ಸುಂಟಿಕೊಪ್ಪ, ಮಾ. 8: ಪ್ರಸಕ್ತ ಸಾಲಿನಲ್ಲಿ ಶುಂಠಿ ಇಳುವರಿಯಿಂದ ಲಾಭಗಳಿಸಿದ ರೈತರು ಭತ್ತಕ್ಕೆ ನಿರೀಕ್ಷಿತ ಬೆಲೆ ಸಿಗದೆ ಇರುವುದರಿಂದ ಶುಂಠಿ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಂಡು ಬಂದಿದೆ.

ಕಳೆದ ವರ್ಷ ಜಿಲ್ಲೆಯಲ್ಲಿ ಶುಂಠಿ ಕೃಷಿಗೆ ದರ ಕೈಕೊಡುತ್ತಿರುವುದನ್ನು ಮನಗಂಡು ಹೆಚ್ಚಿನ ರೈತರು ಶುಂಠಿ ಕೃಷಿ ಮಾಡಿರಲಿಲ್ಲ. ಧೈರ್ಯವಹಿಸಿ ಶುಂಠಿ ಬೆಳೆ ಬೆಳೆದ ಕೃಷಿಕರಿಗೆ ಉತ್ತಮ ಧಾರಣೆ ಲಭಿಸಿದ್ದರಿಂದ ಲಾಭ ಕೈಗೂಡಿತ್ತು. ಕೊಡಗಿನ ಶುಂಠಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಇಂಡೋನೇಷಿಯಾ, ಆಸ್ಟ್ರೇಲಿಯಾ, ಶ್ರೀಲಂಕಾ, ಅರಬ್ ದೇಶಗಳಲ್ಲಿ ಭಾರತದ ಶುಂಠಿಯನ್ನು ರಫ್ತು ಮಾಡಲಾಗುತ್ತಿದೆ. ಶುಂಠಿಯನ್ನು ಆರ್ಯುವೇದ ಜೌಷಧಿ ತಯಾರಿಸಲು ಬಳಕೆ ಮಾಡುವುದರಿಂದ ಬೇಡಿಕೆ ಹೆಚ್ಚಾಗಿದೆ. ಆದರೆ ಶುಂಠಿಯ ದರ ಆಗ್ಗಿಂದಾಗ್ಗೆ ಏರುಪೇರಾಗುತ್ತಿದ್ದು, ನಿಶ್ಚಿತದರ ಮಾರುಕಟ್ಟೆಯಲ್ಲಿ ನಿಲ್ಲದೆ ಇರುವುದರಿಂದ ರೈತರು ಗೊಂದಲ ಕ್ಕೀಡಾಗಿದ್ದಾರೆ. ಈ ವರ್ಷ ನಿರೀಕ್ಷಿತ ದರಕ್ಕಿಂತ ಅಧಿಕ ದರ ಶುಂಠಿಗೆ ಲಭಿಸಿರುವುದರಿಂದ ರೈತರು ಶುಂಠಿ ಕೃಷಿಯತ್ತ ಮುಖ ಮಾಡಿದ್ದಾರೆ.

ಭತ್ತಕ್ಕೆ ಉತ್ತಮ ಬೆಲೆ ಸಿಗುತ್ತಿಲ್ಲ ಎಂಬ ಕೂಲಿ ಕಾರ್ಮಿಕರ ಸಮಸ್ಯೆ ಒಂದೆಡೆಯಾದರೆ, ಭತ್ತ ಕೃಷಿ ನಿಶ್ಚಿತದರ ಮಾರುಕಟ್ಟೆಯಲ್ಲಿ ನಿಲ್ಲದೆ ಇರುವುದರಿಂದ ರೈತರು ಗೊಂದಲ ಕ್ಕೀಡಾಗಿದ್ದಾರೆ. ಈ ವರ್ಷ ನಿರೀಕ್ಷಿತ ದರಕ್ಕಿಂತ ಅಧಿಕ ದರ ಶುಂಠಿಗೆ ಲಭಿಸಿರುವುದರಿಂದ ರೈತರು ಶುಂಠಿ ಕೃಷಿಯತ್ತ ಮುಖ ಮಾಡಿದ್ದಾರೆ.

ಭತ್ತಕ್ಕೆ ಉತ್ತಮ ಬೆಲೆ ಸಿಗುತ್ತಿಲ್ಲ ಎಂಬ ಕೂಲಿ ಕಾರ್ಮಿಕರ ಸಮಸ್ಯೆ ಒಂದೆಡೆಯಾದರೆ, ಭತ್ತ ಕೃಷಿ