿ, ಬೇಸಿಗೆ ರಜೆಯನ್ನು ಘೋಷಿಸುವುದು.
10ನೇ ತರಗತಿಯ ವಿದ್ಯಾರ್ಥಿ ಗಳಿಗೆ ಈಗಾಗಲೇ ನಿಗದಿಯಾಗಿರುವ ವೇಳಾಪಟ್ಟಿಯಂತೆ ಪರೀಕ್ಷೆಯನ್ನು ನಡೆಸುವುದು. ಬೇಸಿಗೆ ರಜೆಯ ನಂತರ 2020-21ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯಂತೆ ಶಾಲೆಗಳನ್ನು ಪುನರಾರಂಭ ಮಾಡುವುದು.
ವಿದ್ಯಾರ್ಥಿಗಳು ಸುರಕ್ಷತಾ ಕ್ರಮವಾಗಿ ಮಾಸ್ಕ್ (mಚಿsಞ) ಧರಿಸಿ ಪರೀಕ್ಷೆಯನ್ನು ಬರೆಯಲು ಇಚ್ಛಿಸಿದ್ದಲ್ಲಿ; ಅಂತಹ ವಿದ್ಯಾರ್ಥಿಗಳಿಗೆ ಅನುಮತಿ ಯನ್ನು ನೀಡುವುದು. ಪರೀಕ್ಷೆಗಳ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಶಾಲಾ ಮುಖ್ಯಸ್ಥರುಗಳಿಗೆ ತಿಳಿಸಿದೆ.
ಮೇಲಿನ ಆದೇಶ, ಅದರಲ್ಲಿನ ಎಲ್ಲಾ ಸೂಚನೆಗಳನ್ನು ಒಳ ಗೊಂಡಂತೆ; ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಪಠ್ಯಕ್ರಮ, ಸಿಬಿಎಸ್ಇ, ಐಸಿಎಸ್ಸಿ, ಐಜಿಸಿಎಸ್ಸಿ, ಐಬಿ ಮುಂತಾದ ಪಠ್ಯಕ್ರಮದ ಎಲ್ಲಾ ಶಾಲೆಗಳಿಗೂ ಅನ್ವಯವಾಗುತ್ತದೆ.
ಆಧಾರ್ ಶಿಬಿರ ಮುಂದೂಡಿಕೆ
ಪ್ರಸ್ತುತ ಕೊರೊನಾ ರೋಗÀದ ಭೀತಿಯ ಹಿನ್ನಲೆಯಲ್ಲಿ ಜನದಟ್ಟಣೆ ಯನ್ನು ಇಲ್ಲದಂತೆ ಮಾಡುವ ಉದ್ದೇಶ ದಿಂದ ಅಂಚೆ ಇಲಾಖೆ ಹಲವೆಡೆ ಆಯೋಜಿಸಿದ್ದ, ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕಾರ್ಯಕ್ರಮವನ್ನು ಮುಂದೂಡ ಲಾಗಿದೆ. ತಾ. 15 ರಂದು ಚೆಟ್ಟಳ್ಳಿ, ತಾ. 16 ಮತ್ತು 20 ರಂದು ಸೋಮವಾರಪೇಟೆ, ತಾ. 16 ರಂದು ಭಾಗಮಂಡಲದಲ್ಲಿ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು, ಇದೀಗ ಇದನ್ನು ಮುಂದೂಡಿರುವುದಾಗಿ ಪ್ರಕಟಣೆ ತಿಳಿಸಿದೆ.
ಉರೂಸ್ ಮುಂದೂಡಿಕೆ
ಇತಿಹಾಸ ಪ್ರಸಿದ್ಧ ಗುಡುಗಳಲೆ ಗಜ್ರತ್ ಪಕೀರ್ ಷಾ ವೆಲಿಯುಲ್ಲಾರ ಪುರ ಉರೂಸ್ ಕಾರ್ಯಕ್ರಮವನ್ನು ತಾ. 14 ಹಾಗೂ 15 ರಂದು ನಡೆಸಲು ಆಡಳಿತ ಕಮಿಟಿ ತೀರ್ಮಾನಿಸಿತ್ತು. ಈ ಕಾರ್ಯಕ್ರಮ ವನ್ನು ಕೊರೊನಾ ಮುಂಜಾಗ್ರತೆಗಾಗಿ ಅನಿರ್ದಿಷ್ಟವಾಗಿ ಮುಂದೂಡಲಾಗಿದೆ. ಸಾರ್ವಜನಿಕರು, ಭಕ್ತಾದಿಗಳು ಸಹಕರಿಸಬೇಕಾಗಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಕೋರಿದ್ದಾರೆ.
ಆರ್ಮಿ ಕ್ಯಾಂಟೀನ್ಗೆ ರಜೆ
ದೇಶ ವ್ಯಾಪ್ತಿ ಹಾಗೂ ಇದೀಗ ಕರ್ನಾಟಕದಲ್ಲಿ ಕೊರೊನಾ ಭೀತಿಯ ಹಿನ್ನಲೆಯಲ್ಲಿ ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿರುವ ಆರ್ಮಿ ಕ್ಯಾಂಟೀನ್ಗೆ ರಜೆ ಘೋಷಿಸಲಾಗಿದೆ. ತಾ. 14 ರಿಂದ 22 ರವರಗೆ ಕ್ಯಾಂಟೀನ್ ಮುಚ್ಚಲ್ಪಟ್ಟಿರುತ್ತದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.