ವೀರಾಜಪೇಟೆ, ಮಾ. 12: ಕದನೂರು ಬೋಯಿಕೇರಿಯ ಶ್ರೀ ಮುತ್ತಪ್ಪ ದೇಗುಲದಲ್ಲಿ ಸಂಭ್ರಮದ ತೆರೆ ಮಹೋತ್ಸವ ನೆರವೇರಿತು.

ಶ್ರೀ ಚೈತನ್ಯ ಮಠಪುರ ಆದಿ ಮುತ್ತಪ್ಪ ದೇಗುಲದಲ್ಲಿ ಉತ್ಸವದ ಅಂಗವಾಗಿ ಗಣಪತಿ ಹೋಮದೊಂದಿಗೆ ಪೈಂಗುತ್ತಿ, ಮುತ್ತಪ್ಪನ್ ವೆಳ್ಳಾಟಂ, ಗುಳಿಗನ್ ವೆಳ್ಳಾಟಂ, ವಸುರಿಮಾಲ ಭಗವತಿ ತೆರೆಗಳು ನಡೆದವು. ಸಿಡಿ ಮದ್ದು ಪ್ರದರ್ಶನÀ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.