ಭಾಗಮಂಡಲ, ಮಾ. 9: ಸಣ್ಣಪುಲಿಕೋಟುವಿನ ಕುಯ್ಯಮುಡಿ ಸೋಮಪ್ಪ ಎಂಬವರ ತೋಟದಲ್ಲಿ ಕರಿಮೆಣಸು ಕುಯ್ಯುತ್ತಿದ್ದ ಬೊಮ್ಮೆ ಲಿಂಗಪ್ಪ (58) ಎಂಬವರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಳಿಗ್ಗೆ 11 ಗಂಟೆ ವೇಳೆಗೆ ಪತ್ನಿ ಲತಾ ಅವರು ಕುಡಿಯಲು ಕಾಫಿ ನೀಡಲೆಂದು ತೆರಳಿದಾಗ ಬೊಮ್ಮಲಿಂಗಪ್ಪ ಸಾವನ್ನಪ್ಪಿರುವುದು ಕಂಡುಬಂದಿದ್ದು, ಸಾವಿಗೆ ಕಾರಣ ತಿಳಿದು ಬಂದಿಲ್ಲ. ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ.