ವೀರಾಜಪೇಟೆ, ಮಾ. 11: ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ, ಇಂಗ್ಲಿಷ್, ಇತಿಹಾಸ ವಿಭಾಗದ ವತಿಯಿಂದ ರಚಿಸಲಾಗಿರುವ ವಿದ್ಯಾರ್ಥಿ ಭಾತೃತ್ವ ವೇದಿಕೆ ಮತ್ತು ಐ.ಕ್ಯೂ.ಎ.ಸಿ. ವತಿಯಿಂದ “ಸುಗ್ಗಿ ಸಂಭ್ರಮ-ಟಿ 20” ಎಂಬ ಎರಡು ದಿನಗಳ ರಾಜ್ಯಮಟ್ಟದ ಫೆಸ್ಟ್ ತಾ. 12 ಮತ್ತು 13 ರಂದು ಬೆಳಿಗ್ಗೆ 10 ಗಂಟೆಗೆ ಮೀನುಪೇಟೆ ಬಳಿ ಇರುವ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಪೆÇ್ರ. ಪದ್ಮಾಶೇಖರ್, ಸುಗ್ಗಿ ಸಂಭ್ರಮ ಉದ್ಘಾಟಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಕನ್ನಡ, ಇಂಗ್ಲಿಷ್ ಮತ್ತು ಇತಿಹಾಸ ವಿಭಾಗಕ್ಕೆ ಸಂಬಂಧಿಸಿದಂತೆ ಮೂರು ವಿಶೇಷ ಉಪನ್ಯಾಸಗಳನ್ನು ಪೆÇ್ರ. ಎಂ.ಎಸ್. ಶೇಖರ್, ಪೆÇ್ರ. ಮಹಾದೇವ, ಪೆÇ್ರ. ನಿರ್ಮಲ್ ರಾಜ್ ನೀಡಲಿದ್ದಾರೆ.

ತಾ. 13 ರಂದು ರಾಜ್ಯಮಟ್ಟದ 16 ಸ್ಪರ್ಧೆಗಳು ಜರುಗಲಿದ್ದು, ಅನೇಕ ಕಾಲೇಜುಗಳಿಂದ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕಾರ್ಯಪಾಲಕ ಅಭಿಯಂತರ ಪಿ.ಎಸ್. ಸುರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೊಡಗು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಸಮಾರೋಪ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.