ಹನ್ನೊಂದು ದಿನ ತಡವಾಗಿ...

ತಾ. 4 ರಂದು 64ನೇ ವರ್ಷಕ್ಕೆ ಕಾಲಿಟ್ಟ ಶಕ್ತಿ ಪತ್ರಿಕೆಗೆ ಶುಭ ಕೋರಿ ಅನೇಕ ಸ್ನೇಹಿತರು ಶುಭ ಹಾರೈಸಿದ್ದರು. ಪತ್ರಿಕೆಯಲ್ಲಿ ಸುದ್ದಿ ಒತ್ತಡದ ಕಾರಣ ಇಂದು ಅವುಗಳನ್ನು ಪ್ರಕಟಿಸುವ ಮೂಲಕ ನಮ್ಮ ಕೃತಜ್ಞತೆ ಸಲ್ಲಿಸುತ್ತಿದೆ.ಬಿ.ಎಸ್. ಗೋಪಾಲಕೃಷ್ಣ ಅವರು ಹುಟ್ಟುಹಾಕಿದ ಶಕ್ತಿ ಪತ್ರಿಕೆಯನ್ನು ಮೂರು ಜನ ಸಹೋದರರು ವಿರಸ ಹಾಗೂ ವೈಮನಸು ಬಾರದೆ ಹಾಲು ಜೇನಿನಂತೆ ಒಗ್ಗಟ್ಟಿನಿಂದ ನಡೆಸಿಕೊಂಡು ಹೋಗುತ್ತಿರುವುದು ಪ್ರಶಂಸನೀಯ. ಕೊಡಗಿನ ಜನರ ಕುಂದು ಕೊರತೆಗಳನ್ನು, ರಾಜಕೀಯ ಜಂಜಾಟವನ್ನು, ಕಥೆ-ಕಾದಂಬರಿಗಳ ಮೂಲಕ ನಿಮ್ಮ ಪತ್ರಿಕೆಯಲ್ಲಿ ಪಾರದರ್ಶಕವಾಗಿ ಪ್ರಕಟಿಸಿ ಜನರ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಿರುವುದು ಕೊಡಗಿನ ಜನರಿಗೆ ದೊಡ್ಡ ಕೊಡುಗೆ. ಪತ್ರಿಕೆ ಇನ್ನಷ್ಟು ಉಜ್ವಲವಾಗಿ ಬೆಳೆಯಲಿ. ಇಗ್ಗುತ್ತಪ್ಪ, ಕಾವೇರಮ್ಮ ನಿಮಗೆ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ.

- ಎ.ಎಸ್. ಕಟ್ಟಿ ಮಂದಯ್ಯ, ಸಾರ್ವಜನಿಕ ಹಿತರಕ್ಷಣಾ ಸಮಿತಿ, ಕೊಡಗು ಜಿಲ್ಲೆ.ಬಿ.ಎಸ್. ಗೋಪಾಲಕೃಷ್ಣ ಅವರು ಹುಟ್ಟುಹಾಕಿದ ಶಕ್ತಿ ಪತ್ರಿಕೆಯನ್ನು ಮೂರು ಜನ ಸಹೋದರರು ವಿರಸ ಹಾಗೂ ವೈಮನಸು ಬಾರದೆ ಹಾಲು ಜೇನಿನಂತೆ ಒಗ್ಗಟ್ಟಿನಿಂದ ನಡೆಸಿಕೊಂಡು ಹೋಗುತ್ತಿರುವುದು ಪ್ರಶಂಸನೀಯ. ಕೊಡಗಿನ ಜನರ ಕುಂದು ಕೊರತೆಗಳನ್ನು, ರಾಜಕೀಯ ಜಂಜಾಟವನ್ನು, ಕಥೆ-ಕಾದಂಬರಿಗಳ ಮೂಲಕ ನಿಮ್ಮ ಪತ್ರಿಕೆಯಲ್ಲಿ ಪಾರದರ್ಶಕವಾಗಿ ಪ್ರಕಟಿಸಿ ಜನರ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಿರುವುದು ಕೊಡಗಿನ ಜನರಿಗೆ ದೊಡ್ಡ ಕೊಡುಗೆ. ಪತ್ರಿಕೆ ಇನ್ನಷ್ಟು ಉಜ್ವಲವಾಗಿ ಬೆಳೆಯಲಿ. ಇಗ್ಗುತ್ತಪ್ಪ, ಕಾವೇರಮ್ಮ ನಿಮಗೆ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ.

