ಸೋಮವಾರಪೇಟೆ, ಮಾ. 9: ಸಮೀಪದ ಕಲ್ಕಂದೂರು ಕೆ.ಸಿ.ಸಿ. ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ತಾ. 14 ಮತ್ತು 15ರಂದು ಸ್ಥಳೀಯ ಬಿಟಿಸಿಜಿ ಕಾಲೇಜು ಮೈದಾನದಲ್ಲಿ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಪಂದ್ಯಾಟದಲ್ಲಿ ವಿಜೇತವಾಗುವ ತಂಡಗಳಿಗೆ ಪ್ರಥಮ ಬಹುಮಾನವಾಗಿ 12 ಸಾವಿರ ನಗದು, ದ್ವಿತೀಯ ಬಹುಮಾನವಾಗಿ 7 ಸಾವಿರ ನಗದು ಸೇರಿದಂತೆ ವೈಯುಕ್ತಿಕ ವಿಭಾಗದಲ್ಲಿ ಬಹುಮಾನಗಳನ್ನು ನೀಡಲಾಗುವದು. ಹೆಚ್ಚಿನ ಮಾಹಿತಿಗಾಗಿ ಮೊ: 9483600521, 9449988239 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.