ಮಡಿಕೇರಿ, ಮಾ. 11: ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ರೋಗ ನಿಖರವಾಗಿ ಎಲ್ಲಿಯೂ ಪತ್ತೆಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮೋಹನ್ ಸ್ಪಷ್ಟಪಡಿಸಿದ್ದಾರೆ.ಸಾರ್ವಜನಿಕ ಸ್ಥಳಗಳಲ್ಲಿ ಆರೋಗ್ಯ ಇಲಾಖೆಯಿಂದ ಕರಪತ್ರ ಹಂಚುವುದರೊಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.ಮುಖ್ಯೋಪಾಧ್ಯಾಯರಿಗೆ ತರಬೇತಿ
ಜಿಲ್ಲೆಯ ಎಲ್ಲ ಶಾಲಾ ಮುಖ್ಯೋಪಾಧ್ಯಾಯರಿಗೆ ಕೊರೊನಾ ಸೋಂಕಿನ ಲಕ್ಷಣಗಳ ಕುರಿತು; ತರಬೇತಿಯೊಂದಿಗೆ, ಶಿಕ್ಷಣ ಸಂಸ್ಥೆಗಳ ಮೂಲಕ ಮಕ್ಕಳು ಹಾಗೂ ಪೋಷಕರಿಂದ ಜನತೆಯಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ಎಂದು ಡಾ. ಮೋಹನ್ ತಿಳಿಸಿದರು.ಕಾಯ್ದಿರಿಸಿದ ಹಾಸಿಗೆಗಳು: ಜಿಲ್ಲಾ ಆಸ್ಪತ್ರೆಯಲ್ಲಿ ಎರಡು ಪ್ರತ್ಯೇಕ ವಾರ್ಡ್‍ಗಳೊಂದಿಗೆ, ಪುರುಷರು-ಮಹಿಳೆಯರಿಗೆ ತಲಾ 5 ಹಾಸಿಗೆಗಳ ಸಹಿತ ಕೊರೊನಾ ಸೋಂಕು ಸಂಬಂಧ ತಪಾಸಣೆ ಮತ್ತು ತುರ್ತು ಚಿಕಿತ್ಸೆಗೆ ವೈದ್ಯ-ಸಿಬ್ಬಂದಿ ಸಹಿತ ಔಷಧೋಪಚಾರಕ್ಕೆ ಕ್ರಮಕೈಗೊಳ್ಳಲಾಗಿದೆ. ಇದುವರೆಗೆ ಯಾರೂ ತಪಾಸಣೆಗೆ ಒಳಗಾಗಿಲ್ಲ ಎಂದು ಮಾರ್ನುಡಿದರು.ಬಣಗುಡುತ್ತಿರುವ ಪ್ರವಾಸಿ ತಾಣಗಳು ರಾಜ್ಯದಲ್ಲಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೂ ಕುತ್ತು ಬಂದಿರುವ ಬಗ್ಗೆ ವರದಿಗಳು ಹೊರಬಿದ್ದಿವೆ. ಕಳೆದ ಕೆಲವು ದಿನಗಳಿಂದ ಚೀನಾ ದೇಶ ಸೇರಿದಂತೆ ಕೆಲವು ದೇಶಗಳಿಗಷ್ಟೇ ಸೀಮಿತವಾಗಿದ್ದ ಮಾರಣಾಂತಿಕ ವೈರಸ್ ಇದೀಗ ಬೆಂಗಳೂರು ಹಾಗೂ ನೆರೆಯ ಕೇರಳದಲ್ಲಿ ಕಂಡುಬಂದ ಹಿನ್ನಲೆಯಲ್ಲಿ ಕೊಡಗಿನ ಪ್ರವಾಸಿ, ವಾಣಿಜ್ಯ ಕೇಂದ್ರಗಳು ಬಣಗುಡುತ್ತಿವೆ.ಅಲ್ಲದೆ ಜಿಲ್ಲೆಯ ಹೋಂಸ್ಟೇಗಳು, ಖಾಸಗಿ ಪ್ರವಾಸಿ ತಾಣಗಳಲ್ಲಿ ಕೂಡ ಪ್ರವಾಸಿಗರ ಸಂಖ್ಯೆ ಕ್ಷೀಣಗೊಳ್ಳತೊಡಗಿದೆ. ಜಿಲ್ಲೆಯ ಪ್ರವೇಶದ್ವಾರ ಕುಶಾಲನಗರದಲ್ಲಿ ಬಹುತೇಕ ಲಾಡ್ಜ್‍ಗಳಲ್ಲಿ ಮುಂಗಡ ಕಾದಿರಿಸಿದ್ದ ರೂಂಗಳು ರದ್ದುಗೊಳ್ಳಲು