- ಎ.ಎಸ್. ಕಟ್ಟಿ ಮಂದಯ್ಯ, ಸಾರ್ವಜನಿಕ ಹಿತರಕ್ಷಣಾ ಸಮಿತಿ, ಕೊಡಗು ಜಿಲ್ಲೆ.ಕೊಡಗಿನ ಶಕ್ತಿ ಪತ್ರಿಕೆ ಬೆಳೆಯುತ್ತಲೇ ಇರಲಿ!

ಈ ನೆಲದ ಇಲ್ಲಿಯ ಜನರ ಮನದ ಓರೆ ಕೋರೆ ದು:ಖ ದಮ್ಮಾನಗಳ ಶಮನ ಗೊಳಿಸುವ ದಿಟ್ಟ ಮಾದ್ಯಮಕ್ಕೆ ಹಾಗೂ ಶಕ್ತಿ ಬಳಗಕ್ಕೆ ನನ್ನ ಶುಭ ಕಾಮನೆ! - ಚಕ್ಕೇರ ತ್ಯಾಗರಾಜ್‍ಕೊಡಗಿನ ಹೆಮ್ಮೆಯ ಪತ್ರಿಕೆಯಾಗಿ, ಜನತೆಯ ಧ್ವನಿಯಾಗಿ, ನನ್ನಂತಹ ಉದ್ಯೋಗಿಗಳಿಗೆ ಕೆಲಸ ನೀಡಿ ಕೈ ಹಿಡಿದು ಮುನ್ನಡೆಸಿ ಜೀವನದ ದಾರಿಗೆ ದೀಪವಾಗಿ, ಚೈತನ್ಯ ಚಿಲುಮೆಯಾಗಿ ಇದೀಗ 63ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಶಕ್ತಿ ದಿನಪತ್ರಿಕೆಗೆ ಹಾಗೂ ಶಕ್ತಿ ಬಳಗಕ್ಕೆ ನನ್ನ ಹೃದಯ ಪೂರಕ ಶುಭಾಶಯಗಳು.

- ಚೇತನ್ ಆಚಾರ್ಯ ಮತ್ತು ಕುಟುಂಬ63 ವಸಂತಗಳ ಯಶಸ್ವಿ ಪ್ರಯಾಣ ಮುಗಿಸಿ, 64 ನೇ ಹೊಸ್ತಿಲಲ್ಲಿ ಹೊಸ ಯೋಚನೆ, ಹೊಸ ಯೋಜನೆ, ಕ್ಷಿಪ್ರ ಬದಲಾವಣೆ, ಶಕ್ತಿ ಬಳಗದ ನೂರಾರು ಮನಸ್ಸುಗಳಿಗೆ ಟಾನಿಕ್‍ನಂತೆ ಬದುಕಿಗೊಂದು ದಾರಿ ಕಲ್ಪಿಸಿ, ಎಷ್ಟೋ ಮನಸ್ಸುಗಳಿಗೆ ಸಾಂತ್ವನ, ಸಮಾಧಾನ ನೀಡುವದರೊಂದಿಗೆ ವಾಸ್ತವ ಪತ್ರಿಕೋದ್ಯಮದ ಬರಹ ಶೈಲಿಯನ್ನು ಸ್ವಾರ್ಥವಿಲ್ಲದೆ ಹಂಚಿ ಉತ್ತಮ ಪತ್ರಕರ್ತರನ್ನು ತಯಾರು ಮಾಡುತ್ತಿರುವ ಕಾರ್ಖಾನೆ ಎಲ್ಲರ ನೆಚ್ಚಿನ ಶಕ್ತಿ... ಶಕ್ತಿ ಉದ್ದದ ರೈಲು ಬಂಡಿ ಇದ್ದ ಹಾಗೆ... ನಿಲ್ದಾಣ ಬರುವಾಗ ಹಲವರು ಇಳಿಯುತ್ತಾರೆ, ಹಲವರು ಹತ್ತುತ್ತಾರೆ... ಕೆಲವರು