ಮಡಿಕೇರಿ, ಮಾ. 8: ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಾದಾಪುರದ ಡಿ. ಚೆನ್ನಮ್ಮ ಪದವಿ ಪೂರ್ವ ಕಾಲೇಜು ಮತ್ತು ಕೋರಂಗಾಲದ ಜ್ಞಾನೋದಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸಂಬಂಧಿತ ಮಾರ್ಗದರ್ಶನ ಏರ್ಪಡಿಸಲಾಗಿತ್ತು. ಬೆಳ್ತಂಗಡಿಯ ನಿವೃತ್ತ ಪ್ರಾಂಶುಪಾಲ, ಎಸ್‍ಎಸ್‍ಎಲ್‍ಸಿ ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯ ವಿಶ್ವೇಶ್ವರ ಭಟ್ ಮಾರ್ಗದರ್ಶನ ನೀಡಿದರು.
ರೋಟರಿ ಮಡಿಕೇರಿಯ ಅಧ್ಯಕ್ಷ ಕೆ.ಎಸ್. ರತನ್ ತಮ್ಮಯ್ಯ, ಕಾರ್ಯದರ್ಶಿ ಕೆ.ಸಿ. ಕಾರ್ಯಪ್ಪ, ಯೋಜನಾ ನಿರ್ದೇಶಕ ಎಂ. ಈಶ್ವರಭಟ್ ಕಾರ್ಯಕ್ರಮದಲ್ಲಿ ಹಾಜರಿದ್ದರು.