ಗ್ರಾಮೀಣ ವಿಭಾಗದಲ್ಲಿ ಪತ್ರ್ರಿಕೆಗಳ ವಿತರಣೆ, ಹಾಗೂ ವರದಿಗಾರಿಕೆಗೆ ನಿಜಕ್ಕೂ ಎದೆಗಾರಿಕೆ ಬೇಕು.ಅದರಲ್ಲೂ ಮಲೆನಾಡು ಪ್ರದೇಶದಲ್ಲಿ ಇದೊಂದು ನಿತ್ಯ ಸಾಹಸದಂತೆ ಎನ್ನಬಹುದು.
ಬೆಟ್ಟ ಗುಡ್ಡಗಳ ನಡುವೆ ನೆಲೆ ನಿಂತಿರುವ ಮನೆಗಳಿಗೆ ಪತ್ರಿಕೆ ವಿತರಣೆ ಮಾಡುವದು ಹರ ಸಾಹಸ ಪ್ರಕ್ರಿಯೆ. ಈ ಹಿಂದೆ ಶಾಲೆಗೆ ತೆರಳುವ ಮಕ್ಕಳು ಅದರಿಂದ ಕಿಂಚಿತ್ ಸಂಪಾದನೆಯಾಗುತ್ತದೆ ಎಂದು ಬರುತ್ತಿದ್ದರೂ. ಆ ಕಾಲ ಈಗ ಮಾಯವಾಗಿದೆ. ಪೋಷಕರು ಮಕ್ಕಳ ವಿದ್ಯಾ ಪ್ರಗತಿಗೆ ಆದ್ಯತೆ ನೀಡುವದರಿಂದ ತಾವು ಕಷ್ಟ ಪಟ್ಟಾದರೂ ಸಂಪಾದಿಸಿ ಮಕ್ಕಳಿಗೆ ಯಾವದೇ ತೊಂದರೆ ಆಗಬಾರದೆನ್ನುವ ಸ್ಪಷ್ಟ ನಿರ್ಧಾರ ಹೊಂದಿದ್ದಾರೆ. ಇನ್ನು ಕೆಲವು ಬಡ ಉದ್ಯೋಗಿಗಳು ಬೆಳಗಿನ ವೇಳೆ ಇದೊಂದು ಪೂರಕ ಆದಾಯವೆಂಬದಕ್ಕಾಗಿ ಏಜೆನ್ಸಿ ನಡೆಸುತ್ತಾರೆ. ಏಕೆಂದರೆ. ಏಜೆನ್ಸಿಯನ್ನೇ ಪೂರ್ಣವಾಗಿ ನಂಬಿಕೊಂಡರೆ ಅವರ ಕುಟುಂಬ ನಿರ್ವಹಣೆ ಅಸಾಧ್ಯ.
ಪತ್ರ್ರಿಕೆಗಳ ಮೂಲಕ ಜನ ಪರಿಚಯವಾಗುತ್ತದೆ, ಅದರಿಂದಾಗಿ ತಾವು ಕೈಗೊಳ್ಳುವ ಇತರ ವ್ಯಾಪಾರಕ್ಕೂ ಪ್ರಯೋಜನವಾಗಬಹುದು ಎನ್ನುವ ಆಶಾ ಭಾವನೆಯೂ ಅವರನ್ನು ಪತ್ರಿಕಾ ವಿತರಣೆಗೆ ಎಳೆಸಿರುತ್ತದೆ.ಇನ್ನು ಅನೇಕ ಏಜೆಂಟರಲ್ಲಿ ಸೇವಾ ಮನೋಭಾವವೂ ಇದ್ದು ಇದೊಂದು ಆದಾಯದ ಮೂಲಕ್ಕಿಂತಲೂ ಜನಸೇವೆಗೆ ಅವಕಾಶ ಎಂದು ನಡೆಸುವವರೂ ಇದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ದೂರದೂರದ ಮನೆಗಳಿಗೆ, ತೋಟಗಳ ಮನೆಗಳಿಗೆ ವಿತರಣೆ ಮಾಡುವದು ಕಷ್ಟ. ಅನೇಕರು ತಮ್ಮ ಮಕ್ಕಳು ಶಾಲೆಗೆ ತೆರಳುವಾಗ ಸಂಬಂಧಿತ ಏಜೆನ್ಸಿ ಅಂಗಡಿಗಳಿಂದ ಪತ್ರಿಕೆಗಳನ್ನು ನಿತ್ಯ ಪಡೆಯುತ್ತಾರೆ. ಒಂದೆರಡು ದಿನ ಬಿಟ್ಟು ಪತ್ರಿಕೆ ಪಡೆಯುವದೂ ಇದೆ. ಮತ್ತೆ ಕೆಲವೊಮ್ಮೆ ದೀರ್ಘ ರಜೆ ಸಂದರ್ಭ ಬೇರೆ ವ್ಯವಸ್ಥೆ ಕಲ್ಪಿಸಿಕೊಳ್ಳುತ್ತಾರೆ. ಒಂದಂತೂ ಸತ್ಯ. ಪತ್ರಿಕೆ ಓದುವ ಹವ್ಯಾಸ ಮಾತ್ರ ಇನ್ನೂ ನಮ್ಮ ಜನರಲ್ಲಿ ಉಳಿದಿದೆ ಎನ್ನುವದೇ ಹೆಮ್ಮೆಯ ವಿಷಯ. ಎಷ್ಟೇ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರಲಿ, ದೃಶ್ಯ ಮಾಧ್ಯಮಗಳಲ್ಲಿ ಬರಲಿ, ವಿವರ ಸುದ್ದಿಗಾಗಿ ಅವರು ಪತ್ರ್ರಿಕೆಗಳನ್ನು ಓದುತ್ತಾರೆ. ಅದರಲ್ಲಿಯೂ ಅವರಿಗೆ ಮುಖ್ಯವಾಗಿ ಬೇಕಾದುದು ದೇಶ ವಿದೇಶಗಳಿಗಿಂತ ತಮ್ಮ ಊರಿನ, ತಮ್ಮ ಗ್ರಾಮದ ಸುತ್ತಮುತ್ತಲಿನ ಮಾಹಿತಿಗಳು, ಟೀಕೆ ಟಿಪ್ಪಣಿಗಳು, ಕಾರ್ಯಕ್ರಮಗಳು. ಹೀಗಾಗಿ ಗ್ರಾಮೀಣ ಪತ್ರಿಕೋದ್ಯಮ ಒಳ ಹೂರಣದಲ್ಲಿ ಸಮಸ್ಯೆಗಳನ್ನು ಹೊತ್ತಿದ್ದರೂ ಮೇಲ್ನೋಟದಲ್ಲಿ ಇನ್ನೂ ಜೀವಂತವಾಗಿ ಉಳಿದಿದೆ.
ಇನ್ನು ವರದಿಗಾರಿಕೆ ವಿಚಾರ ಬಂದಾಗ ನಗರ ಮಟ್ಟಕ್ಕೂ ಗ್ರಾಮೀಣ ವಿಭಾಗಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಒಬ್ಬ ವರದಿಗಾರ ಗ್ರಾಮೀಣ ಮಟ್ಟದಲ್ಲಿ ಪ್ರತಿಯೊಬ್ಬ ಗ್ರಾಮಸ್ಥನಿಗೂ ನಿಕಟವರ್ತಿಯಾಗಿರುತ್ತಾನೆ ಅಥವ ಆಗಿರುತ್ತಾಳೆ.(ಏಕೆಂದರೆ ಪತ್ರಿಕೋದ್ಯಮದಲ್ಲಿ ಯುವತಿಯರೂ ಅಧಿಕ ತೊಡಗಿಸಿಕೊಳ್ಳುತ್ತಿದ್ದಾರೆ) ನಗರ ಮಟ್ಟದಲ್ಲಿ ವಿಶಾಲತೆಯಿದ್ದು ಹರಡಿ ಹೋಗಿರುವದರಿಂದ ವರದಿಗಾರನ ಬಗ್ಗೆ ನೇರ ಗಮನವಿರುವದಿಲ್ಲ. ಗ್ರಾಮೀಣ ವಿಭಾಗದಲ್ಲಿ ತನಿಖಾ ವರದಿ ಮಾಡಿದಾಗ, ಸ್ಥಳೀಯ ಭ್ರಷ್ಟ ವ್ಯವಸ್ಥೆ ವಿರುದ್ಧ ಕೈಹಾಕಿದಾಗ ಆ ವರದಿಗಾರನ ಮೇಲೆ ಭ್ರಷ್ಟರ, ಅಕ್ರಮಿಗಳ ಕಣ್ಣು ನೇರ ಬೀಳುತ್ತದೆ. ವರದಿಗಾರನಿಗೆ ಈ ಮಂದಿಯಿಂದ ಅಸಹಕಾರಗಳು ಪ್ರಾರಂಭ ಗೊಳ್ಳುತ್ತವೆ. ಸಣ್ಣ ಊರುಗಳಲ್ಲಿ ಇಂತಹ ಸಮಸ್ಯೆಯನ್ನು ವರದಿಗಾರರು ನಿತ್ಯ ಎದುರಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವನ್ಯಪ್ರಾಣಿ-ಮಾನವ ಸಂಘರ್ಷ ಬಲು ಜೋರಾಗಿದೆ. ಗ್ರಾಮೀಣ ಮಟ್ಟಗಳಲ್ಲಿ ವರದಿಗಾರರು ಆನೆ, ಹುಲಿ, ಚಿರತೆಗಳ ಜಾಡು