ವೀರಾಜಪೇಟೆ, ಮಾ. 7: ಸರಕಾರದಿಂದ ಕೈಗೊಳ್ಳುವ ಜನಪರ ಕಾಮಗಾರಿಗಳಿಗೆ ಜನತೆ ಪರಸ್ಪರ ಸಹಕರಿಸಬೇಕು. ಸರಕಾರದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ತೆರವು ಮಾಡಿ ಕೊಟ್ಟು ಕಾಮಗಾರಿ ವಿಳಂಬವಾಗದ ರೀತಿಯಲ್ಲಿ ಸಹಕರಿಸುವಂತಾಗಬೇಕು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನೆಹರೂ ನಗರದ ಏಳನೇ ವಾರ್ಡ್‍ನಲ್ಲಿ ತಡೆಗೋಡೆ ನಿರ್ಮಾಣಕ್ಕಾಗಿ ರೂ. 46ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಅವರು ರಸ್ತೆ ನಿರ್ಮಾಣ, ಕುಡಿಯುವ ನೀರು ಸೇರಿದಂತೆ ವಿವಿಧ ಜನಪರ ವೀರಾಜಪೇಟೆ, ಮಾ. 7: ಸರಕಾರದಿಂದ ಕೈಗೊಳ್ಳುವ ಜನಪರ ಕಾಮಗಾರಿಗಳಿಗೆ ಜನತೆ ಪರಸ್ಪರ ಸಹಕರಿಸಬೇಕು. ಸರಕಾರದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ತೆರವು ಮಾಡಿ ಕೊಟ್ಟು ಕಾಮಗಾರಿ ವಿಳಂಬವಾಗದ ರೀತಿಯಲ್ಲಿ ಸಹಕರಿಸುವಂತಾಗಬೇಕು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನೆಹರೂ ನಗರದ ಏಳನೇ ವಾರ್ಡ್‍ನಲ್ಲಿ ತಡೆಗೋಡೆ ನಿರ್ಮಾಣಕ್ಕಾಗಿ ರೂ. 46ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಅವರು ರಸ್ತೆ ನಿರ್ಮಾಣ, ಕುಡಿಯುವ ನೀರು ಸೇರಿದಂತೆ ವಿವಿಧ ಜನಪರ ಮಾತನಾಡಿ ಕಳೆದ ಮಳೆಗಾಲದ ಸಮಯದಲ್ಲಿ ಭಾರೀ ಮಳೆಯ ಪರಿಣಾಮ ಮೊಗರಗಲ್ಲಿಯ ತೋಡಿನ ಮೇಲ್ಭಾಗದಲ್ಲಿ ತಡೆಗೋಡೆ ಬಿರುಕುಗೊಂಡು ಆಜು ಬಾಜಿನ ನಿವಾಸಿಗಳಿಗೆ ಆತಂಕ ಸೃಷ್ಟಿಸಿತ್ತು. ಜಿಲ್ಲಾಧಿಕಾರಿ, ಶಾಸಕರ ಖುದ್ದು ಭೇಟಿಯ ನಂತರ ಸರಕಾರ ಅನುದಾನ ಬಿಡುಗಡೆ ಮಾಡಿತ್ತು.

ಇದಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಾನೂನು ಬದ್ಧವಾಗಿ ಟೆಂಡರ್ ಕರೆದು ಭೂಮಿಪೂಜೆ ನೆರವೇರಿಸಲಾಗುತ್ತಿದೆ. ತಡೆಗೋಡೆಯಿಂದ ಜಖಂಗೊಂಡ ಹಾನಿಗೊಂಡವರಿಗೂ ಸರಕಾರದಿಂದ ಪರಿಹಾರ ಕಲ್ಪಿಸಲಾಗಿದೆ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಎಸ್.ಹೆಚ್. ಮತೀನ್, ಮಹಮ್ಮದ್ ರಾಫಿ, ಆಶಾ ಸುಬ್ಬಯ್ಯ, ಸುನೀತಾ ಜೂನಾ, ರಜನಿಕಾಂತ್, ಜಲೀಲ್ ಮಹದೇವ್ ಇತರ ಸದಸ್ಯರುಗಳು ಹಾಗೂ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಕಿರಿಯ ಅಭಯಂತರ ಎನ್.ಪಿ. ಹೇಮ್‍ಕುಮಾರ್ ಹಾಜರಿದ್ದರು.