ಗೋಣಿಕೊಪ್ಪ ವರದಿ, ಮಾ. 11 ; ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ಅತ್ತೂರು ಸಸ್ಯಕ್ಷೇತ್ರದಲ್ಲಿ ಎರಡು ದಿನಗಳ ಕಿಸಾನ್ ಮೇಳ ಮತ್ತು ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ತೋಟಗಾರಿಕೆ, ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ, ಮೀನುಗಾರಿಕೆ, ಇಲಾಖೆ ಮತ್ತು ಅರಣ್ಯ ಇಲಾಖೆ ಸಹಯೋಗದ ಕಾರ್ಯಕ್ರಮದಲ್ಲಿ ಕೃಷಿ ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ, ಕ್ಷೇತ್ರೋತ್ಸವ ಬೇಟಿ, ಮಳಿಗೆಗಳಲ್ಲಿ ನೂತನ ತಂತ್ರಜ್ಞಾನ ಪರಿಚಯ, ಪ್ರಾತ್ಯಕ್ಷಿಕೆ ಗಮನ ಸೆಳೆಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ. ಎ. ಹರೀಶ್ ತಾಂತ್ರಿಕ ಸಮಾವೇಶದ ವೇದಿಕೆ ಉದ್ಘಾಟಿಸಿ ಮಾತನಾಡಿ, ಮಕ್ಕಳನ್ನು ಕೃಷಿಯಿಂದ ದೂರ ಇರಿಸದಂತೆ ನಾವು ಜಾಗೃತ ಗೊಳಿಸಬೇಕಿದೆ. ಭತ್ತದ ಬೆಳೆ ಕೂಡ ಜಿಲ್ಲೆಯಲ್ಲಿ ಕ್ಷೀಣಿಸುತ್ತಿರುವುದರಿಂದ ಆಗುವ ತೊಂದರೆಯನ್ನು ಅರಿತು ಸಮಗ್ರ ಕೃಷಿಗೂ ಒಲವು ತೋರಿಸಬೇಕು ಎಂದರು.

ಜಿ. ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಅನ್ನದಾತನನ್ನು ಗುರುತಿಸುವ ಕೆಲಸ ಹೆಚ್ಚಾಗಬೇಕಿದೆ. ಹೈನುಗಾರಿಕೆಗೆ ಹೆಚ್ಚು ಆಸಕ್ತಿ ಮೂಡಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು. ದೇಶಕ್ಕೆ ರೈತನ ಕಾಣಿಕೆ ದೊಡ್ಡದು, ಸೈನಿಕನನ್ನು ನಾವು ಪ್ರತಿ ನಿನವೂ ನೆನೆಪಿಸಿಕೊಳ್ಳುವ ಕಾರ್ಯ ಮಾಡಬೇಕಿದೆ; ಸೈನಿಕರಿಗಾಗಿ ಹಾಡು ಹೇಳಿ ಗಮನ ಸೆಳೆದರು.

ಬೆಂಗಳೂರು ಭಾರತೀಯ ತೋಟಗಾರಿಕಾ ಸಂಸ್ಥೆ ನಿರ್ದೇಶಕ ಡಾ. ಎಂ. ಆರ್. ದಿನೇಶ್ ಮಾತನಾಡಿ, ಜಿಲ್ಲೆಯ ಕೃಷಿಕರು ಕಾಫಿ ಕೃಷಿಯಿಂದ ಹೊರ ಬಂದು ಸಮಗ್ರ ಕೃಷಿಗೂ ಒಲವು ತೋರಿಸಬೇಕಿದೆ. ಎಲ್ಲಾ ರೀತಿಯ ತಂತ್ರಜ್ಞಾನವನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು. ಬೀಜೋತ್ಪಾದನೆಗೆ ಹೆಚ್ಚು ಯೋಜನೆ ರೂಪಿಸುವವ ಕೃಷಿಕರಿಗೆ ಕೃಷಿ ವಿಜ್ಞಾನ ಕೇಂದ್ರ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು.

ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದÀ ಮುಖ್ಯಸ್ಥ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ ಮಾತನಾಡಿ, ಕೃಷಿಕ ದೃತಿಗೆಡುವ ಅಭ್ಯಾಸದಿಂದ ಹೊರ ಬರಬೇಕು. ಇಲ್ಲಿನ ಮಣ್ಣು, ಜಲ ಕೃಷಿಕರ ಬದುಕಿಗೆ ಪೂರಕವಾಗಿದ್ದು, ಸರ್ಕಾರದಿಂದ ಸವಲತ್ತು ಕೇಳುವುದಕ್ಕಿಂತ, ರೈತ ಉತ್ಪಾದಕರ ಸಂಘಗಳನ್ನು ಹೆಚ್ಚಿಸಿಕೊಂಡು ಸ್ವಉದ್ಯಮಕ್ಕೆ ಆಸಕ್ತಿ ತೋರಬೇಕು ಎಂದರು.

ಪ್ರಶಸ್ತಿ ಪ್ರದಾನ, ಸನ್ಮಾನ: ಕೃಷಿಯಲ್ಲಿನ ಸಾಧನೆಗಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಒಟ್ಟು 25 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪತ್ರಕರ್ತ ಸಣ್ಣುವಂಡ ಕಿಶೋರ್ ನಾಚಪ್ಪ ಅವರಿಗೆ ಉತ್ತಮ ಕೃಷಿ ಪತ್ರಕರ್ತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅರ್ಕಾ ತಂತ್ರಜ್ಞಾನವನ್ನು ಮೊದಲು ಬಳಕೆ ಮಾಡಿದ ಅರ್ವತೋಕ್ಲು ಗ್ರಾಮದ ಎಂ. ಎಂ. ಅಯ್ಯಪ್ಪ, ಅಣಬೆ ಉದ್ಯಮಿ ಕುಶಾಲನಗರದ ಎಸ್. ಸುಜಾ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಮಟ್ಟದ ಶ್ರೇಷ್ಠ ಕೃಷಿ ಪ್ರಶಸ್ತಿಯನ್ನು ಕೋಪಟ್ಟಿ ಗ್ರಾಮದ ಪಿ. ಬಿ. ದಿನೇಶ್, ಹೊಸ್ಕೇರಿ ಗ್ರಾಮದ ಕೆ. ಆರ್. ಇಂದಿರಾ, ಹಾಕತ್ತೂರು ಗ್ರಾಮದ ಅಮ್ಮಾಟಂಡ ಬಿ. ಬೆಳ್ಯಪ್ಪ, ಹೊದ್ದೂರು ಗ್ರಾಮದ ಬಿ. ಪಿ. ರವಿಶಂಕರ್, ನಾಲ್ಕೇರಿ ಗ್ರಾಮದ ಡೈಸಿ ತಿಮ್ಮಯ್ಯ, ಮೈತಾಡಿ ಗ್ರಾಮದ ಮಹಮ್ಮದ್ ಹನೀಫ್, ಕಸುಬೂರು ಗ್ರಾಮದ ಕೆ. ಎಂ. ನಿರಂಜನ್, ಹಿರಿಕೆರೆ ಗ್ರಾಮದ ಪ್ರಮೀಳ ಚನ್ನಪ್ಪ, ಕೆಲಕೊಡ್ಲಿ ಗ್ರಾಮದ ಕೆ. ಬಿ. ದಿವಾಕರ್ ಪಡೆದುಕೊಂಡರು.

