ಸುಂಟಿಕೊಪ್ಪ, ಮಾ. 11: ಸುಂಟಿಕೊಪ್ಪ ಪಟ್ಟಣದ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಶಬರಿ ಬೇಕರಿ ಮುಂಭಾಗದಲ್ಲಿ ಕಳೆದ 1 ವರ್ಷದಿಂದ ಗುಂಡಿ ಬಿದ್ದು ಪಾದಚಾರಿಗಳು ಶಾಲಾ ಕಾಲೇಜು ಮಕ್ಕಳು ನಡೆದಾಡಲು ಪ್ರಯಾಸ ಪಡುತ್ತಿದ್ದು; ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಪೊಲೀಸ್ ಇಲಾಖೆ ಗುಂಡಿ ಮುಚ್ಚಲು ಮನವಿ ಮಾಡಿದರೂ ಯಾವದೇ ಸ್ಪಂದನ ದೊರೆತಿಲ್ಲ.
ಸಾರ್ವಜನಿಕರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಸುಂಟಿಕೊಪ್ಪ ಠಾಣಾಧಿಕಾರಿ ತಿಮ್ಮಪ್ಪ ಶ್ರಮವಹಿಸಿ ಕಾಂಕ್ರಿಟ್ ಹಾಕಲು ದಾನಿಗಳಿಂದ ಜೆಲ್ಲಿ ತರಿಸಿ ಪಿ.ಆರ್.ಎಸ್.ಸಂಸ್ಥೆಯಿಂದ ಜಲ್ಲಿ ಮರಳು ಸಿಮೆಂಟ್ ಮಿಶ್ರಿತ ಕಾಂಕ್ರಿಟ್‍ನಿಂದ ಗುಂಡಿ ಮುಚ್ಚಿಸುವ ಕಾಯಕದಲ್ಲಿ ತೊಡಗಿದ್ದಾರೆ.
ಸುಂಟಿಕೊಪ್ಪ ನಗರದಲ್ಲಿ ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರು, ಶಾಲಾ ಮಕ್ಕಳು, ವಯೋವೃದ್ಧರು ಇದೇ ರಸ್ತೆ ಬದಿಯಲ್ಲಿ ಬಸ್‍ಗಾಗಿ ಕಾಯುತ್ತಿರುತ್ತಾರೆ ಆದರೆ ಪಂಚಾಯಿತಿ ಆಡಳಿತ ಮಂಡಳಿ ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಮಾತ್ರ ಸಾರ್ವಜನಿಕರ ಕೆಂಗಣ್ಣಿÂಗೆ ಗುರಿಯಾಗಿದೆ. ಇನ್ನಾದರೂ ಅಭಿವೃದ್ಧಿ ಕಾರ್ಯದಲ್ಲಿ ಪಂಚಾಯಿತಿ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸದೆ ಕಾರ್ಯ ನಿರ್ವಹಿಸಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ವಾಹನ ಚಾಲಕರ ಮತ್ತು ಮಾಲಿಕರ ಸಂಘದ ಮಾಜಿ ಅಧ್ಯಕ್ಷ ಅಚ್ಚಪ್ಪ, ಪೊಲೀಸ್ ಸಿಬ್ಬಂದಿ ಖಾದರ್, ಮಾಜಿ ನಗರ ಬಿ.ಜೆ.ಪಿ. ಅಧ್ಯಕ್ಷ ಬಿ.ಕೆ ಮೋಹನ ಸಾರ್ವಜನಿಕರು ಠಾಣಾಧಿಕಾರಿಗಳ ಸೇವೆಯನ್ನು ಪ್ರಶಂಶಿಸಿದ್ದಾರೆ.