ಶನಿವಾರಸಂತೆ, ಮಾ. 9: ಗುಡುಗಳಲೆ ಬದ್ರಿಯಾ ಮಸೀದಿ ವತಿಯಿಂದ ಇತಿಹಾಸ ಪ್ರಸಿದ್ಧ ಹಝ್ರತ್ ಫಖೀರ್ ಷಾಹ್ ವಲಿಯುಲ್ಲಾಹಿ ಉರೂಸ್ ಮುಬಾರಕ್ ತಾ. 12 ರಿಂದ 15ರ ವರೆಗೆ ರಾತ್ರಿ 8 ಗಂಟೆಗೆ ನಡೆಯಲಿದೆ. ಧಾರ್ಮಿಕ ಪ್ರವಚನ ಹಾಗೂ ದುಅ ಮಜ್ಲಿಸ್ ಹಮ್ಮಿಕೊಳ್ಳಲಾಗಿದೆ.
ತಾ. 12 ರಂದು ಕೇರಳ ಪಟ್ಟಾಂಬಿಯ ಬಹು ಅಸ್ಸಯ್ಯಿದ್ ಹುಸೈನ್ ತಂಙಳ್ ಅಲ್ ಅಝ್ ಹರಿ ಅಲ್ ಹೃದರೂಸಿ ನೇತೃತ್ವದಲ್ಲಿ ಖತ್ಮುಲ್ ಖತ್ ಮುಲ್ ಖುರ್ ಆನ್ ದುಅ ಹಾಗೂ ಸೃಲಾತ್ ಮಜ್ಕಿಸ್ ನಡೆಯಲಿದೆ. ತಾ. 13 ರಂದು ಕಿಲ್ಲೂರಿನ ಬಹು ಅಬ್ದುಲ್ ಹಮೀದ್ ಫೈಝಿ ಅವರಿಂದ ಧಾರ್ಮಿಕ ಪ್ರವಚನ. ರಾತ್ರಿ 7 ಗಂಟೆಗೆ ಇಶಲ್ ನೈಟ್ ಪ್ರೋಗ್ರಾಮ್ ಹಾಗೂ ತಾ. 14 ರಂದು ಕಾಸರಗೋಡಿನ ಬಹು ಯು.ಕೆ. ಮಹಮ್ಮದ್ ಹನೀಫ್ ನಝಾಮಿ ಅವರಿಂದ ಧಾರ್ಮಿಕ ಪ್ರವಚನ ನಡೆಯಲಿದೆ.
ತಾ. 15 ರಂದು ಬೆಳಿಗ್ಗೆ 8 ರಿಂದ ಸಂಜೆ 5ರ ರವರೆಗೆ ಉರೂಸ್ ಸಮಾರಂಭ ನಡೆಯಲಿದೆ. ಬೆಳಿಗ್ಗೆ 11.30ಕ್ಕೆ ಮೌಲಿದ್ ಪಾರಾಯಣ 12.30 ರಿಂದ ಮಧ್ಯಾಹ್ನ 3ರ ವರೆಗೆ ಅನ್ನದಾನ ಏರ್ಪಡಿಸಲಾಗಿದೆ ಎಂದು ಬದ್ರಿಯಾ ಮಸೀದಿ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.