ಭತ್ತದ ಬೆಳೆ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪತ್ರಕರ್ತ ಸಣ್ಣುವಂಡ ಕಿಶೋರ್ ನಾಚಪ್ಪ ಅವರಿಗೆ ಉತ್ತಮ ಕೃಷಿ ಪತ್ರಕರ್ತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅರ್ಕಾ ತಂತ್ರಜ್ಞಾನವನ್ನು ಮೊದಲು ಬಳಕೆ ಮಾಡಿದ ಅರ್ವತೋಕ್ಲು ಗ್ರಾಮದ ಎಂ. ಎಂ. ಅಯ್ಯಪ್ಪ, ಅಣಬೆ ಉದ್ಯಮಿ ಕುಶಾಲನಗರದ ಎಸ್. ಸುಜಾ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಮಟ್ಟದ ಶ್ರೇಷ್ಠ ಕೃಷಿ ಪ್ರಶಸ್ತಿಯನ್ನು ಕೋಪಟ್ಟಿ ಗ್ರಾಮದ ಪಿ. ಬಿ. ದಿನೇಶ್, ಹೊಸ್ಕೇರಿ ಗ್ರಾಮದ ಕೆ. ಆರ್. ಇಂದಿರಾ, ಹಾಕತ್ತೂರು ಗ್ರಾಮದ ಅಮ್ಮಾಟಂಡ ಬಿ. ಬೆಳ್ಯಪ್ಪ, ಹೊದ್ದೂರು ಗ್ರಾಮದ ಬಿ. ಪಿ. ರವಿಶಂಕರ್, ನಾಲ್ಕೇರಿ ಗ್ರಾಮದ ಡೈಸಿ ತಿಮ್ಮಯ್ಯ, ಮೈತಾಡಿ ಗ್ರಾಮದ ಮಹಮ್ಮದ್ ಹನೀಫ್, ಕಸುಬೂರು ಗ್ರಾಮದ ಕೆ. ಎಂ. ನಿರಂಜನ್, ಹಿರಿಕೆರೆ ಗ್ರಾಮದ ಪ್ರಮೀಳ ಚನ್ನಪ್ಪ, ಕೆಲಕೊಡ್ಲಿ ಗ್ರಾಮದ ಕೆ. ಬಿ. ದಿವಾಕರ್ ಪಡೆದುಕೊಂಡರು.

ಭತ್ತದ ಬೆಳೆ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹಂಚಿಕೊಂಡ ಬಾಳೆಲೆ ಗ್ರಾಮದ ಎಸ್. ಎಸ್. ಶಿವನಂಜಪ್ಪ ಹಾಗೂ ನಾಲ್ಕೇರಿ ಗ್ರಾಮದ ಎಸ್. ಎಂ. ವಿನಯ್ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭ ಕೆವಿಕೆ ಮುಖ್ಯಸ್ಥ ಡಾ. ಸಾಜು ಜಾರ್ಜ್, ಪ್ರಭಾರ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ. ಕೆ. ರಾಜು, ತೋಟಗಾರಿಕಾ ಉಪ ನಿದೇಶಕ ಡಾ. ಶಶಿಧರ್, ಪಶುಪಾಲನಾ ಉಪ ನಿರ್ದೇಶಕ ಡಾ. ಎ. ಬಿ. ತಮ್ಮಯ್ಯ, ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ. ದರ್ಶನ, ಡಾ. ರಮೇಶ್ ಇದ್ದರು. ಡಾ. ಪ್ರಭಾಕರ್, ಗಿರೀಶ್ ನಿರೂಪಿಸಿದರು. ಡಾ. ವೀರೇಂದ್ರಕುಮಾರ್ ವಂದಿಸಿದರು.

ಇಂದಿನ ಕಾರ್ಯಕ್ರಮಗಳು: ಮಾ. 12 ರಂದು ಕಾಳುಮೆಣಸು ಕೃಷಿಯಲ್ಲಿ ಆಧುನಿಕ ಕೃಷಿ ತಾಂತ್ರಿಕತೆ, ಆಧುನಿಕ ಹೈನುಗಾರಿಕೆ ತಂತ್ರಗಾರಿಕೆ, ಆಧುನಿಕ ಹಂದಿ ಸಾಕಾಣೆ, ಸಮಗ್ರ ಕೃಷಿ ಪದ್ಧತಿ, ಭತ್ತದ ಕೃಷಿಯಲ್ಲಿ ಯಂತ್ರೋಪಕರಣ ಬಳಕೆ ವಿಷಯದಲ್ಲಿ ತಜ್ಞರು ಮಾಹಿತಿ ನೀಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಸಮಾರೋಪ ನಡೆಯಲಿದೆ.