ಓಡಿ ಹೋದವರು ಮತ್ತೆ ಬಂದು ಹತ್ತುತ್ತಾರೆ... ನೋವು ,ನಲಿವು, ಕೋಪ, ತಾಪ, ದುಃಖ ದುಮ್ಮಾನ, ಮುಂಗೋಪ, ಉಸಿ ಮುನಿಸು, ಹೊಟ್ಟೆ ಉರಿ, ಪಲಾಯನ ವಾದ, ಅಲ್ಲೆಲ್ಲೋ ಮಧ್ಯೆ ಮಧ್ಯೆ ಶಾಂತಿ, ಸಮಾಧಾನ, ಸಮರ್ಥನೆ ಒಟ್ಟಾರೆ ಬದುಕಿನಲ್ಲಿ ಅನುಭವದ ಪಾಠ ಕಲಿಸುವ ವಿದ್ಯಾಲಯ ಈ ನಮ್ಮ ಶಕ್ತಿ... ಶತಮಾನದ ಮೆಟ್ಟಿಲೇರಲು ಕೇವಲ 26 ವರ್ಷದ ಹಾದಿ ಮಾತ್ರಾ... ಶಕ್ತಿ ಮತ್ತಷ್ಟು ಪ್ರಜ್ವಲಮಾನವಾಗಿ ಪ್ರಕಾಶಿಸಲು ಹೊಸ ನೀರು ಹೊಸ ಪ್ರತಿಭೆ ಮತ್ತಷ್ಟು ಹರಿದು ಬರಲಿ ಎಂದು ಶುಭ ಹಾರೈಸುವ...

- ಟಿ.ಎಲ್. ಶ್ರೀನಿವಾಸ್ ಗೋಣಿಕೊಪ್ಪಲುಶಕ್ತಿಯ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ ಪವಿತ್ರ ಮಡಿಕೇರಿ, ಡಾ. ರೇಖಾ ವಸಂತ್, ಅನಿಲ್ ಹೆಚ್.ಟಿ., ರಾಜ್ ಕುಶಾಲಪ್ಪ ಬಾಳೆಲೆ, ಜಿ.ಟಿ. ರಾಘವೇಂದ್ರ, ಉಪನ್ಯಾಸಕಿ ಕೆ. ಜಯಲಕ್ಷ್ಮಿ, ಕಿಗ್ಗಾಲು ಹರೀಶ್, ಲವೀನ್ ನಾಪೋಕ್ಲು, ನಾಗೇಶ್ ಸೋಮವಾರಪೇಟೆ, ಪ್ರಾಂಶುಪಾಲೆ ದೇಚಮ್ಮ, ಲೀಲಾ ದಯಾನಂದ್, ಎನ್.ವಿ. ರಾವ್, ಗಾನಪ್ರಶಾಂತ್, ತೇಲಪಂಡ ಶೈಲ, ವೀಣಾಕ್ಷಿ ಮಾಜಿ ನಗರಸಭಾ ಸದಸ್ಯೆ, ಲಿಂಗರಾಜು ಮಡಿಕೇರಿ, ಎಂ.ಎ ವಸಂತ್, ಜಿಲ್ಲಾ ಜಾನಪದ ಪರಿಷತ್ ಖಜಾಂಚಿ ಸಂಪತ್ ಕುಮಾರ್, ಲೇಖಕಿ ಫ್ಯಾನ್ಸಿ ಮುತ್ತಣ್ಣ, ಜ್ಯೋತಿ ಶುಭಕರ್ ಸೋಮವಾರಪೇಟೆ, ಚಿತ್ರ ಹರೀಶ್, ಕನ್ನಿಕ ಇಂಟರ್‍ನ್ಯಾಷನಲ್ ಮಾಲಿಕ ನಾಗೇಂದ್ರ ಪ್ರಸಾದ್, ಸೌಭಾಗ್ಯ ಮೈಸೂರು, ಕಲಾವಿದ ಮೋಹನ್, ಸುಪ್ರಜಾ ಗುರುಕುಲ ಶಾಲೆಯ ಸುಜಲಾದೇವಿ, ಡಾ. ಆಶಿಕ್, ಜಿ.