ವೀರಾಜಪೇಟೆ, ಮಾ. 10: ಕಾಕೋಟುಪರಂಬು ಕಾಲಭೈರವ ದೇವಸ್ಥಾನ ಸಮಿತಿ ವತಿಯಿಂದ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಬಿಜೆಪಿಯ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಹಾಗೂ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಅವರುಗಳನ್ನು ದೇವಸ್ಥಾನದ ಆವರಣದಲ್ಲಿ ಸನ್ಮಾನಿಸಲಾಯಿತು.
ಕಾಲಭೈರವ ದೇವಸ್ಥಾನದ ಕೆರೆ ಅಭಿವೃದ್ಧಿಗಾಗಿ ರೂ. 15 ಲಕ್ಷ ನೀಡ ಲಾಗಿದ್ದು ಮುಂದಿನ ಅನುದಾನದಲ್ಲಿ ಇತರ ಕಾಮಗಾರಿಗಳನ್ನು ನಡೆಸ ಲಾಗುವುದು ಗ್ರಾಮಸ್ಥರು ದೇವಸ್ಥಾನ ಆವರಣದಲ್ಲಿರುವ ಜಾಗದ ದಾಖಲಾತಿಗಳನ್ನು ಸರಿಯಾಗಿ ಇಟ್ಟುಕೊಳ್ಳುವಂತೆ ಬೋಪಯ್ಯ ಹೇಳಿದರು. ಕಾಲಭೈರವ ದೇವಸ್ಥಾನ ಸಮಿತಿ ಅಧ್ಯಕ್ಷ ಮಂಡೇಟಿರ ಪೆಮ್ಮಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ದೇವತಕ್ಕರಾದ ಅಮ್ಮಂಡಿರ ಚೇತನ್, ಬಿಜೆಪಿಯ ಜಿಲ್ಲಾ ಸಮಿತಿ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ ಹಾಗೂ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎ.ಪಿ.ಪ್ರಕಾಶ್ ಪೂಣಚ್ಚ ಸ್ವಾಗತಿಸಿ ವಂದಿಸಿದರು.