ಪ್ರಾರಂಭಗೊಂಡಿದೆ. ಕೇರಳ, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸುತ್ತಿದ್ದ ಪ್ರವಾಸಿ ಟ್ಯಾಕ್ಸಿ, ಬಸ್‍ಗಳು ಜಿಲ್ಲೆಗೆ ಆಗಮಿಸುತ್ತಿಲ್ಲ. ಮಾಂಸ ವ್ಯಾಪಾರವೂ ಕ್ಷೀಣಿಸಿದೆ. ಪ್ರವಾಸಿಗರ ಸಂಖ್ಯೆ ಬಹುತೇಕ ಇಳಿಮುಖವಾಗಿದ್ದು ಇದು ನೇರವಾಗಿ ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರಿದೆ. ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿರುವ ಹೋಟೆಲ್, ಲಾಡ್ಜ್, ಅಂಗಡಿ ಮುಂಗಟ್ಟುಗಳು, ಟ್ಯಾಕ್ಸಿಗಳು, ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಕೊಡಗು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷರಾದ ಬಿ.ಆರ್. ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.
(ಮೊದಲ ಪುಟದಿಂದ) ಶೇ. 90 ರಷ್ಟು ಮುಂಗಡ ಕಾದಿರಿಸುವಿಕೆ ರದ್ದುಗೊಂಡಿದೆ. ಏಪ್ರಿಲ್, ಮೇ ತಿಂಗಳಲ್ಲಿ ಪ್ರವಾಸಕ್ಕೆ ಬರುವ ತಂಡ ಹೋಟೆಲ್ ಬುಕ್ಕಿಂಗ್ ಮುಂಗಡವಾಗಿ ನಡೆಯುತ್ತಿತು. ಇದೀಗ ಎಲ್ಲೆಡೆ ಭಯದ ವಾತಾವರಣದಿಂದ ಪ್ರವಾಸಿಗರು ಹಿಂದೇಟು ಹಾಕುವಂತಾಗಿದೆ ಎಂದಿದ್ದಾರೆ.
ಸÀದಾ ಗಿಜಿಗುಡುತ್ತಿದ್ದ ಕುಶಾಲನಗರ ಸಮೀಪದ ಕಾವೇರಿ ನಿಸರ್ಗಧಾಮದಲ್ಲಿ ಕೂಡ ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ವಿರಳವಾಗಿದ್ದು ಗೋಚರಿಸಿದೆ. ನೆರೆಯ ಬೈಲುಕೊಪ್ಪ ಗೋಲ್ಡನ್ ಟೆಂಪಲ್, ದುಬಾರೆ ಪ್ರವಾಸಿ ಕೇಂದ್ರಗಳಲ್ಲಿ ಕೂಡ ಇದೇ ಪರಿಸ್ಥಿತಿ ಸೃಷ್ಠಿಯಾಗಿದೆ. ಗಡಿಭಾಗ ಕೇರಳ ಹಾಗೂ ರಾಜ್ಯದ ಕೆಲವೆಡೆ ಕೊರೊನಾ ಮಾರಿಯ ಬಗ್ಗೆ ವರದಿಯಾಗುತ್ತಿದ್ದ ಹಿನ್ನಲೆಯಲ್ಲಿ ಬರುವ ಪ್ರವಾಸಿಗರು ತಮ್ಮ ಪ್ರವಾಸವನ್ನು ರದ್ದುಗೊಳಿಸಿರುವ ಸಾಧ್ಯತೆಯಿದೆ ಎಂದು ದುಬಾರೆಯ ಹೋಟೆಲ್ ಉದ್ಯಮಿ ರತೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ ನಿಸರ್ಗಧಾಮದಲ್ಲಿ ಭಾರೀ ಸಂಖ್ಯೆಯ ಕೊರತೆ ಕಂಡುಬಂದಿದೆ ಎಂದು ಅಲ್ಲಿನ ಮೂಲಗಳು ಶಕ್ತಿಗೆ ತಿಳಿಸಿವೆ. ಇನ್ನೊಂದೆಡೆ ಮಕ್ಕಳಿಗೆ ಪರೀಕ್ಷೆ ಪ್ರಾರಂಭವಾಗಿರುವ ಕಾರಣ ಕೂಡ ಪ್ರವಾಸಿಗರ ಸಂಖ್ಯೆ ಕುಂಠಿತವಾಗಲು ಕಾರಣವಾಗಿದ್ದರೂ ಮಹಾಮಾರಿ ಕೊರೊನಾದ ಆತಂಕ ಮಾತ್ರ ಪ್ರಮುಖ ಪಾತ್ರ ವಹಿಸುತ್ತಿದೆ. ಹೋಂಸ್ಟೇಗಳಲ್ಲಿ ಕಾದಿಸಿರಿದ ಪ್ರವಾಸಿಗರು ಕೊರೊನ ನೆಪವೊಡ್ಡಿ ಮುಂಗಡ ರದ್ದುಗೊಳಿಸಿರುವುದಾಗಿ ಕೊಡಗು ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷರಾದ ಬಿ.ಜಿ. ಅನಂತಶಯನ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ನೂರಾರು ಸಂಖ್ಯೆಯ ಹೋಂಸ್ಟೇ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದ ಅವರು, ಪ್ರವಾಸಿ ಕೇಂದ್ರಗಳಲ್ಲಿ ವಿದೇಶಿ ಪ್ರಜೆಗಳನ್ನು ಕಂಡ ತಕ್ಷಣ ಸ್ಥಳೀಯರು ಭಯದಲ್ಲೇ ನೋಡುವ ಪರಿಸ್ಥಿತಿ ಸೃಷ್ಠಿಯಾಗಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಆತಂಕ ನಡುವೆ ಸಮೀಪದ ಬೈಲುಕೊಪ್ಪೆ ಟಿಬೇಟಿಯನ್ ಶಿಬಿರದಲ್ಲಿ ನೂತನ ವರ್ಷಾಚರಣೆ ತೆರೆಕಂಡಿದೆ. 15 ದಿನಗಳ ಕಾಲ ಶಿಬಿರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಟಿಬೇಟಿಯನ್ನರು ನೂತನ ವರ್ಷವನ್ನು ಬರಮಾಡಿಕೊಂಡಿದ್ದು ವಿಶ್ವದ ಎಲ್ಲೆಡೆಯಿಂದ ಟಿಬೇಟಿಯನ್ನರು ಆಗಮಿಸಿದ್ದರೂ ಚೀನಾ ಸೇರಿದಂತೆ ಸುತ್ತಮುತ್ತಲ ದೇಶಗಳಿಂದ ಮಾತ್ರ ಯಾರೊಬ್ಬರೂ ಭೇಟಿ ನೀಡಿಲ್ಲ ಎಂದು ಶಿಬಿರದ ಮೂಲಗಳು ತಿಳಿಸಿವೆ. ಹೊರದೇಶದಿಂದ ಬಂದ ಪ್ರತಿಯೊಬ್ಬರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಈ ಬಗ್ಗೆ ಕೇಂದ್ರ ಕಛೇರಿಗೆ ವರದಿ ಸಲ್ಲಿಸಲಾಗಿದೆ ಎಂದು ಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಮಚಂದ್ರ ಮಾಹಿತಿ ನೀಡಿದ್ದಾರೆ. ಟಿಬೇಟಿಯನ್ ನೂತನ ವರ್ಷಕ್ಕೆಂದು ಆಗಮಿಸಿದ ಬಹುತೇಕ ವಿದೇಶಿಗರು ತಮ್ಮ ದೇಶಗಳಿಗೆ ತೆರಳಲಾಗದೆ ಶಿಬಿರದಲ್ಲೇ ವಾಸ್ತವ್ಯ ಹೂಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಟಿಬೇಟಿಯನ್ ವುಮೆನ್ಸ್ ಅಸೋಸಿಯೇಷನ್ ಪ್ರಮುಖರಾದ ತೆನ್ಸಿಂಗ್ ಡೋಲ್ಮ ಶಕ್ತಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.
