ಮಡಿಕೇರಿ, ಮಾ. 14 : ಪವಿತ್ರ ತಲಕಾವೇರಿ ದೇವಾಲಯದಲ್ಲಿ ತಾ. 18 ರಂದು ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ 3 ಗಂಟೆಯ ನಂತರ ದೇವಸ್ಥಾನಕ್ಕೆ ಪ್ರವೇಶ ಇರುವುದಿಲ್ಲವಾದ್ದರಿಂದ ಭಕ್ತಾದಿಗಳು ಸಹಕರಿಸಬೇಕಾಗಿ ಆಡಳಿತ ಮಂಡಳಿ ಪ್ರಕಟಣೆ ಕೋರಿದೆ.