ಮಡಿಕೇರಿ, ಮಾ. 8: ಇತ್ತೀಚಿಗೆ ವಿವಿಧೆಡೆ ನಡೆದ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಮೇಲಿಂದ ಮೇಲೆ ವಿಜಯ ಸಾಧಿಸುವುದರ ಮೂಲಕ ಸತತವಾಗಿ ನಾಲ್ಕು ಪ್ರಥಮ ಸ್ಥಾನವನ್ನು ಮೂರ್ನಾಡಿನ ಪದವಿ ಕಾಲೇಜು ಗಳಿಸಿದೆ. ಇತ್ತೀಚೆಗೆ ನಡೆದ ಬ್ಲೇಜ್ ಹಾಕಿ ಪಂದ್ಯಾವಳಿ, ದಕ್ಷಿಣ ವಲಯ ಹಾಕಿ ಪಂದ್ಯ, ಮೈಸೂರಿನ ಸೇಪಿಯಾನ್ ಕಪ್ ಹಾಗೂ ಮೈಸೂರಿನಲ್ಲಿ ನಡೆದ ಮೈಕಾ ಕಪ್ ಈ ಪಂದ್ಯಾವಳಿಗಳಲ್ಲಿ ಪ್ರತಿಷ್ಠಿತ ತಂಡಗಳೊಂದಿಗೆ ಸೆಣೆಸಾಡಿ ಪ್ರಥಮ ಸ್ಥಾನ ಪಡೆದ ಸಂತೋಷಕ್ಕಾಗಿ ಮೂರ್ನಾಡು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು, ಪ್ರಾಂಶು ಪಾಲರು ಹಾಗೂ ಉಪನ್ಯಾಸಕ ವರ್ಗದವರು ವಿದ್ಯಾರ್ಥಿಗಳ ಈ ಸಾಧನೆಗೆ ಮೆಚ್ಚಿ ವಿಜಯೋತ್ಸವವನ್ನು ಆಚರಿಸಿದರು.

ಹಾಕಿಪಟುಗಳ ಪೋಷಕರನ್ನು ಆಹ್ವಾನಿಸಿದ್ದು ವಿಶೇಷವಾಗಿತ್ತು. ಮುಖ್ಯ ಅತಿಥಿಗಳಾಗಿ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪಾಲ್ಗೊಂಡಿದ್ದರು.

ಮತ್ತೊಬ್ಬ ಅತಿಥಿಗಳಾದ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ದಾ. ಜೆರಾಲ್ಡ್ ಸಂತೋಷ್ ಡಿಸೋಜ ಅವರು ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಂಡವನ್ನು ತರಬೇತುಗೊಳಿಸಿದ್ದ ಕಾಲೇಜಿನ ದೈಹಿಕ ನಿರ್ದೇಶಕರಾದ ಕಂಬೀರಂಡ ಬೋಪಣ್ಣ ಹಾಗೂ ಸಹ ತರಬೇತುದಾರ ಉಪನ್ಯಾಸಕ ನೆರ್ಪಂಡ ಹರ್ಷ ಮಂದಣ್ಣ ಅವರನ್ನು ದಾನಿಗಳಾದ ಕಮಲು ಮುದ್ದಯ್ಯ ಅವರ ನೇತೃತ್ವದಲ್ಲಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ಅವರು ಮಾತನಾಡಿದರು. ಕಾರ್ಯಕ್ರಮ ದಲ್ಲಿ ಭಾಗಿಯಾದ ಸರ್ವರಿಗೂ ವಿಶೇಷ ಭೋಜನ ಏರ್ಪಡಿಸ ಲಾಗಿತ್ತು. ಹರ್ಷ ಮಂದಣ್ಣ ಸ್ವಾಗತಿಸಿ, ಹರೀಶ್ ಕಿಗ್ಗಾಲು ಹಾಗೂ ಕಲ್ಪನಾ ನಿರೂಪಿಸಿ, ವಿಲ್ಮಾ ವಂದಿಸಿದರು ಎಂದು ಕಾಲೇಜಿನ ಪ್ರಾಂಶುಪಾಲ ಪೆÇ್ರ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.