ಪಂ. ಸದಸ್ಯ ಅಬ್ದುಲ್ ಲತೀಫ್, ಜಮುನಾ ಗೋಣಿಕೊಪ್ಪ, ಚಂಗಪ್ಪ ತತಿಮತಿ, ಚಮ್ಮಟಿರ ಪ್ರವೀಣ್, ಸುಮನ್ ತಮ್ಮಯ್ಯ, ವಿಜಯಲಕ್ಷ್ಮಿ ಚೇತನ್, ಮಾಜಿ ನಗರಸಭಾ ಸದಸ್ಯೆ ಅನಿತಾ ಪೂವಯ್ಯ, ಪ್ರಜ್ವಲ್ ಎಂ.ಗೌಡ, ವಿಜೇತ್ ಎಸ್.ಬಿ ಸೋಮವಾರಪೇಟೆ, ನವೀನ್ ಚೇಂಬರ್ ಆಫ್ ಕಾಮರ್ಸ್, ಆಶಾ ಹೆಗ್ಡೆ ಬೆಂಗಳೂರು, ಪೂಮಾಲೆ ಪತ್ರಿಕೆಯ ಪ್ರಮಿಳಾ ನಾಚ್ಚಯ್ಯ, ಸೇವಾಭಾರತಿಯ ಚಂದ್ರ, ರಫೀಕ್ ಆಕಾಶವಾಣಿ, ಶ್ರೀದರ್ ನೆಲ್ಲಿತ್ತಾಯ, ವಕೀಲ ಸುಮಂತ್, ನರಸಿಂಹ ಹೆಗ್ಡೆ ಬೆಂಗಳೂರು, ಲಕ್ಷ್ಮೇಶ್ ಹೆಚ್.ಕೆ, ಎಂ.ಎ ಪೊನ್ನಪ್ಪ ಬೆಂಗಳೂರು, ಎಂ.ಕೆ. ಅರುಬ, ಅಜಿತ್ ಪಾಲಿಬೆಟ್ಟ, ನೆಲ್ಲಿತೀರ್ಥ ಕುಟುಂಬ, ದಿನೇಶ್ ಮಾಲಂಬಿ, ಸತ್ಯಮೂರ್ತಿ ಪೊನ್ನಂಪೇಟೆ, ಮಂಜುನಾಥ್, ಅರುಣ್ ಕುಮಾರ್, ಚಂಗಪ್ಪ ಎಸ್.ಎಂ, ಕೆ.ಕೆ. ಬೋಪಣ್ಣ, ಕಿಶೋರ್ ರೈ ಕತ್ತಲೆಕಾಡು, ಹೆಚ್.ಕೆ ಜಗದೇಶ್, ಟಿ.ಇ. ರಮೇಶ್, ದುಗ್ಗಳ ಸದಾನಂದ ನಾಪೋಕ್ಲು, ಸಣ್ಣುವಂಡ ಕಾವೇರಪ್ಪ ನಾಪೋಕ್ಲು, ನಾಗರತ್ನ ಬೆಂಗಳೂರು, ಅಜಿತ್ ಕರುಂಬಯ್ಯ ಪಾಲಿಬೆಟ್ಟ, ಗಣೇಶ್ ಕುಮಾರ್ ಮಡಿಕೇರಿ, ಗಿರೀಶ್ ಮಡಿಕೇರಿ, ತಿಮ್ಮಪ್ಪ-7ನೇ ಹೊಸಕೋಟೆ, ಶೀಲಾ ಮಡಿಕೇರಿ, ಸುಮನ್ ಪಾಲಾಕ್ಷ ಮಡಿಕೇರಿ, ಸತೀಶ್, ಬಬಿತಾ, ಶ್ರೇಯಸ್ ಮಡಿಕೇರಿ, ಪವಿತ್ರ ಮಡಿಕೇರಿ, ವಿಜೇತ್ ಸೋಮವಾರಪೇಟೆ, ವಂದನಾ ಪೊನ್ನಪ್ಪ ಮಡಿಕೇರಿ, ಶೈಲಾ ಮಡಿಕೇರಿ, ವೀಣಾಕ್ಷಿ ಮಡಿಕೇರಿ, ಆಶಾ ಕಾರ್ಕಳ, ಹೆಚ್.