ಹಿಡಿದು ಪ್ರಾಣಾಪಾಯ ಲೆಕ್ಕಿಸದೆ ವರದಿ ಮಾಡುವಂತಹ ಅನಿವಾರ್ಯತೆಯಿದೆ. ಗ್ರಾಮೀಣ ಜನರ ಪರವಾಗಿ ವರದಿಗಾರರು ಜೊತೆಗೂಡಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ನಿತ್ಯವೂ ಹುಲಿ ಚಿರತೆ ಧಾಳಿಗಳಿಂದ ಹಸು-ಕರುಗಳ ಸಾವು, ದನದ ಕೊಟ್ಟಿಗೆಗಳಿಗೆ ಧಾಳಿ ಮಾಡಿ ಜಾನುವಾರುಗಳ ಭಕ್ಷಣೆ ಸುದ್ದಿಗಳು ನಿತ್ಯ ಭವಿಷ್ಯದಂತೆ ಪರಿಣಮಿಸಿವೆ. ಆನೆ ಧಾಳಿಗೆ ಕಾರ್ಮಿಕರು, ಮಹಿಳೆಯರು, ರೈತರು, ಮಕ್ಕಳು ಬಲಿಯಾಗುತ್ತಿರುವದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಸರಕಾರ ಅರಣ್ಯ ಇಲಾಖೆ ಕಣ್ಣಾಮುಚ್ಚಾಲೆ ಆಡುತ್ತದೆಯೇ ಹೊರತು ಶಾಶ್ವತ ಪರಿಹಾರ ಕಲ್ಪಿಸಲು ವಿಫಲವಾಗಿದೆ. ಈ ಸಂದರ್ಭ ವರದಿಗಾರ ನಿತ್ಯ ಎಲ್ಲ ಕೆಲಸ ಬಿಟ್ಟು ಹಳ್ಳಿ-ಹಳ್ಳಿಗೆ ತೆರಳಬೇಕಾಗುತ್ತದೆ. ಜನರನ್ನು ಸಂಪರ್ಕಸಿ ಕನಿಷ್ಟ ಗ್ರಾಮೀಣ ವಿಭಾಗದಲ್ಲಿ ಪತ್ರ್ರಿಕೆಗಳ ವಿತರಣೆ, ಹಾಗೂ ವರದಿಗಾರಿಕೆಗೆ ನಿಜಕ್ಕೂ ಎದೆಗಾರಿಕೆ ಬೇಕು.ಅದರಲ್ಲೂ ಮಲೆನಾಡು ಪ್ರದೇಶದಲ್ಲಿ ಇದೊಂದು ನಿತ್ಯ ಸಾಹಸದಂತೆ ಎನ್ನಬಹುದು.
ಬೆಟ್ಟ ಗುಡ್ಡಗಳ ನಡುವೆ ನೆಲೆ ನಿಂತಿರುವ ಮನೆಗಳಿಗೆ ಪತ್ರಿಕೆ ವಿತರಣೆ ಮಾಡುವದು ಹರ ಸಾಹಸ ಪ್ರಕ್ರಿಯೆ. ಈ ಹಿಂದೆ ಶಾಲೆಗೆ ತೆರಳುವ ಮಕ್ಕಳು ಅದರಿಂದ ಕಿಂಚಿತ್ ಸಂಪಾದನೆಯಾಗುತ್ತದೆ ಎಂದು ಬರುತ್ತಿದ್ದರೂ. ಆ ಕಾಲ ಈಗ ಮಾಯವಾಗಿದೆ. ಪೋಷಕರು ಮಕ್ಕಳ ವಿದ್ಯಾ ಪ್ರಗತಿಗೆ ಆದ್ಯತೆ ನೀಡುವದರಿಂದ ತಾವು ಕಷ್ಟ ಪಟ್ಟಾದರೂ ಸಂಪಾದಿಸಿ ಮಕ್ಕಳಿಗೆ ಯಾವದೇ ತೊಂದರೆ ಆಗಬಾರದೆನ್ನುವ ಸ್ಪಷ್ಟ ನಿರ್ಧಾರ ಹೊಂದಿದ್ದಾರೆ. ಇನ್ನು ಕೆಲವು ಬಡ ಉದ್ಯೋಗಿಗಳು ಬೆಳಗಿನ ವೇಳೆ ಇದೊಂದು ಪೂರಕ ಆದಾಯವೆಂಬದಕ್ಕಾಗಿ ಏಜೆನ್ಸಿ ನಡೆಸುತ್ತಾರೆ. ಏಕೆಂದರೆ. ಏಜೆನ್ಸಿಯನ್ನೇ ಪೂರ್ಣವಾಗಿ ನಂಬಿಕೊಂಡರೆ ಅವರ ಕುಟುಂಬ ನಿರ್ವಹಣೆ ಅಸಾಧ್ಯ.
