ಶನಿವಾರಸಂತೆ, ಮಾ. 12: ಭಾರತೀಯ ಅಂಚೆ ಇಲಾಖೆ ಮತ್ತು ಶನಿವಾರಸಂತೆ ಅಂಚೆ ಇಲಾಖೆ ಸಹಭಾಗಿತ್ವದಲ್ಲಿ 2 ದಿನಗಳ ಕಾಲ ಪಟ್ಟಣದ ಅಂಚೆ ಕಚೇರಿ ಮುಂಭಾಗ ಸಾರ್ವಜನಿಕರ ಆಧಾರ್ ಶಿಬಿರ ಮತ್ತು ಗ್ರಾಹಕರ ಅಂಚೆ ಮೇಳವನ್ನು ನಡೆಸಲಾಯಿತು. ಅಂಚೆ ಇಲಾಖೆ ಹಿರಿಯ ಅಧಿಕಾರಿಗಳಾದ ಬಿ.ಎಸ್. ಭಾಸ್ಕರ್, ಬಿ.ಡಿ. ಮಂಜುನಾಥ್, ಶನಿವಾರಸಂತೆ ಶಾಖೆಯ ಪೋಸ್ಟ್ ಮಾಸ್ಟರ್ ಆಶಾ ಕಸ್ತೂರಿ, ಸಿಬ್ಬಂದಿ ಹಾಜರಿದ್ದರು.