ಕುಶಾಲನಗರ ಸೇರಿದಂತೆ ವಿವಿಧ ಶಾಲೆಗಳಲ್ಲಿ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರಬೇಕು ಎನ್ನುವ ಸೂಚನೆ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಮಾಸ್ಕ್‍ಗಳ ಕೊರತೆ ಎದುರಾಗಿದ್ದು ಮಕ್ಕಳ ಪೋಷಕರು ಕಳೆದೆರಡು ದಿನಗಳಿಂದ ಪರದಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕೆಲವೆಡೆ ಮಾಸ್ಕ್‍ಗೆ ದುಪ್ಪಟ್ಟು ಹಣ ಪಡೆಯುತ್ತಿರುವ ಬಗ್ಗೆಯೂ ದೂರುಗಳು ಕೇಳಿಬಂದಿವೆ.
ವೀರಾಜಪೇಟೆ-ಗಡಿಭಾಗದಲ್ಲಿ ಆತಂಕ
ಕೊಡಗು ಕೇರಳ ಗಡಿ ಪ್ರದೇಶವಾದ ಮಾಕುಟ್ಟ ಕೂಟುಪೊಳೆಯ ನಿವಾಸಿಗಳಲ್ಲಿ ಕೊರೊನಾ ವೈರಸ್ ಆತಂಕ ಸೃಷ್ಟಿಸಿದೆ. ಗಡಿ ಪ್ರದೇಶದ ಮಾಕುಟ್ಟದಲ್ಲಿ ನಿವಾಸಿಗಳು ಕೊರೊನಾ ವೈರಸ್ ಆತಂಕದಿಂದ ಕೋಳಿ, ಕುರಿ ಮಾಂಸ ಹಾಗೂ ಸಮುದ್ರದ ಹಸಿ ಮೀನಿನ ಖರೀದಿಯಿಂದ ಹಿಂದೆ ಸರಿದಿದ್ದಾರೆ. ಅಲ್ಲಿನ ಹೊಟೇಲ್‍ಗಳಿಗೆ ವ್ಯಾಪಾರವು ಕಡಿಮೆಯಾಗಿದ್ದು, ವ್ಯಾಪಾರವಿಲ್ಲದೆ ಮುಚ್ಚುವ ಪರಿಸ್ಥಿತಿಗೆ ತಲುಪಿದೆ ಎಂದು ಹೊಟೇಲ್ ನಡೆಸುತ್ತಿರುವ ಉಮ್ಮರ್ ತಿಳಿಸಿದ್ದಾರೆ.
2019ರ ಮಳೆಯಿಂದ ತಾಲೂಕು ಕೇಂದ್ರವಾದ ವೀರಾಜಪೇಟೆಯಲ್ಲಿ ವ್ಯಾಪಾರ ವ್ಯವಹಾರ ಮೊದಲೇ ಕುಂಠಿತಗೊಂಡಿದ್ದು ಈಗ ಕೊರೊನಾ ವೈರಸ್ ಹಾಗೂ ಹಕ್ಕಿ ಜ್ವರದ ಪರಿಣಾಮ ವ್ಯಾಪಾರ ವಹಿವಾಟು ಮತ್ತಷ್ಟು ಕುಸಿದಿದೆ.
