ಗೋಣಿಕೊಪ್ಪ, ಮಾ. 11: ಉತ್ತಮ ಮಳೆ, ಬೆಳೆ ಕರುಣಿಸುವ ಸಲುವಾಗಿ ಆಚರಿಸುವ ಆಟಕುಲ್ ದೇವಿ ಪೊಂಗಾಲ ಆಚರಣೆಯು ಸಮನ್ವಯ ಪೊಂಗಾಲ ಸಮಿತಿ ವತಿಯಿಂದ ಅತ್ತೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು.

ಆಚರಣೆಯ ನಿಯಮದಂತೆ ಸುಮಾರು 66 ಮಹಿಳೆಯರು ಪೊಂಗಾಲ ಪೂಜೆಯಲ್ಲಿ ಪಾಲ್ಗೊಂಡರು. ದೇವಸ್ಥಾನದ ಹೊರ ಆವರಣದಲ್ಲಿ ಒಲೆಯಲ್ಲಿ ಬೆಂಕಿ ಹೊತ್ತಿಸಿ ಚಾಲನೆ ನೀಡಲಾಯಿತು. ಭಾಗವಹಿಸಿದ್ದ 66 ಮಹಿಳೆಯರು ಪ್ರತ್ಯೇಕವಾಗಿ ಒಲೆ ನಿರ್ಮಿಸಿ ಪ್ರಸಾದ ತಯಾರಿಸಿದರು.ಸಾಂಪ್ರದಾಯಿಕ ಉಡುಗೆ ತೊಟ್ಟು ಪಾಲ್ಗೊಂಡರು. ನಂತರ ಪ್ರಸಾದ ಸಹಬೋಜನ ನಡೆಯಿತು.

ನೂರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಸಮಿತಿ ಸಂಚಾಲಕಿಯಿಂದ ಸರಳಾ ಮಣಿಲಾಲ್, ಸೌಮ್ಯ ಕೃಷ್ಣ, ಲೀನಾ ಲೋಹಿತಾಕ್ಷನ್, ಶೀಜಾ ಪ್ರದೀಪ್ ಇದ್ದರು.