ಕೂಡಿಗೆ, ಮಾ. 11: ಶ್ರೀ ಮಾತಾ ದಂಡಿನ ಚೌಡೇಶ್ವರಿ ದೇವಸ್ಥಾನ ಸಮಿತಿ ಕೂಡುಮಂಗಳೂರು ವತಿಯಿಂದ ದೇವಿಯ ವಾರ್ಷಿಕೋತ್ಸವ ತಾ. 21 ರಂದು ನಡೆಯಲಿದೆ. ಇದರ ಅಂಗವಾಗಿ ಬೆಳಿಗ್ಗೆ ಗಣಪತಿ ಹೋಮ, ದುರ್ಗಾಹೋಮ, ನವಕಲಶ ಪಂಚಾಮೃತ ಅಭಿಷೇಕ, ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ನಂತರ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 7 ಗಂಟೆಗೆ ದೇವಿ ವಿಗ್ರಹವನ್ನು ದೀಪಾಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುವುದು, ಪೂಜಾ ಕೆಂಕರ್ಯವನ್ನು ಕಾರ್ಕಳದ ವಿಷ್ಣುಮೂರ್ತಿ ಮತ್ತು ವೃಂದ ನೆರವೇರಿಸಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ರಮೇಶ್ ತಿಳಿಸಿದ್ದಾರೆ.