ಇಲ್ಲಿನ ವರ್ತಕರ ಪ್ರಕಾರ ಮದ್ಯದ ಅಂಗಡಿಗಳನ್ನು ಹೊರತು ಪಡಿಸಿದಂತೆ ಇನ್ನು ಯಾವುದೇ ವರ್ತಕರಿಗೆ ವ್ಯಾಪಾರವಿಲ್ಲ. ವೀರಾಜಪೇಟೆಯಲ್ಲಿರುವ ಹೊಟೇಲ್ ಉದ್ಯಮಕ್ಕೂ ಕೊರೊನಾ ವೈರಸ್‍ನ ಬಿಸಿ ತಟ್ಟಿದ್ದು ಹೊಟೇಲ್‍ನಲ್ಲಿ ಸ್ವಚ್ಛತೆ ಕಾಪಾಡಿದರೂ ವೈರಸ್‍ನ ಭೀತಿಯಿಂದ ಗ್ರಾಹಕರೇ ಬರುತ್ತಿಲ್ಲ. ಹೊಟೇಲ್ ಉದ್ಯಮಿಯೊಬ್ಬರ ಪ್ರಕಾರ ಪರಿಸ್ಥಿತಿ ಹೀಗೆ ಮುಂದುವರೆದರೆ ಪಟ್ಟಣದಲ್ಲಿ ಪ್ರತಿಷ್ಠಿತ ಕೆಲವು ಹೊಟೇಲ್‍ಗಳನ್ನು ಮುಚ್ಚುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಕೇರಳದ ಕ್ಯಾಲಿಕಟ್‍ನಲ್ಲಿ ಐದು ದಿನಗಳ ಹಿಂದೆ ಹಕ್ಕಿಜ್ವರ ಕಾಣಿಸಿಕೊಂಡಿದ್ದರಿಂದ ಕೊಡಗಿನಲ್ಲಿ ಕೋಳಿ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಒಂದು ತಿಂಗಳ ಹಿಂದೆ 1 ಕೆ.ಜಿ.ಕೋಳಿ ಮಾಂಸಕ್ಕೆ ರೂ 160ರಿಂದ 180 ಇದ್ದದ್ದು ಈಗ ಕೇವಲ ರೂ 120 ನಿಗದಿಪಡಿಸಿದರೂ ಕೋಳಿ ಮಾಂಸಕ್ಕೆ ಬೇಡಿಕೆ ಇಲ್ಲದಂತಾಗಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಕುರಿ ಮಾಂಸದ ಮೇಲೂ ಪರಿಣಾಮ ಬೀರಿದ್ದು ವೀರಾಜಪೇಟೆ ಪಟ್ಟಣದಲ್ಲಿ ಸುಮಾರು ಹದಿನೈದಕ್ಕೂ ಅಧಿಕ ಮಾಂಸ ಮಾರಾಟದ ಮಳಿಗೆಗಳಿದ್ದರೂ ಎಲ್ಲರಿಗೂ ವ್ಯಾಪಾರ ಕಡಿಮೆಯಾಗಿದೆ. ಕೆಲವು ಮಾಂಸ ಮಾರಾಟದ ಲೈಸೆನ್ಸ್ ಪಡೆದಿರುವ ವ್ಯಾಪಾರಿಗಳು ಇದೇ ಪರಿಸ್ಥಿತಿ ಮುಂದುವರೆದರೆ ಅಂಗಡಿಗಳನ್ನು ಮುಚ್ಚಾಬೇಕಾದಿತೆಂದು ತಿಳಿಸಿದ್ದಾರೆ.