ಕೆ. ಜಗದೀಶ್, ರಫೀಕ್ ತೂಚಮಕೇರಿ ಪೊನ್ನಂಪೇಟೆ, ಹರೀಶ್ ಮಾದಪ್ಪ ಶ್ರೀಮಂಗಲ, ಪ್ರಭಾಕರ್ ನಾಪೋಕ್ಲು, ಪಪ್ಪು ತಿಮ್ಮಯ್ಯ ಚೆಟ್ಟಳ್ಳಿ, ಸುನಿಲ್ ಭಾಗಮಂಡಲ, ದಿನೇಶ್ ತಿತಿಮತಿ, ಅನು ಕಾರ್ಯಪ್ಪ, ಆದಿತ್ಯ ಮಡಿಕೇರಿ, ಲೋಕೇಶ್ ಸಾಗರ್ ಕುಶಾಲನಗರ, ಕೆ.ಎಸ್. ಮೂರ್ತಿ ಕುಶಾಲನಗರ, ರಾಜ್ ಕುಶಾಲಪ್ಪ ಹುದಿಕೇರಿ, ಕರುಣ್ ಕಾಳಯ್ಯ ಚೆಟ್ಟಳ್ಳಿ, ವಾಸು ಸಿದ್ದಾಪುರ, ರೇಖಾ ಗಣೇಶ್ ವೀರಾಜಪೇಟೆ, ದುಗ್ಗಳ ಸದಾನಂದ ನಾಪೋಕ್ಲು, ಅರುಬ, ಎಂ.ಪಿ. ಮುತ್ತಪ್ಪ ಅವರುಗಳಿಗೆ ಧನ್ಯವಾದಗಳು.ಉತ್ತಮ ಸಂಪಾದಕೀಯ

ಇಂದು ಸಮಾಜವನ್ನು ನಾವೆಲ್ಲಿ ದಾರಿ ತಪ್ಪಿಸುತ್ತಿದ್ದೇವೆ?

ತಾ 4 ರಂದು ಶಕ್ತಿ ದಿನಪತ್ರಿಕೆಯಲ್ಲಿ ಸಂಪಾದಕರ ಬರವಣಿಗೆಯಾದ “ನಂಬಿಕೆಯ ಕೊಂಡಿ ಕಳಚುತ್ತಿದೆ” ಎಂಬ ಬರವಣಿಗೆ ಸಮಯೋಚಿತವಾಗಿತ್ತು. ಇದು ವಾಸ್ತವವೂ ಕೂಡ. ಹೌದು, ನಾವು ನಂಬಿಕೆಯ ಕೊಂಡಿಯನ್ನು ಕಳಚಲು ಪ್ರಾರಂಭಿಸಿದ್ದೇವೆ. ಮನುಷ್ಯನ ಜೀವನವೇ ನಡೆಯುವುದು ನಂಬಿಕೆಯ ಮೇಲೆ ಎಂದು ತಮ್ಮ ಬರವಣಿಗೆಯಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ. ಅವರ ಲೇಖನದಲ್ಲಿ ಉಲ್ಲೇಖಿಸಿದಂತೆ ಭಾರತವೊಂದು ಜಾತ್ಯತೀತ ನಿಲುವಿನ ರಾಷ್ಟ್ರ. ಇತ್ತೀಚಿನ ದಿನಗಳವರೆಗೆ ಹಬ್ಬಗಳು ಸಾರ್ವತ್ರಿಕವಾಗಿ, ಜಾತ್ಯತೀತವಾಗಿ, ಶಾಂತಿಯುತವಾಗಿ ಆಚರಿಸಿಕೊಂಡು ಬರುತ್ತಿದ್ದೆವು. ಯಾವುದೇ ಸಮಸ್ಯೆಗಳಿರಲಿಲ್ಲ. ಇಂದು