ಸುಂಟಿಕೊಪ್ಪ, ಮಾ. 14: ಸುಂಟಿಕೊಪ್ಪ ಉಲುಗುಲಿ ಗ್ರಾಮದ ಪನ್ಯದಲ್ಲಿರುವ ಬೆಳ್ಳರಿಕಮ್ಮ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶದ ಪೂಜಾ ಕೈಂಕಾರ್ಯಗಳು ತಾ. 12 ರಂದು ಸಂಪನ್ನಗೊಂಡಿತು.

ಅಂದು ಬೆಳಿಗ್ಗೆ 8.30 ಗಂಟೆಗೆ ಬ್ರಹ್ಮಕಲಶಾಭಿಷೇಕ ಕಲಾಹೋಮ ಮದ್ಯಾಹ್ನ 12 ಗಂಟೆಗೆ ಬೆಳ್ಳರಿಕಮ್ಮ ದೇವರ ನೂತನ ಉತ್ಸವ ಮೂರ್ತಿಯ ಮೆರವಣಿಗೆ ನಡೆದ ನಂತರ ಅಪರಾಹ್ನ 12.30 ಗಂಟೆಗೆ ಮಹಾಪೂಜೆ, ತೀರ್ಥ ಪ್ರಸಾದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಸುಮಾರು ಅಂದಾಜು ರೂ. 16 ಲಕ್ಷ ವೆಚ್ಚದಲ್ಲಿ ನವೀಕರಣಗೊಂಡ ದೇವಾಲಯದಲ್ಲಿ 3 ದಿನಗಳ ಕಾಲ ಪ್ರತಿಷ್ಠಾ ಕಾರ್ಯಗಳು ಜರುಗಿದವು. ಉಡುಪಿಯ ನೆಂಚಾರುವಿನ ವೇದ ಬ್ರಹ್ಮಶ್ರೀ ಕೇಶವ ಅಡಿಗರು, ನಾಗರಾಜು ಅಡಿಗರು ಮತ್ತು ದೇವಾಲಯದ ಪ್ರಧಾನ ಅರ್ಚಕ ಮಂಜುನಾಥ ಉಡುಪ ಅವರ ನೇತೃತ್ವದಲ್ಲಿ ಬೆಳಿಗ್ಗೆಯಿಂದ ಪೂಜಾ ವಿಧಿವಿಧಾನಗಳು ನಡೆದವು. ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸುಂಟಿಕೊಪ್ಪ,ಎಮ್ಮೆಗುಂಡಿ. ನಾಕೂರು. ಕಾನ್‍ಬೈಲು. ಅಂದಗೋವೆ, ಉಲುಗುಲಿ, ಹರದೂರು, ಸುಂಟಿಕೊಪ್ಪ, 7ನೇ ಹೊಸಕೋಟೆ, ನಾರ್ಗಾಣೆ, ಕೊಡಗರ ಹಳ್ಳಿ, ಅಂಜನಗೇರಿ ಬೆಟ್ಟಗೇರಿ ಸೇರಿದಂತೆ ಸುತ್ತಮುತ್ತಲಿನ ನೂರಾರು ಭಕ್ತರು ಪಾಲ್ಗೊಂಡಿದ್ದರು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುಂತೋಳಿ ಚಂಗಪ್ಪ, ಗೌರವಾಧ್ಯಕ್ಷ ಎಸ್.ಬಿ. ಶಂಕರ್, ಉಪಾಧ್ಯಕ್ಷ ಪಟ್ಟೆಮನೆ ಶೇಷಪ್ಪ, ಕಾರ್ಯದರ್ಶಿ ಮಾಗಲು ವಸಂತ, ದೇವಾಲಯ ಸಮಿತಿ ಅಧ್ಯಕ್ಷ ಪಟ್ಟೆಮನೆ ಅನಿಲ್‍ಕುಮಾರ್, ಮೂಡೋಳಿ ಕೆಂಪಯ್ಯ, ದೇವತಕ್ಕ ದೇವರಾಜು, ಪದಾಧಿಕಾರಿಗಳಾದ ಪಟ್ಟೆಮನೆ ಉದಯಕುಮಾರ್, ಕಾಳಚೆಟ್ಟೀರ ಪೂವಯ್ಯ (ಮಿಟ್ಟು), ಮಳ್ಳನ ಸತೀಶ್, ಮಳ್ಳನ ಮನು, ನಿರ್ವಾಣಿಗೌಡನ ಮಧು, ಭಾನೂರು ಪೂವಯ್ಯ, ಪಟ್ಟೆಮನೆ ಲೋಕೇಶ್, ಪಟ್ಟೆಮನೆ ಸದಾಶಿವ, ಪಾರಮನೆ ಕಾವೇರಪ್ಪ, ಮಾಗಲು ರವೀಂದ್ರ, ಓಡಿಯಪ್ಪನ ವಿಮಲಾವತಿ, ಓಡಿಯಪ್ಪನ ಸುದೇಶ್, ಹಿರಿಯರಾದ ಎಸ್.ಬಿ. ಜಯರಾಜ್ ಇತರರು ಇದ್ದರು.