ಶನಿವಾರಸಂತೆ, ಮಾ. 12: ದುಂಡಳ್ಳಿ ಗ್ರಾಮ ಪಂಚಾಯಿತಿಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆ ಪಂಚಾಯಿತಿ ಸಭಾಂಗಣದಲ್ಲಿ ನಡೆಸಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್ ವಹಿಸಿದ್ದರು.

ಕೃಷಿ ಇಲಾಖೆಯ ವೇದಪ್ರಿಯ ಮಾಹಿತಿ ನೀಡಿದರು. ಕೃಷಿ ಇಲಾಖೆಯ ಅಧಿಕಾರಿಗಳು ಬಂದು ಸಭೆಗೆ ಹಾಜರಾಗಿ ಮಾಹಿತಿ ನೀಡುವಂತೆ ತಾಕೀತು ಮಾಡಲಾಯಿತು.

ತೋಟಗಾರಿಕಾ ಇಲಾಖೆ ತುಂತುರು ನೀರಾವರಿ ಯೋಜನೆಗೆ ಸಹಾಯಧನ ಲಭ್ಯವಿರುವ ಬಗ್ಗೆ ಕೃಷಿ ಅಧಿಕಾರಿ ಸಿಂಧೂರ ಮಾಹಿತಿ ನೀಡಿದರು. ಸಭೆಯಲ್ಲಿ ಹಿಂದಿನ ಸಭಾ ನಡಾವಳಿಯನ್ನು ಎಲ್ಲಾ ಇಲಾಖೆಗಳಿಗೂ ಕಳುಹಿಸಿದ್ದರೂ ಸಹ ಯಾವುದೇ ಇಲಾಖೆಯಿಂದ ಅನುಪಾಲನಾ ವರದಿ ಬಾರದಿರುವ ಬಗ್ಗೆ ಅಸಮಾಧಾನ ಹೊರಹಾಕಿದರು ಹಾಗೂ ಹಿಂದಿನ ಸಭಾ ನಡಾವಳಿ ಮೇಲೆ ಚರ್ಚೆ ನಡೆಯಿತು.

ಶಿಕ್ಷಣ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಗ್ರಾಮ ಶಿಕ್ಷಣ ಸಹಿ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಮುಂದಿನ ವರ್ಷ ತಿಂಗಳುವಾರು ನಿರ್ವಹಣೆ ಮಾಡಬೇಕಾದ ಕಾರ್ಯಕ್ರಮಗಳ ಮಾಹಿತಿ ನೀಡಲಾಯಿತು.

ಪ.ಪಂ. ಫಲಾನುಭವಿಗಳು ಹಸು ಸಾಕಾಣಿಕೆ ಮಾಡಿದರೆ ಉಚಿತ ವಿಮೆ ಸೌಲಭ್ಯ ಇರುವ ಬಗ್ಗೆ ಮಾಹಿತಿ ನೀಡಲಾಯಿತು. ಅಕಾಲಿಕವಾಗಿ ಜಾನುವಾರು ಮರಣ ಹೊಂದಿದರೆ ರೂ. 10 ಸಾವಿರ ಸಹಾಯ ಧನ ಸೌಲಭ್ಯದ ಬಗ್ಗೆ ಪಶು ಅಧಿಕಾರಿ ಮಾಹಿತಿ ನೀಡಿದರು.

ಪಂ. ರಾ ಮತ್ತು ಇಂಜಿನಿಯರ್ ವಿಭಾಗದ ಎ.ಇ. ಸಲೀಂ ಅವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.

ಚೆಸ್ಕಾಂ ಅಧಿಕಾರಿ ಹೇಮಂತ ಮಾತನಾಡಿ, ಸೌಭಾಗ್ಯ ಯೋಜನೆಯಡಿ ಬಾಕಿ ಇರುವ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವುದಾಗಿ ತಿಳಿಸಿದರು.

ಆರೋಗ್ಯ ಇಲಾಖೆ ವತಿಯಿಂದ ಸಹಾಯಕರು ಕೊರೊನಾ ಬಗ್ಗೆ ಮುಂಜಾಗ್ರತಾ ಕ್ರಮಗಳ ಮಾಹಿತಿ ನೀಡಿದರು.