ಪತ್ರ್ರಿಕೆಗಳ ಮೂಲಕ ಜನ ಪರಿಚಯವಾಗುತ್ತದೆ, ಅದರಿಂದಾಗಿ ತಾವು ಕೈಗೊಳ್ಳುವ ಇತರ ವ್ಯಾಪಾರಕ್ಕೂ ಪ್ರಯೋಜನವಾಗಬಹುದು ಎನ್ನುವ ಆಶಾ ಭಾವನೆಯೂ ಅವರನ್ನು ಪತ್ರಿಕಾ ವಿತರಣೆಗೆ ಎಳೆಸಿರುತ್ತದೆ.ಇನ್ನು ಅನೇಕ ಏಜೆಂಟರಲ್ಲಿ ಸೇವಾ ಮನೋಭಾವವೂ ಇದ್ದು ಇದೊಂದು ಆದಾಯದ ಮೂಲಕ್ಕಿಂತಲೂ ಜನಸೇವೆಗೆ ಅವಕಾಶ ಎಂದು ನಡೆಸುವವರೂ ಇದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ದೂರದೂರದ ಮನೆಗಳಿಗೆ, ತೋಟಗಳ ಮನೆಗಳಿಗೆ ವಿತರಣೆ ಮಾಡುವದು ಕಷ್ಟ. ಅನೇಕರು ತಮ್ಮ ಮಕ್ಕಳು ಶಾಲೆಗೆ ತೆರಳುವಾಗ ಸಂಬಂಧಿತ ಏಜೆನ್ಸಿ ಅಂಗಡಿಗಳಿಂದ ಪತ್ರಿಕೆಗಳನ್ನು ನಿತ್ಯ ಪಡೆಯುತ್ತಾರೆ. ಒಂದೆರಡು ದಿನ ಬಿಟ್ಟು ಪತ್ರಿಕೆ ಪಡೆಯುವದೂ ಇದೆ. ಮತ್ತೆ ಕೆಲವೊಮ್ಮೆ ದೀರ್ಘ ರಜೆ ಸಂದರ್ಭ ಬೇರೆ ವ್ಯವಸ್ಥೆ ಕಲ್ಪಿಸಿಕೊಳ್ಳುತ್ತಾರೆ. ಒಂದಂತೂ ಸತ್ಯ. ಪತ್ರಿಕೆ ಓದುವ ಹವ್ಯಾಸ ಮಾತ್ರ ಇನ್ನೂ ನಮ್ಮ ಜನರಲ್ಲಿ ಉಳಿದಿದೆ ಎನ್ನುವದೇ ಹೆಮ್ಮೆಯ ವಿಷಯ. ಎಷ್ಟೇ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರಲಿ, ದೃಶ್ಯ ಮಾಧ್ಯಮಗಳಲ್ಲಿ ಬರಲಿ, ವಿವರ ಸುದ್ದಿಗಾಗಿ ಅವರು ಪತ್ರ್ರಿಕೆಗಳನ್ನು ಓದುತ್ತಾರೆ. ಅದರಲ್ಲಿಯೂ ಅವರಿಗೆ ಮುಖ್ಯವಾಗಿ ಬೇಕಾದುದು ದೇಶ ವಿದೇಶಗಳಿಗಿಂತ ತಮ್ಮ ಊರಿನ, ತಮ್ಮ ಗ್ರಾಮದ ಸುತ್ತಮುತ್ತಲಿನ ಮಾಹಿತಿಗಳು, ಟೀಕೆ ಟಿಪ್ಪಣಿಗಳು, ಕಾರ್ಯಕ್ರಮಗಳು. ಹೀಗಾಗಿ ಗ್ರಾಮೀಣ ಪತ್ರಿಕೋದ್ಯಮ ಒಳ ಹೂರಣದಲ್ಲಿ ಸಮಸ್ಯೆಗಳನ್ನು ಹೊತ್ತಿದ್ದರೂ ಮೇಲ್ನೋಟದಲ್ಲಿ ಇನ್ನೂ ಜೀವಂತವಾಗಿ ಉಳಿದಿದೆ.
ಇನ್ನು ವರದಿಗಾರಿಕೆ ವಿಚಾರ ಬಂದಾಗ ನಗರ ಮಟ್ಟಕ್ಕೂ ಗ್ರಾಮೀಣ ವಿಭಾಗಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಒಬ್ಬ ವರದಿಗಾರ ಗ್ರಾಮೀಣ ಮಟ್ಟದಲ್ಲಿ ಪ್ರತಿಯೊಬ್ಬ ಗ್ರಾಮಸ್ಥನಿಗೂ ನಿಕಟವರ್ತಿಯಾಗಿರುತ್ತಾನೆ ಅಥವ ಆಗಿರುತ್ತಾಳೆ.