ಸಮುದ್ರದ ಹಸಿ ಮೀನು ಮಾರಾಟಕ್ಕಾಗಿ ಪಟ್ಟಣ ಪಂಚಾಯಿತಿ ಆಧುನಿಕ ಮತ್ಸ್ಯ ಭವನವನ್ನು ನಿರ್ಮಿಸಿ ಆರು ಮಳಿಗೆಗಳನ್ನು ಟೆಂಡರ್ ಮೂಲಕ ನೀಡಿದೆ. ಕೊರೊನಾ ವೈರಸ್ ಹಾಗೂ ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಹಸಿ ಮೀನು ವ್ಯಾಪಾರಿಗಳು ಮೂರು ಸ್ಟಾಲ್‍ಗಳನ್ನು ಮುಚ್ಚಿದ್ದು ಸಮುದ್ರದ ಹಸಿ ಮೀನಿನ ಮಾರಾಟದ ಈಗ ಕೇವಲ ಮೂರು ಸ್ಟಾಲ್‍ಗಳು ಮಾತ್ರವಿದೆ. ಆಧುನಿಕ ಮತ್ಸ್ಯಭವನದ ಮಾರುಕಟ್ಟೆಯಲ್ಲಿ ನೀರಿನ ಸೌಲಭ್ಯ, ಶುಚಿತ್ವ, ಶೀತಲೀಕರಣದ ಸೌಲಭ್ಯವಿದ್ದರೂ ಹಸಿ ಮೀನಿನ ಮಾರಾಟಕ್ಕೆ ತೀವ್ರ ಧಕ್ಕೆ ಉಂಟಾಗಿದೆ.
ಕುಶಾಲನಗರದಲ್ಲಿ ಮಾಸ್ಕ್‍ಗಳ ಕೊರತೆ ಎದುರಾಗಿದ್ದು ಮಕ್ಕಳ ಪೋಷಕರು ಕಳೆದೆರಡು ದಿನಗಳಿಂದ ಪರದಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕೆಲವೆಡೆ ಮಾಸ್ಕ್‍ಗೆ ದುಪ್ಪಟ್ಟು ಹಣ ಪಡೆಯುತ್ತಿರುವ ಬಗ್ಗೆಯೂ ದೂರುಗಳು ಕೇಳಿಬಂದಿವೆ.

ಸೋಂಕು ತಗುಲಿರುವ ವ್ಯಕ್ತಿ ಸೀನುವಾಗ/ಕೆಮ್ಮುವಾಗ ಅಂತಹ ಎಂಜಲು ಸ್ಪರ್ಶಿಸಿದರೆ ವೈರಸ್ ತಗುಲುತ್ತವೆ ಎಂದರು. ರಕ್ತದ ಮಾದರಿಯಿಂದ ಈ ವೈರಸ್ ಕಂಡುಹಿಡಿಯಲು ಸಾಧ್ಯವಿಲ್ಲ ಎಂದ ಅವರು, ಆದಾಗ್ಯೂ ಶಂಕಿತ ಪ್ರಕರಣಗಳು ಪತ್ತೆಯಾದರೆ ಗಂಟಲು ಮತ್ತು ಮೂಗಿನ ಸ್ರಾವವನ್ನು ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗುವದು. ಅಲ್ಲಿ 24 ಗಂಟೆಯೊಳಗೆ ದೃಢಪಡಿಸುತ್ತಾರೆ ಎಂದರು.
ಕೊರೊನಾಗೆ ಈವರೆಗೆ ಯಾವದೇ ಔಷಧಿ ಲಭ್ಯವಾಗಿಲ್ಲ. ಆದರೆ ಸೋಂಕು ತಗುಲಿರುವ ವ್ಯಕ್ತಿಗೆ ನೆಗಡಿ, ಜ್ವರ, ಕೆಮ್ಮುವಿಗೆ ಔಷಧೋಪಚಾರ ಮಾಡಲಾಗುವದು. ಈ ಖಾಯಿಲೆಗಳು ಕಡಿಮೆಯಾದಂತೆ ಕೋವಿಡ್ ವೈರಸ್ ಸಹ ದೇಹದಿಂದ ಕಡಿಮೆಯಾಗಲಿದೆ. ಈ ವೈರಸ್ ದೇಹದಲ್ಲಿ ದ್ವಿಗುಣಗೊಳ್ಳದಂತೆ ಜಾಗ್ರತೆ ವಹಿಸಬೇಕು. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕಿದೆ ಎಂದು ತಿಳಿಸಿದರು.