ವಿದ್ಯಾವಂತರಾಗಿದ್ದಾರೆ. ಆದರೆ ದುರದೃಷ್ಟಕರ ವಿಚಾರವಂತಿಕೆ ಕಡಿಮೆ ಉಳ್ಳವರಾಗಿದ್ದಾರೆ. ಒಂದು ಸಂದೇಶಗಳಿಂದ, ಉದ್ರೇಕರಾಗಿ ಭಾಷಣಗಳಿಂದ, ಹೇಳಿಕೆಗಳಿಂದ ಸಮಾಜದಲ್ಲಿ ಉಂಟಾಗುವ ಪರಿಣಾಮದ ಬಗ್ಗೆ ಇವರಿಗೆ ಚಿಂತನೆಗಳು ಇರುವುದಿಲ್ಲ. ಇಂತಹ ಬೆಳವಣಿಗೆಯಿಂದ ಕೆಲವರಿಗೆ ಲಾಭವಾದರೆ ಇನ್ನೂ ಕೆಲವರಿಗೆ ಹವ್ಯಾಸ. ಯಾವ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಬೇಕಿತ್ತೋ ಅಲ್ಲಿ ಜಾತಿ ಎಂಬ ವಿಷ ಬೀಜವನ್ನು ಬಿತ್ತಿ ನಂಬಿಕೆ ಎಂಬ ಕೊಂಡಿಯನ್ನು ಕಳಚಿದ್ದೇವೆ. ಅಪನಂಬಿಕೆ ಎಂಬ ವಿಷ ಬೀಜವು ಇಂದು ಬೃಹದಾಕಾರವಾಗಿ ಬೆಳೆದಿದೆ.

ಸಮಾಜದಲ್ಲಿ ಇಂದಿಗೂ ನಂಬಿಕೆ ಕೆಲಸ ಮಾಡುತ್ತಿದೆ. ಇಲ್ಲದಿದ್ದರೆ ನಮ್ಮ ಸಾಮಾಜಿಕ ಬದುಕು ಛಿದ್ರ ಛಿದ್ರವಾಗುತ್ತಿತ್ತು. ಇಂದು ನಾವು ಸಮಾಜವನ್ನು ಒಡೆದು ಆಳುತ್ತಿರುವವರು ಯಾರು ಎಂಬುದನ್ನು ಗಮನಿಸಬೇಕು. ಒಂದು ಮತೀಯವಾದಿಗಳು ಇನ್ನೊಂದು ಅವಕಾಶವಾದಿಗಳು. ಮತೀಯವಾದಿಗಳು ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ತಮ್ಮ ಬೇಳೆ ಬೇಯಿಸಿಕೊಂಡರೆ ಇನ್ನು ಕೆಲವರು ಜಾತಿಯ ವಿಷ ಬೀಜ ಬಿತ್ತಿ ಅಶಾಂತಿ ಉಂಟು ಮಾಡುತ್ತಾರೆ. ಇನ್ನು ಅವಕಾಶವಾದಿಗಳು ಸಮಯಕ್ಕೆ ತಕ್ಕಂತೆ ಸನ್ನಿವೇಶ ಉಪಯೋಗಿಸಿಕೊಂಡು ಸಂದರ್ಭದ ಲಾಭ ಪಡೆಯುತ್ತಾರೆ. ಇದರೊಡನೆ ಇನ್ನೊಂದು ವರ್ಗವಿದೆ. ಇವರಿಗೆ ಹೆಸರಿಡುವುದೇ ಕಷ್ಟ. ಇವರು ಒಂದು ತಟಸ್ಥ ರೂಪದವರು. ಇವರು ಅತೀ ಹೆಚ್ಚಾಗಿ ಕಾಣ ಸಿಗುವುದು ಸಾಮಾಜಿಕ ತಾಣಗಳಲ್ಲಿ. ಸಾಮಾಜಿಕ ತಾಣಗಳಲ್ಲಿನ ಸಂದೇಶಗಳನ್ನು ಗಮನಿಸಿದಾಗ ಇದರ ವಾಸ್ತವ ಅರಿವಾಗುತ್ತದೆ. ಸಮಾಜದಲ್ಲಿ ನಡೆಯದಂತಹ ಘಟನೆಗಳ ನಂಬಿಕೆಯ ಕೊಂಡಿ ಕಳಚುವಂತಹ ಜಾತೀಯತೆ ಸಂದೇಶಗಳು ಬಂದರೆ ಸಾಕು. ಅದರ ವಾಸ್ತವಿಕತೆ ಸತ್ಯಾಂಶ ಅದರಿಂದ ಸಮಾಜದ ಮೇಲಾಗುವ ಪರಿಣಾಮದ ಬಗ್ಗೆ ಚಿಂತಿಸದೆ ಏನೋ ಒಂದು ಘನ ಕಾರ್ಯ ಮಾಡಿದ ಹಾಗೆ ಸಾಮಾಜಿಕ ತಾಣಗಳಲ್ಲಿ ಹರಿಯ ಬಿಡುತ್ತಾರೆ. ಅದರ ಸತ್ಯಾಂಶವನ್ನು ಅರಿಯುವುದೇ ಇಲ್ಲ. ಇದರಿಂದ ಇವರಿಗೆ ಲಾಭವೂ ಇಲ್ಲ. ಅಂತಹ ಸಂದೇಶದಿಂದ ಸಮಾಜದಲ್ಲಿ ಉಂಟಾಗುವ ಕೆಟ್ಟ ಪರಿಣಾಮದ ಬಗ್ಗೆ ಚಿಂತನೆ ಇರುವುದಿಲ್ಲ.

ನಾವು ಬದುಕುತ್ತಿರುವ ಸಮಾಜದಲ್ಲಿ ಅನೇಕ ಜಾತಿ ಧರ್ಮಗಳಿವೆ. ವಿಭಿನ್ನ ಸಂಸ್ಕøತಿಗಳಿವೆ, ವಿಭಿನ್ನ ಜನರಿದ್ದಾರೆ. ಇಲ್ಲಿ ಒಬ್ಬರಿಗೊಬ್ಬರು ಸಹಾಯಹಸ್ತ ಬೀರಿದರೆ ಮಾತ್ರ ಬದುಕಬಹುದು. ಇಂದು ನಾವು ಬಿತ್ತಿದ ಸಂಶಯದ ಬೀಜವು ನಮ್ಮನ್ನೇ ಮುಂದೆ ಬೆಳೆದು ನುಂಗಿ ಹಾಕುತ್ತದೆ. ಇದನ್ನು ತಡೆಯದಿದ್ದರೆ ನಮ್ಮ ಬದುಕಿನ ಕಂದಕವನ್ನು ನಾವೇ ತೋಡಿಕೊಂಡಂತೆ. ಇಂದು ನಾವು ಒಂದು ಜಾತಿ, ಮತದವರು ಒಬ್ಬರನೊಬ್ಬರು ಅರಿತು ಬಾಳಿದರೆ ನಮಗೂ ಒಳಿತು. ಒಬ್ಬರನೊಬ್ಬರು ಸಂಶಯಿಸುವ ಪ್ರವೃತ್ತಿಯಿಂದ ಹೊರ ಬಂದು ಮುಂದಿನ ಪೀಳಿಗೆಗೆ ಸುಭದ್ರತೆಯ ಜೀವನ ನಡೆಸುವಂತಾಗಬೇಕು. ಕಳಚದಿರಲಿ ಸಮಾಜದ ಕೊಂಡಿ ಎಂಬ ಆಶಯದೊಡನೆ ಜೀವಿಸೋಣ.

- ಕಿಶನ್ ಪೂವಯ್ಯ