ಮಡಿಕೇರಿ, ಮಾ.11: ಕುಶಾಲನಗರ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆ ನಿವಾರಿಸಲು ಸಭೆಯು ತಾ. 13 ರಂದು ಮಧ್ಯಾಹ್ನ 11 ಗಂಟೆಯಿಂದ 12 ಗಂಟೆ ವರೆಗೆ ಕುಶಾಲನಗರ ಉಪ ವಿಭಾಗ ಕಚೇರಿ ಆವರಣದಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್, ಸೆಸ್ಕ್, ಮಡಿಕೇರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಹಾಗೆಯೇ ಸೋಮವಾರಪೇಟೆ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದುಕೊರತೆ ನಿವಾರಿಸುವ ಸಭೆಯು ತಾ. 13 ರಂದು ಬೆಳಗ್ಗೆ 12.30 ಗಂಟೆಯಿಂದ 1.30 ಗಂಟೆವರೆಗೆ ಸೋಮವಾರಪೇಟೆ ಉಪ ವಿಭಾಗ ಕಚೇರಿ ಆವರಣದಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಮಡಿಕೇರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಸೋಮವಾರಪೇಟೆ ಮತ್ತು ಕುಶಾಲನಗರ ವ್ಯಾಪ್ತಿಯ ಸಾರ್ವಜನಿಕರು, ವಿದ್ಯುತ್ ಗ್ರಾಹಕರ ವಿದ್ಯುಚ್ಛಕ್ತಿಗೆ ಸಂಬಂಧಿಸಿದ ಸಮಸ್ಯೆ ಅಥವಾ ದೂರುಗಳು ಇದ್ದಲ್ಲಿ ಸಭೆಯಲ್ಲಿ ಚರ್ಚಿಸಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಈ ಸಭೆಗೆ ಹಾಜರಾಗುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ್ ಕೋರಿದ್ದಾರೆ.