ಮಾಂಸ ಸೇವನೆಯಿಂದ ಕೊರೊನಾ ಹರಡುತ್ತದೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವದರಿಂದ ಮಾಂಸಗಳ ವಹಿವಾಟು ಕುಸಿತಗೊಂಡಿದೆ. ಕೋಳಿ ಮಾಂಸದ ಬೆಲೆಯಲ್ಲಿ ಇಳಿಕೆಯಾಗಿದ್ದರೂ ಗ್ರಾಹಕರು ಮಾತ್ರ ಅಂಗಡಿಗಳ ಕಡೆಗೆ ಮುಖ ಮಾಡುತ್ತಿಲ್ಲ.
ಇದರೊಂದಿಗೆ ಅಂಗಡಿಗಳಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ತಾಲೂಕು ಪಂಚಾಯಿತಿ ಅಧಿಕಾರಿಗಳು ಅಂಗಡಿಗಳಿಗೆ ತೆರಳಿ ಸ್ವಚ್ಛತೆ ಕಾಪಾಡುವಂತೆ ಮಾಲೀಕರಿಗೆ ತಾಕೀತು ಮಾಡಿದ್ದಾರೆ. ಈ ಹಿನ್ನೆಲೆ ಕೆಲವು ಅಂಗಡಿಗಳಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಲಾಗುತ್ತಿದೆ.
ಇನ್ನು ಕೊರೊನಾ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂಬ ಮಾಹಿತಿ ಹಿನ್ನೆಲೆ ಪಟ್ಟಣದಲ್ಲಿ ಜನರ ಓಡಾಟವೂ ಕಡಿಮೆಯಾಗಿದೆ. ಸಂತೆ ದಿನವಾದ ನಿನ್ನೆ ಮಾರುಕಟ್ಟೆಯಲ್ಲಿ ಗ್ರಾಹಕರ ಕೊರತೆ ಕಂಡುಬಂತು.
ಸೋಮವಾರಪೇಟೆಯ ಸಂತೆ ಮಾರುಕಟ್ಟೆಯಲ್ಲಿ ಸಂತೆ ದಿನವಾದ ಸೋಮವಾರ ನಿರೀಕ್ಷಿತ ಸಂಖ್ಯೆಯ ಗ್ರಾಹಕರು ಬಾರದ ಹಿನ್ನೆಲೆಯಲ್ಲಿ ವರ್ತಕರು ಕಂಗಾಲಾಗಿದ್ದರು. ಇದರ ನಡುವೆ ದಿನಸಿ ವ್ಯಾಪಾರಸ್ಥರು ಕೂಡ ವ್ಯಾಪಾರ ವಹಿವಾಟುಗಳ ದಿಢೀರ್ ಕುಸಿತದಿಂದಾಗಿ ಆತಂಕಕ್ಕೀಡಾಗುವಂತೆ ಮಾಡಿತ್ತು. ಕಳೆದ ವಾರ ಉತ್ತಮ ಬೆಲೆ ಕಂಡಿದ್ದ ತರಕಾರಿ, ಈ ಬಾರಿ ಕಡಿಮೆಯಾಗಿತ್ತು.
ಕಳೆದವಾರ 20 ರಿಂದ 30 ರೂ. ಗಳಿದ್ದ ಟೊಮೆಟೊ ಸೋಮವಾರ ಸಂಜೆ ವೇಳೆ 10 ರೂ. ಗಳಿಗೆ ಎರಡು ಕೆ.ಜಿ. ದೊರಕುವಂತಾಯಿತು. ಬೀನ್ಸ್, ಕ್ಯಾರೆಟ್, ಹೂ ಕೋಸು, ಹೀರೇಕಾಯಿ, ಮೆಣಸಿನ ಕಾಯಿ, ಬದನೆ ಮೊದಲಾದ ತರಕಾರಿಗಳು ಯಥೇಚ್ಛವಾಗಿದ್ದರೂ, ಗ್ರಾಹಕರ ಕೊರತೆಯಿಂದಾಗಿ ಬೇಡಿಕೆಯಿಲ್ಲದೇ ಬೆಲೆ ಕುಸಿದಿದೆ. ಕೊರೊನಾ ಭೀತಿ ಮಾರುಕಟ್ಟೆಗೂ ತಟ್ಟಿರುವದರಿಂದ ಮಾಂಸದೊಂದಿಗೆ ತರಕಾರಿ ಮಾರಾಟವೂ ಕುಸಿತ ಕಾಣುತ್ತಿದೆ.
