ಗೋಣಿಕೊಪ್ಪ ವರದಿ, ಮಾ. 11: ಇಲ್ಲಿನ ಅನುಧಾನಿತ ಪ್ರೌಢಶಾಲೆ ಟೈಗರ್ ಪಗ್ ಪರಿಸರ ಸಂಘದ ವತಿಯಿಂದ ಇತ್ತೀಚೆಗೆ ಪಿರಿಯಾಪಟ್ಟಣ ದೊಡ್ಡಕೆರೆಯಲ್ಲಿ ಆಯೋಜಿಸಿದ್ದ ಪಕ್ಷಿ ವೀಕ್ಷಣೆ ಕಾರ್ಯಕ್ರಮದಲ್ಲಿ ಸುಮಾರು 46 ಜಾತಿಯ ಪಕ್ಷಿಗಳನ್ನು ವಿದ್ಯಾರ್ಥಿಗಳು ಕಣ್ತುಂಬಿಕೊಂಡರು.
ಮುಂಜಾನೆ 7 ಗಂಟೆಯಿಂದ ಆರಂಭಗೊಂಡ ವೀಕ್ಷಣೆ ಕಾರ್ಯಕ್ರಮದಲ್ಲಿ ಬಿಳಿ ಕತ್ತಿನ ಮಿಂಚುಳ್ಳಿ, ತೆರೆದ ಕೊಕ್ಕಿನ ಬಕ, ಗುಳುಮುಳುಕ, ನಾರ್ತರ್ನ್ ಶೊವೆಲರ್, ಕಾರ್ಮೋರಾಂಟ್, ಮೀಡಿಯನ್ ಮತ್ತು ಲಾರ್ಜ್‍ಎಗ್ರೆಟ್, ಬ್ರಾಂeóï ವಿಂಗ್ಡ್‍ಜಾಕನ, ಸ್ಯಾಂಡ್ ಪೈಪರ್, ಪಾಂಡ್ ಹೆರಾನ್, ಪರ್ಪಲ್ ಸ್ವ್ಯಾಂಪ್ ಹೆನ್, ಪರ್ಪಲ್ ಹೆರಾನ್ ಮುಂತಾದ ಸುಮಾರು 46 ಹಕ್ಕಿಗಳನ್ನು ಗುರುತಿಸಿದರು.
ಪಕ್ಷಿಗಳನ್ನು ವೀಕ್ಷಣೆ ಮಾಡಲು ಬೇಕಾದ ಪೀಠಿಕೆ ಮತ್ತು ಮಾಹಿತಿಯನ್ನು ಶಾಲೆಯ ವಿಜ್ಞಾನ ಶಿಕ್ಷಕ ಡಿ. ಕೃಷ್ಣ ಚೈತನ್ಯ ನೀಡಿದರು. ಕೆರೆಯ ಏರಿಯುದ್ದಕ್ಕೂ ಸಂಚರಿಸಿ ಪಕ್ಷಿಗಳನ್ನು ಗುರುತಿಸುವುದನ್ನು ಮಕ್ಕಳು ಕಲಿತುಕೊಂಡರು. ಪಕ್ಷಿಗಳ ಗಾತ್ರ, ಬಣ್ಣ, ಕೊಕ್ಕು ಮತ್ತು ಪಾದಗಳ ರಚನೆ ಮಾಹಿತಿ ಕಲೆ ಹಾಕಿದರು.