ಮಡಿಕೇರಿ, ಮಾ. 11: ಮಡಿಕೇರಿ ಬೀದಿ ಬದಿ ವ್ಯಾಪಾರಸ್ಥರ ಸಂಘದ ಸಭೆ ನಗರದ ಕೂರ್ಗ್ ಕಮ್ಯುನಿಟಿ ಹಾಲ್‍ನಲ್ಲಿ ನಡೆಯಿತು. ಬೀದಿ ಬದಿ ವ್ಯಾಪಾರಸ್ಥರ ಕುಂದು ಕೊರತೆಗಳ ಬಗ್ಗೆ ಚರ್ಚಿಸಲಾಯಿತ್ತಲ್ಲದೆ, ಸರಕಾರದಿಂದ ವ್ಯಾಪಾರಸ್ಥರಿಗೆ ದೊರಕುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅರುಂಧತಿ ಮಾತನಾಡಿ, ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ವಿವರಿಸಿದರು. ಕಾರ್ಮಿಕ ಇಲಾಖೆಯ ಜರೀನಾ ಹಾಗೂ ಪ್ರಸನ್ನ ಮಾತನಾಡಿ, ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷ ನರ್ಸರಿ ವಸಂತ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹಿಳಾ ಅಭಿವೃದ್ಧಿ ನಿಗಮದ ಆಪ್ತ ಸಮಾಲೋಚಕಿ ಪ್ರಿಯಾ, ಸಂಘದ ಸದಸ್ಯರಾದ ಎಂ.ವೈ. ಸುಲೈಮಾನ್, ಡಿ.ಆರ್. ಸುಶೀಲ, ಶಾಂತ ಕುಮಾರಿ, ಉಮಾರಾಣಿ ಮತ್ತಿತರರು ಹಾಜರಿದ್ದರು.
ಸಂಘದ ಸದಸ್ಯತ್ವ ಪಡೆಯುವವರು ನರ್ಸರಿ ವಸಂತ - 9480705924, ಸುಲೈಮಾನ್ - 9980000212 ಸಂಪರ್ಕಿಸಬಹುದಾಗಿದೆ.