ಸುಂಟಿಕೊಪ್ಪ, ಮಾ. 9: ಫೆ. 20 ರಂದು ಸಿಂಕೋನ ತೋಟದ ಬಳಿ ಚವರ್‍ಲೆಟ್ ಆಸ್ಟ್ರ ಕಾರೊಂದು ಅವಘಡಕ್ಕೀಡಾಗಿ ಗಂಭೀರ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 7ನೇ ಹೊಸಕೋಟೆಯ ಖಾದರ್ ಎಂಬವರ ಪುತ್ರಿ ಸಫ್ರಿನಾ(32) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸಫ್ರೀನಾ ಹೆಣ್ಣು ಮಗುವನ್ನು ಅಗಲಿದ್ದಾರೆ. ಕಾರು ಚಾಲಕ ಇಲ್ಲಿನ 2ನೇ ವಿಭಾಗದ ರಫೀಕ್ ಅವಘಡ ಸಂಭವಿಸಿದ ದಿನವೇ ಕೊನೆಯುಸಿರೆಳೆದಿದ್ದರು.