(ಏಕೆಂದರೆ ಪತ್ರಿಕೋದ್ಯಮದಲ್ಲಿ ಯುವತಿಯರೂ ಅಧಿಕ ತೊಡಗಿಸಿಕೊಳ್ಳುತ್ತಿದ್ದಾರೆ) ನಗರ ಮಟ್ಟದಲ್ಲಿ ವಿಶಾಲತೆಯಿದ್ದು ಹರಡಿ ಹೋಗಿರುವದರಿಂದ ವರದಿಗಾರನ ಬಗ್ಗೆ ನೇರ ಗಮನವಿರುವದಿಲ್ಲ. ಗ್ರಾಮೀಣ ವಿಭಾಗದಲ್ಲಿ ತನಿಖಾ ವರದಿ ಮಾಡಿದಾಗ, ಸ್ಥಳೀಯ ಭ್ರಷ್ಟ ವ್ಯವಸ್ಥೆ ವಿರುದ್ಧ ಕೈಹಾಕಿದಾಗ ಆ ವರದಿಗಾರನ ಮೇಲೆ ಭ್ರಷ್ಟರ, ಅಕ್ರಮಿಗಳ ಕಣ್ಣು ನೇರ ಬೀಳುತ್ತದೆ. ವರದಿಗಾರನಿಗೆ ಈ ಮಂದಿಯಿಂದ ಅಸಹಕಾರಗಳು ಪ್ರಾರಂಭ ಗೊಳ್ಳುತ್ತವೆ. ಸಣ್ಣ ಊರುಗಳಲ್ಲಿ ಇಂತಹ ಸಮಸ್ಯೆಯನ್ನು ವರದಿಗಾರರು ನಿತ್ಯ ಎದುರಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವನ್ಯಪ್ರಾಣಿ-ಮಾನವ ಸಂಘರ್ಷ ಬಲು ಜೋರಾಗಿದೆ. ಗ್ರಾಮೀಣ ಮಟ್ಟಗಳಲ್ಲಿ ವರದಿಗಾರರು ಆನೆ, ಹುಲಿ, ಚಿರತೆಗಳ ಜಾಡು ಹಿಡಿದು ಪ್ರಾಣಾಪಾಯ ಲೆಕ್ಕಿಸದೆ ವರದಿ ಮಾಡುವಂತಹ ಅನಿವಾರ್ಯತೆಯಿದೆ. ಗ್ರಾಮೀಣ ಜನರ ಪರವಾಗಿ ವರದಿಗಾರರು ಜೊತೆಗೂಡಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ನಿತ್ಯವೂ ಹುಲಿ ಚಿರತೆ ಧಾಳಿಗಳಿಂದ ಹಸು-ಕರುಗಳ ಸಾವು, ದನದ ಕೊಟ್ಟಿಗೆಗಳಿಗೆ ಧಾಳಿ ಮಾಡಿ ಜಾನುವಾರುಗಳ ಭಕ್ಷಣೆ ಸುದ್ದಿಗಳು ನಿತ್ಯ ಭವಿಷ್ಯದಂತೆ ಪರಿಣಮಿಸಿವೆ. ಆನೆ ಧಾಳಿಗೆ ಕಾರ್ಮಿಕರು, ಮಹಿಳೆಯರು, ರೈತರು, ಮಕ್ಕಳು ಬಲಿಯಾಗುತ್ತಿರುವದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಸರಕಾರ ಅರಣ್ಯ ಇಲಾಖೆ ಕಣ್ಣಾಮುಚ್ಚಾಲೆ ಆಡುತ್ತದೆಯೇ ಹೊರತು ಶಾಶ್ವತ ಪರಿಹಾರ ಕಲ್ಪಿಸಲು ವಿಫಲವಾಗಿದೆ. ಈ ಸಂದರ್ಭ ವರದಿಗಾರ ನಿತ್ಯ ಎಲ್ಲ ಕೆಲಸ ಬಿಟ್ಟು ಹಳ್ಳಿ-ಹಳ್ಳಿಗೆ ತೆರಳಬೇಕಾಗುತ್ತದೆ. ಜನರನ್ನು ಸಂಪರ್ಕಸಿ ಕನಿಷ್ಟ ಅವರ ಅಳಲನ್ನು ಮಾಧ್ಯಮಗಳ ಮೂಲಕ ಪ್ರಚುರಗೊಳಿಸಬೇಕಾಗುತ್ತದೆ. ಆನೆ, ಹುಲಿ, ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಗಳಿಗೆ ಅಧಿಕಾರಿಗಳೊಂದಿಗೆ ಕ್ಯಾಮರಾ ಸಹಿತ ತೆರಳಬೇಕಾಗುತ್ತದೆ. ಎಷ್ಟೋ ವೇಳೆ ವರದಿಗಾರರು ಪ್ರಾಣಾಪಾಯಕ್ಕೆ ಸಿಲುಕಿ ಆನೆ ಧಾಳಿಗಳಿಂದ ತಪ್ಪಿಸಿಕೊಂಡು ಕರ್ತವ್ಯ ನಿರ್ವಹಿಸಿದ ಅನೇಕ ನೈಜ ನಿದರ್ಶನಗಳಿವೆ. ಗ್ರಾಮೀಣ ವಿಭಾಗದಲ್ಲಿ ರೈತರ ಸಮಸ್ಯೆ, ಬೆಳೆಗಾರರ ಬವಣೆ, ವಿದ್ಯುತ್ ತೊಂದರೆ, ಬ್ಯಾಂಕ್‍ಗಳಿಂದ ಸಾಲ ವಸೂಲಾತಿಗೆ ಧಾಳಿ ಇಂತಹುದೇ ಸಮಸ್ಯೆಗಳ ಮಹಾಪೂರವೇ ನಿತ್ಯ ಸುದ್ದಿಯಾಗುತ್ತಿರುತ್ತದೆ. ಹೀಗಾಗಿ ಸಮಸ್ಯೆಗಳನ್ನು ಓರ್ವ ಗ್ರಾಮೀಣ ವರದಿಗಾರ ಅರ್ಥ ಮಾಡಿಕೊಂಡಷ್ಟು ಇನ್ಯಾರಿಗೂ ಸಾಧ್ಯವಿಲ್ಲ. ಆದರೆ, ಜಿಲ್ಲೆಗಳಿಗೆ, ಮುಖ್ಯಮಂತ್ರಿ, ಕೇಂದ್ರ ಮಂತ್ರಿಗಳು, ರಾಜ್ಯದ ಮಂತ್ರಿಗಳು ಬಂದಾಗ ಗ್ರಾಮೀಣ ವಿಭಾಗದ ನೈಜ ಸಮಸ್ಯೆಗಳ ಬಗ್ಗೆ ನಿಖರ ಮಾಹಿತಿಯಿರುವ ಗ್ರಾಮೀಣ ವರದಿಗಾರರಿಗೆ ಅದನ್ನು ನಿವೇದಿಸಿ ಪ್ರಶ್ನೆ ಮಾಡುವಂತಹ ಅವಕಾಶವೂ ಬಹುಪಾಲು ಸಿಗುವದು ದುಸ್ತರ. ನಗರ ಮಟ್ಟಗಳಲ್ಲಿ ಕೇವಲ ರಾಜಕೀಯ ಸಂಬಂಧಿತ, ಯಾರದೋ ವೈಯಕ್ತಿಕ ಹೇಳಿಕೆಗಳ ಪ್ರತಿಕ್ರಿಯೆಗಳಿಗೆ ಆದ್ಯತೆ ನೀಡುವ ಮೂಲಕ ವರದಿಗಳು ವ್ಯತಿರಿಕ್ತ ದಿಕ್ಕಿನತ್ತ ಸಾಗುತ್ತಿರುವದು ದುರದೃಷ್ಟಕರ. ಇದರಿಂದಾಗಿ ಗ್ರಾಮೀಣ ವಿಭಾಗದ ಗಹನ ಸಮಸ್ಯೆಗಳು ನಿತ್ಯ ಸುದ್ದಿಗೆ ಸೀಮಿತವಾಗುತ್ತವೆಯೇ ಹೊರತು ಪರಿಹಾರ ಮಾತ್ರ ಶೂನ್ಯ. ಏಕೆಂದರೆ, ರಾಜಕೀಯ ನಾಯಕರು ಬಂದಾಗ ಕೇವಲ ಸಂದಿಗ್ಧತೆಯ, ಅವರ ವೈಯಕ್ತಿಕ, ಅವರ ರಾಜಕೀಯ ಚದುರಂಗದಾಟದ, ಸ್ವಾರ್ಥ ಪಿಪಾಸುತನ ಅಧಿಕಾರ ಲಾಲಸೆಯ, ಅವರ ಪಕ್ಷಾಂತರದ ಸುದ್ದಿಗಳಿಗೆÀ ಆಧುನಿಕ ಮಾಧ್ಯಮ ನೀತಿಗಳು ಒತ್ತುಕೊಟ್ಟು ಗ್ರಾಮೀಣ ಸಮಸ್ಯೆಗಳ ಬಗ್ಗೆ ಅಂತಹ ನಾಯಕರಲ್ಲಿ ಪ್ರಶ್ನೆ ಮಾಡುವವರೇ ಕಡಿಮೆಯಾಗುತ್ತಿದ್ದಾರೆ. ಗಿಮಿಕ್ ಸುದ್ದಿಗಳಿಂದಾಗಿ ಬಡ ರೈತ ಹೊಲ ಉಳುತ್ತಲೇ ಇರುತ್ತಾನೆ. ನಾಯಕರುಗಳು ಜಿಲ್ಲೆಗಳಿಗೆ ಬಂದು ಗ್ರಾಮೀಣ ವಿಭಾಗದ ಯಾವದೆ ಸಮಸ್ಯೆಗಳನ್ನು ಪತ್ರಕರ್ತರು ಗಮನಕ್ಕೆ ತಾರದಿದ್ದರೆ, ಗಿಮಿಕ್ ಸುದ್ದಿಗಳಿಗೆ ಬಣ್ಣ ಸವರಿ ಮರುದಿನ ಹೈಲೈಟ್ ಸುದ್ದಿಯ ವೀರರಾಗಿ ಈ ನಾಯಕರು ಮೆರೆಯುತ್ತಾರೆ. ಗ್ರಾಮೀಣ ಜನರ ಬವಣೆಯನ್ನು ಈ ನಾಯಕರು ಪೂರ್ಣ ಮರೆಯುತ್ತಾರೆ.