ಸಿದ್ದಾಪುರ: ಸಿದ್ದಾಪುರದಲ್ಲಿ ಕೂಡ ಕೊರೊನಾ ವೈರಸ್ ಪರಿಣಾಮದಿಂದ ಪ್ರವಾಸಿಗರ ಸುಳಿವು ಇಲ್ಲದಾಗಿದೆ. ಸಿದ್ದಾಪುರ ಪಟ್ಟಣ ಸುತ್ತಮುತ್ತಲಿನ ಹೊಟೇಲ್ ಅಂಗಡಿಗಳಲ್ಲಿ ವ್ಯಾಪಾರ ಕುಂಠಿತಗೊಂಡಿದೆ. ಕೋಳಿ ಮಾಂಸ ದರ ಕಡಿಮೆಯಾಗಿದ್ದರೂ ಕೂಡ ಮಾಂಸವನ್ನು ಖರೀದಿಸುವವರ ಸಂಖ್ಯೆ ಇಳಿಕೆಯಾಗಿದೆ. ದೂರದ ಊರುಗಳಿಂದ ಪ್ರವಾಸಕ್ಕೆಂದು ಸಿದ್ದಾಪುರ ಸುತ್ತಮುತ್ತಲಿನ ಹೋಂ ಸ್ಟೇಗಳಿಗೆ ಆಗಮಿಸುತ್ತಿದ್ದ ಪ್ರವಾಸಿಗರು ಈಗ ಕಂಡು ಬರುತ್ತಿಲ್ಲ.
ಅಧಿಕ ಬಾಡಿಗೆಗೆ ಮಳಿಗೆಗಳನ್ನು ಪಡೆದುಕೊಂಡು ಅಂಗಡಿ, ಹೊಟೇಲ್ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಸ್ಥರು ಇದೀಗ ಗ್ರಾಹಕರಿಗಾಗಿ ಕಾದು ಕುಳಿತು ಕೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೀನು ಮಾರಾಟಗಾರರಿಗೂ ನಿರೀಕ್ಷಿತ ವ್ಯಾಪಾರ ನಡೆಯುತ್ತಿಲ್ಲ. ಬಸ್‍ಗಳಲ್ಲಿ ಕೂಡ ದೂರದ ಊರಿನಿಂದ ಬರುತ್ತಿದ್ದ ಪ್ರಾಯಾಣಿಕರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲವರು ವಿದೇಶದಲ್ಲಿ ಕೆಲಸದಲ್ಲಿದ್ದು, ಅವರುಗಳಿಗೆ ತಮ್ಮ ಊರುಗಳಿಗೆ ಬರಲು ತೊಂದರೆಯಾಗಿದೆ. ಇನ್ನು ಕೆಲವರು ವಿದೇಶದಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ಊರುಗಳಿಗೆ ಬಂದಿದ್ದು, ಇದೀಗ ಹಿಂತಿರುಗಿ ಹೋಗಲು ಭಯಪಡುತ್ತಿದ್ದಾರೆ. ಕೊರೊನಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ವತಿಯಿಂದ ಸೋಂಕಿನ ಬಗ್ಗೆ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಮಾಹಿತಿಗಳನ್ನು ನೀಡಲಾಗುತ್ತಿದೆ.
ವರದಿ: ಚಂದ್ರಮೋಹನ್, ವಿಜಯ್ ಹಾನಗಲ್, ಡಿ.ಎಂ.ಆರ್., ವಾಸು