ಮಡಿಕೇರಿ, ಮಾ. 12: ಕುಂಜಿಲಗೇರಿ ಗ್ರಾಮದ ಶ್ರೀ ಭದ್ರಕಾಳಿ ದೇವಿಯ ವಾರ್ಷಿಕ ಹಬ್ಬ ತಾ. 14ರಂದು ನಡೆಯಲಿದೆ. ಬೆಳಗ್ಗಿನ ಜಾವ ತಕ್ಕರ ಮನೆಯಿಂದ ಭಂಡಾರ ಹಾಗೂ ಕುಯ್ಯ ಬಂದು ದೇವಿಗೆ ನೈವೇದ್ಯ ಅರ್ಪಿಸುವುದಲ್ಲದೆ ಮಧ್ಯಾಹ್ನ 1 ಗಂಟೆಗೆ ಎತ್ತು ಪೋರಾಟ ಸಹಿತ ಬನದಲ್ಲಿ ಸೇರಿ, ಭಂಡಾರ ಹಾಗೂ ಹರಕೆ ಒಪ್ಪಿಸಿ ತೆಂಗಿನಕಾಯಿ ನೈವೇದ್ಯ ನಡೆಯುತ್ತದೆಂದು ಊರಿನ ತಕ್ಕಮುಖ್ಯಸ್ಥರು ಹಾಗೂ ಊರಿನ ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.