ಗ್ರಾಮೀಣ ವರದಿಗಾರರಿಗೆ ವಾರ್ತಾ ಇಲಾಖೆಯಿಂದ ಯಾವದೇ ವಾಹನ ಸೌಲಭ್ಯಗಳಿರುವದಿಲ್ಲ. ಅವರ ಖರ್ಚನ್ನು ಜಿಲ್ಲಾ ಮಟ್ಟದ ಪತ್ರಿಕೆಗಳ ಅಡಳಿತ ವರ್ಗ ಎಲ್ಲವನ್ನೂ ಭರಿಸಲೂ ಸಾಧ್ಯವಾಗುತ್ತಿಲ್ಲ ಏಕೆಂದರೆ ಜಿಲ್ಲಾ ಮಟ್ಟದ ಪತ್ರಿಕೆಗಳ ಆರ್ಥಿಕ ಸ್ಥಿತಿಯೂ ಉತ್ತಮವಾಗಿರುವದಿಲ್ಲ. ಸರಕಾರೀ ಜಾಹೀರಾತು ಕೂಡ ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಕೇವಲ ಕನಿಷ್ಟ ಪ್ರಮಾಣದಲ್ಲಿ ನೀಡಲ್ಪಡುತ್ತಿದೆ. ಅಲ್ಲದೆ, ಜಾಹೀರಾತು ದರವನ್ನು ಬಹಳಷ್ಟು ವರ್ಷಗಳಿಂದ ಏರಿಸದೆ ಯಥಾಸ್ಥಿತಿಯಲ್ಲಿದೆ. ಇದರಿಂದಾಗಿ ನೈಜ ಪತ್ರಿಕೋದ್ಯಮ ಡೋಲಾಯಮಾನ ಸ್ಥಿತಿಯಲ್ಲಿದೆ. ಈ ಬಗ್ಗೆ ವಾರ್ತಾ ಆಯುಕ್ತರು ಪರಿಗಣಿಸು ವಂತೆ ಮನವಿ ಮಾಡುತ್ತೇನೆ. ಜಿಲ್ಲಾ ಮತ್ತು ಸಣ್ಣ ಪತ್ರಿಕೆಗಳಿಗೆ ಜಾಹೀರಾತು ಪ್ರಮಾಣ ಮತ್ತು ದರವನ್ನು ಹೆಚ್ಚಿಸಲು ಮನಸ್ಸು ಮಾಡುವಂತೆ ಈ ಮೂಲಕ ಕೋರುತ್ತೇನೆ. ಇತ್ತೀಚೆಗೆ ನೋಡಿದೆ. ಕೇವಲ ವಾಟ್ಸಾಪ್‍ಗಳಲ್ಲ್ಲಿ ಸೃಷ್ಟಿಯಾಗಿರುವ ಕೆಲವು ದಿಢೀರ್ ಪತ್ರಿಕೆಗಳಿಗೆ ಸರಕಾರೀ ನಿಯಂತ್ರಿತ ಸಂಸ್ಥೆಗಳ ಜಾಹೀರಾತು ನೀಡಲ್ಪಡುತ್ತಿದೆ. ಇದರಿಂದ ನೈಜ ಪರಿಶ್ರಮದ ಜಿಲ್ಲಾ ಮತ್ತು ಸಣ್ಣ ಪತ್ರಿಕೆಗಳಿಗೆ ಧಕ್ಕೆಯಾಗುತ್ತಿದೆ. ಈ ಬಗ್ಗೆಯೂ ಗಮನಿಸುವಂತೆ ಕೋರುತ್ತೇನೆ.
ಇತ್ತೀಚೆಗೆ ಕೊಡಗು ಜಿಲ್ಲೆಯೂ ಸೇರಿದಂತೆ ಮಳೆ ದುರಂತಗಳಾದಾಗ ನಿಜಕ್ಕೂ ಗ್ರಾಮೀಣ ವರದಿಗಾರರ ಸ್ಥಿತಿ ದಯನೀಯ ಎನ್ನಬಹುದು. ಅನೇಕ ಕಡೆ ನಮ್ಮ ಮಾಧ್ಯಮ ಮಿತ್ರರು ತಾವೇ ಸಾಹಸಪಟ್ಟು ಪ್ರಾಣಾಪಾಯ ಲೆಕ್ಕಿಸದೆ ಅನೇಕ ಮಂದಿಯನ್ನು ರಕ್ಷಿಸಿದ ಘಟನೆಗಳಿವೆ. ವರದಿಗಾರಿಕೆಗಿಂತ ಪ್ರಾಣ ಉಳಿಸುವದು ಮುಖ್ಯ ಎಂದು ಅವರ ಬಟ್ಟೆಗಳೆಲ್ಲ ಕೆಸರಿನಲ್ಲಿ ತೋಯ್ದು ಹೋದಾಗಲೂ ಪರಿಶ್ರಮ ಪಟ್ಟಿದ್ದಾರೆ. ಕೆಲವರೆಲ್ಲ ಕೆಲವು ದಿನ ದೂರವಾಣಿ ಸಂಪರ್ಕಕಕ್ಕೂ ಸಿಗದೆ ಅವರ ಮನೆಯವರಿಗೇ ಗಾಬರಿಯಾಗುವಂತೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕ ವರದಿಗಾರರು ತಾವೂ ಕೃಷಿಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಇನ್ನು ಕೆಲವರು ಸಣ್ಣ ಪುಟ್ಟ ವ್ಯಾಪಾರ, ಅಂಗಡಿ ವ್ಯವಹಾರ ನಡೆಸುತ್ತಿರುತ್ತಾರೆ ಆದರೆ ಈ ಮಂದಿಗೆ ಕೆಲವೊಮ್ಮೆ ಸುದ್ದಿ ಸಂಗ್ರಹಾತಿಗೇ ಬಹಳಷ್ಟು ಕಾಲ ವ್ಯಯವಾಗುವದರಿಂದ ತಮ್ಮ ವೈಯಕ್ತಿಕ ಬದುಕಿಗೆ ಧಕ್ಕೆಯಾಗುವದಿದೆ. ಅವರಿಗೆ ಒಂದೇ ತೃಪ್ತಿಯೆಂದರೆ, ತಮ್ಮ ಊರಿನ ಜನರ ನೈಜ ಸಮಸ್ಯೆಗಳ ಪರಿಹಾರಕ್ಕೆ ವರದಿಗಳ ಮೂಲಕ ನಿರಂತರ ಪ್ರಯತ್ನ, ಜೊತೆಗೆ ಸಂಬಂಧಿತ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಜಾಗೃತಿಗೊಳಿಸುವ ಮೂಲಕ ಜನರ ಸಮಸ್ಯೆಗಳತ್ತ ಗಮನಹರಿಸುವಂತೆ ಮಾಡುವ ಜವಾಬ್ದಾರಿಕೆ ನಿರ್ವಹಣೆ. ಅಂತೂ ಗ್ರಾಮೀಣ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಏಜೆಂಟರುಗಳಿರಬಹುದು, ವರದಿಗಾರರಿರಬಹುದು ಅವರು ಈ ವೃತ್ತಿಯಲ್ಲಿ ಗಳಿಕೆಗಿಂತ ಜನ ಸೇವೆ ಮಾಡುತ್ತಾರೆ ಎನ್ನುವದು ಅರ್ಥಪೂರ್ಣವಾಗಬಲ್ಲುದು. ಜನರೂ ಕೂಡ ತಮಗೆ ಸುಲಭವಾಗಿ ಸಿಗುವ ಆತ್ಮೀಯ ವ್ಯಕ್ತಿಗಳೆಂದು ಭಾವಿಸಿ ಗ್ರಾಮೀಣ ವರದಿಗಾರರೊಂದಿಗೆ ಆದ್ಯ ಮತ್ತು ಅಧಿಕ ಸಂಪರ್ಕವಿರಿಸಿಕೊಂಡಿರುತ್ತಾರೆ. ಸಣ್ಣ ಗ್ರಾಮಗಳಲ್ಲಿ ಏಜೆಂಟರೆ ವರದಿಗಾರರಾಗಿಯೂ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಈಗಂತೂ ಹೇಗೋ, ಕಂಪ್ಯೂಟರ್, ಲ್ಯಾಪ್‍ಟಾಪ್ ಗಳನ್ನು ಹೊಂದಿಸಿಕೊಂಡು ಗ್ರಾಮೀಣ ವರದಿಗಾರರು ತಾವೇ ಕಂಪೋಸ್ ಮಾಡಿ ಸುದ್ದಿಗಳನ್ನು ಕಳಿಸುವದಿದೆ. ವಾರ್ತಾ ಆಯುಕ್ತರಲ್ಲಿ ಒಂದು ವಿನಂತಿ. ಸರಕಾರ ಸಮಾಜದ ಎಲ್ಲ ವಿಭಾಗಗಳ ಮಂದಿಗೆ ಏನೇನೋ ಯೋಜನೆ ತಯಾರು ಮಾಡಿ ನೆರವು ನೀಡುತ್ತದೆ. ಲಕ್ಷ-ಕೋಟಿಗಳನ್ನು ಖರ್ಚು ಮಾಡುತ್ತದೆ. ಗ್ರಾಮಾಂತರ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಸಣ್ಣ ಪತ್ರ್ರಿಕೆಗಳ ವರದಿಗಾರರು ಹಾಗೂ ವರದಿಯನ್ನೂ ಮಾಡುವ ಏಜಂಟರು ಗಳಿಗೇಕೆ ಲ್ಯಾಪ್ ಟ್ಯಾಪ್ ನೀಡುವ ಬಗ್ಗೆ ಚಿಂತಿಸಬಾರದು ? ನಿತ್ಯವೂ ತಮ್ಮ ಸುದ್ದಿಗಳನ್ನು ಪ್ರಕಟಿಸುವ, ಅಲ್ಲದೆ ಜಾಗೃತಿ ಮೂಡಿಸಿ ಪ್ರಗತಿ ಕಾರ್ಯಗಳಲ್ಲಿ ಪರೋಕ್ಷವಾಗಿ ಪಾಲ್ಗೊಳ್ಳುವ ಪತ್ರಕರ್ತರಿಗೆ ನೆರವು ನೀಡುವದರಿಂದ ಸರಕಾರೀ ಖಜಾನೆ ಖಂಡಿತ ಖಾಲಿಯಾಗುವದಿಲ್ಲ. ಈ ಬಗ್ಗೆ ವಾರ್ತಾ ಇಲಾಖಾ ಪ್ರಮುಖರು ಯೋಜನೆ ತಯಾರಿಸಿ ಸರಕಾರದ ಮೂಲಕ ಜಾರಿಗೊಳಿಸುವದು ಸೂಕ್ತ.
-ಹೆಚ್. ಕೆ. ಜಗದೀಶ್