ಗೋಣಿಕೊಪ್ಪಲು, ಮಾ. 14: ನೆಹರು ಯುವ ಕೇಂದ್ರ ಕೊಡಗು ಮಡಿಕೇರಿ, ತಾಲೂಕು ಯುವ ಒಕ್ಕೂಟ ವೀರಾಜಪೇಟೆ ಹಾಗೂ ಶ್ರೀದೇವಿ ಯುವತಿ ಮಂಡಳಿ ಗೋಣಿಕೊಪ್ಪಲು. ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಗೋಣಿಕೊಪ್ಪಲಿನ ಮಹಿಳಾ ಸಮಾಜ ಸÀಭಾಂಗಣದಲ್ಲಿ ನೆರೆ ಹೊರೆ ಯುವ ಜನ ಸಂಸತ್ತು ಕಾರ್ಯಕ್ರಮವು ನೆರವೇರಿತು.

ಕಾರ್ಯಕ್ರಮವನ್ನು ಗೋಣಿಕೊಪ್ಪಲಿನ ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ ಉದ್ಘಾಟಿಸಿ ಮಾತನಾಡಿ, ನೆಹರು ಯುವ ಕೇಂದ್ರ ಪ್ರಾಯೋಜಿತ ಈ ರೀತಿಯ ಕಾರ್ಯಕ್ರಮವು ಯುವಜನತೆಯಲ್ಲಿ ಜ್ಞಾನವನ್ನು ಹೆಚ್ಚಿಸುವುದರೊಂದಿಗೆ ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಮಾಜದ ಮುಖ್ಯ ವಾಹಿನಿಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗುತ್ತದೆ ಎಂದÀರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಜಿಲ್ಲಾ ಯುವ ಒಕ್ಕೂಟ ಮಾಜಿ ಅಧ್ಯಕ್ಷ ಕೆ.ಎಸ್. ಪ್ರಮೋದ್ ಗಣಪತಿ ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಒಕ್ಕೂಟಗಳು ಹಾಗೂ ಗ್ರಾಮೀಣ ಯುವ ಸಂಘಟನೆಗಳು ಪರಸ್ಪರ ಸಂಪರ್ಕ ದೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಗೊಳಿಸಿದ್ದಲ್ಲಿ ಯುವ ಸಂಘಟನೆಗಳು ಗ್ರಾಮೀಣ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಆಶಾ ಭಾವನೆ ವ್ಯಕ್ತಪಡಿಸಿದರು.ಮತ್ತೋರ್ವ ಅತಿಥಿ ಗೋಣಿಕೊಪ್ಪಲು ಮಹಿಳಾ ಸಮಾಜದ ಕಾರ್ಯದರ್ಶಿ ಕೊಣಿಯಂಡ ಬೋಜಮ್ಮ ಮಾತನಾಡಿ, ಯುವಜನತೆಯ ಸದುದ್ದೇಶದ ಎಲ್ಲ ಕಾರ್ಯಕ್ರಮಗಳಿಗೆ ನಾಡಿನ ಜನತೆ ಪೂರ್ಣ ಸಹಕಾರ ನೀಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವೀರಾಜಪೇಟೆ ತಾಲೂಕು ಯವ ಒಕ್ಕೂಟದ, ಅಧ್ಯಕ್ಷೆ ಮನೆಯಪಂಡ ಶೀಲಾ ಬೋಪಣ್ಣ ನೆಹರು ಕೇಂದ್ರದ ಹಲವಾರು ಕಾರ್ಯಕ್ರಮಗಳನ್ನು ಯುವ ಸಂಘಟನೆಗಳ ನೆರವಿನೊಂದಿಗೆ ನೆಹರು ಯುವ ಕೇಂದ್ರದ ನಿರ್ದೇಶನದಂತೆ, ಯುವ ಒಕ್ಕೂಟವು ಕಾರ್ಯಗತ ಗೊಳಿಸುತ್ತಿದ್ದು, ರಾಷ್ಟ್ರೀಯ ಯುವ ಕಾರ್ಯಕರ್ತರು ನೆಹರು ಯುವ ಕೇಂದ್ರ, ಯುವ ಒಕ್ಕೂಟ ಹಾಗೂ ಗ್ರಾಮೀಣ ಯುವ ಸಂಘಟನೆ ಯೊಂದಿಗೆ ಸಂಪರ್ಕ ಸೇತುವೆಯಾಗಿ ಕೆಲಸ ನಿರ್ವಹಿಸಬೇಕೆಂದರು.

ವೇದಿಕೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಕೆ.ಜಿ. ರಾಮಕೃಷ್ಣ, ಗೋಣಿಕೊಪ್ಪ ಮಹಿಳಾ ಸಮಾಜದ ಅಧ್ಯಕ್ಷೆ ಕಟ್ಟೆರ ಉತ್ತರೆ, ಶ್ರೀದೇವಿ ಯುವತಿ ಮಂಡಳಿಯ ಅಧ್ಯಕ್ಷೆ ಸಂಧ್ಯಾ ಗಣೇಶ್ ರೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯುವಜನರಿಗೆ ಉಪಯುಕ್ತವಾದ ಉಪನ್ಯಾಸ ಕಾಂiÀರ್iಕ್ರಮಗಳನ್ನು ಏರ್ಪಡಿಸಲಾಗಿತ್ತು.

ವೀರಾಜಪೇಟೆ ತಾಲೂಕಿನ ವೈದ್ಯಾಧಿಕಾರಿ ಡಾ. ಯತೀರಾಜ್ ಇವರು ‘ಬೇಸಿಗೆ ಕಾಲದಲ್ಲಿ ಆರೋಗ್ಯ ರಕ್ಷಣೆ’ ಈ ¨ಗ್ಗೆ ಉಪನ್ಯಾಸ ಮತ್ತು ಕೊರೊನಾ ವೈರಸ್ ಬಗ್ಗೆ ಮುನೆÀ್ನಚ್ಚರಿಕೆ ಹಾಗೂ ಮಾಹಿತಿ ನೀಡಿದರು. ಕಾರ್ಪೋರೇಷನ್ ಬ್ಯಾಂಕಿನ ಆರ್ಥಿಕ ಸಾಕ್ಷರತಾ ಅಧಿಕಾರಿ ಶುಭಾ ಎಸ್. ಶಂಕರ್ ಇವರು ಯುವ ಜನತೆಗೆ ಬ್ಯಾಂಕಿನ ಸೌಲಭ್ಯಗಳು ಹಾಗೂ ಸ್ವಯಂ ಉದ್ಯೋಗದ ¨ಗ್ಗೆ ಉಪನ್ಯಾಸ ನೀಡಿದರು.

ಕೊಡಗು ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಎನ್.ಎಸ್. ಕಂದಾ ದೇವಯ್ಯ ಯುವ ಸಂಘಟನೆ ಮತ್ತು ನಾಯಕತ್ವ ಹಾಗೂ ಗ್ರಾಮೀಣ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ಈ ¨ಗ್ಗೆ ಮಾಹಿತಿ ನೀಡಿದರು. ಅಲ್ಲದೇ, ಕಾನೂನು ಪಾಲನೆಯಲ್ಲಿ ಯುವಜನರ ಪಾತ್ರ ಈ ಬಗ್ಗೆ ಕಾನೂನು ತಜ್ಞರಿಂದ ಮಾಹಿತಿ ಪಡೆದರು. ರಾಷ್ಟ್ರೀಯ ಕಾರ್ಯಕರ್ತೆ ರಾಜೇಶ್ವರಿ ಮತ್ತು ಜ್ಯೋತಿ ಪ್ರಾರ್ಥಿಸಿ, ಶ್ರೀದೇವಿ ಯುವತಿ ಮಂಡಳಿಯ ಕಾರ್ಯದರ್ಶಿ ವರಲಕ್ಷ್ಮೀ ಸ್ವಾಗತಿಸಿದರು ರಾಷ್ಟ್ರೀಯ ಯುವ ಕಾರ್ಯಕರ್ತೆ ಮೇರಿ ಇವರು ನಿರೂಪಿಸಿ, ರಾಷ್ಟ್ರೀಯ ಕಾರ್ಯಕರ್ತೆ ಧನಲಕ್ಷ್ಮೀ ವಂದಿಸಿದರು.

- ಹೆಚ್.ಕೆ. ಜಗದೀಶ್